ಉಡುಪಿ: ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ 90ನೇ ಜನ್ಮವರ್ಧಂತಿ ಸದವಸರದಲ್ಲಿ ಅಂಬಲಪಾಡಿಯಲ್ಲಿರುವ ಅವರ ಸ್ವಗೃಹ ಈಶಾವಾಸ್ಯಂ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ "ತತ್ವಪ್ರದೀಪ" ಧ್ಯಾನ ಮಂದಿರದ ಉದ್ಘಾಟನೆ ಭಾನುವಾರ ಸಂಜೆ ನೆರವೇರಿತು.
ಶ್ರೀ ಕ್ಷೇತ್ರ ಅಂಬಲಪಾಡಿಯ ಆಡಳಿತ ಧರ್ಮದರ್ಶಿ ಡಾ ನಿ ಬೀ ವಿಜಯ ಬಲ್ಲಾಳರು ದೀಪಬೆಳಗಿಸಿ ಉದ್ಘಾಟಿಸಿ ಡಾ ಬನ್ನಂಜೆ ಆಚಾರ್ಯರನ್ನು ಸ್ಮರಣೆಗೈದರು. ವಿದ್ವಾನ್ ಕೃಷ್ಣರಾಜ ಆಚಾರ್ಯ ಕುತ್ಪಾಡಿಯವರು ಧಾರ್ಮಿಕ ಉಪನ್ಯಾಸ ಮಂಡಿಸಿದರು.
ವಿದ್ವಾನ್ ಹೆರ್ಗ ರವೀಂದ್ರ ಭಟ್, ಹೆರ್ಗ ಹರಿಪ್ರಸಾದ್ ಭಟ್ ಇಂಜಿನಿಯರ್ ರಮೇಶ್ ರಾವ್ ಬೀಡು, ಕೆ ಪ್ರಸಾದ್ ಉಪಾಧ್ಯಾಯ ಮೊದಲಾದವರು ಉಪಸ್ಥಿತರಿದ್ದರು. ವಿನಯಭೂಷಣ ಆಚಾರ್ಯರು ಸ್ವಾಗತ/ ಪ್ರಸ್ತಾವನೆಗೈದರು.
ಶ್ರೀಮತಿ ವಾರಿಜಾಕ್ಷಿ ಆರ್ ಭಟ್ ಮತ್ತು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಅಭಿರಾಮ ತಂತ್ರಿ ವಂದಿಸಿದರು. ನೂತನ ಧ್ಯಾನ ಮಂದಿರದಲ್ಲಿ ಉಡುಪಿ ಶ್ರೀಕೃಷ್ಣ, ಶ್ರೀ ವೇದವ್ಯಾಸ, ಶ್ರೀ ಮಧ್ವಾಚಾರ್ಯರು ಹಾಗೂ ಗೋವಿಂದಾಚಾರ್ಯರ ಪ್ರತಿಮೆ ಸ್ಥಾಪಿಸಲಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

