ಧರ್ಮತ್ತಡ್ಕ: ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕ ದಲ್ಲಿ ಎಸ್ ಪಿ ಸಿ ವಿದ್ಯಾರ್ಥಿಗಳ ಓಣಂ ತ್ರಿದಿನ ಶಿಬಿರದ ಔಪಚಾರಿಕ ಉದ್ಘಾಟನಾ ಸಮಾರಂಭ ಜರಗಿತು.
ಪ್ರಸ್ತುತ ಸಭೆಯ ಅಧ್ಯಕ್ಷತೆಯನ್ನು ಪುತ್ತಿಗೆ ಪಂಚಾಯತು ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ ನೆರವೇರಿಸಿ ಮಾತನಾಡುತ್ತಾ ಯೂನಿಟ್ ನಲ್ಲಿರುವ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿ ಶಿಸ್ತಿನಿಂದ ಇತರರಿಗೆ ಮಾದರಿಯಾಗಬೇಕು ಎಂದರು.
ಎಸ್ ಪಿ ಸಿ ವಿದ್ಯಾರ್ಥಿಗಳ ಓಣಂ ಮೂರುದಿನಗಳ ಕ್ಯಾಂಪ್ ನ ಉದ್ಘಾಟನೆಯನ್ನು ಬದಿಯಡ್ಕ ಆರಕ್ಷಕ ಠಾಣೆಯ ಎಸ್. ಐ ಯಾಗಿರುವ ಅಖಿಲ್ ಟಿ ದೀಪ ಬೆಳಗಿಸಿ ಉದ್ಘಾಟಿಸಿ ಎಸ್ ಪಿ ಸಿ ವಿದ್ಯಾರ್ಥಿಗಳ ಧ್ಯೇಯ ಉದ್ದೇಶಗಳನ್ನು ವಿವರಿಸುತ್ತಾ ವಿದ್ಯಾರ್ಥಿಗಳು ಕಲಿಕೆಯ ಪೂರಕ ಚಟುವಟಿಕೆಯ ಜೊತೆಗೆ ದೈಹಿಕ ಮನೋಧಾರ್ಢ್ಯ ವೃದ್ಧಿಸುವಲ್ಲಿ ಎಸ್ ಪಿ ಸಿ ಅಂತಹ ಯೂನಿಟ್ ಗಳು ಸಹಕಾರಿಯಾಗುತ್ತದೆ ಎಂದರು. ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೌಢ ಶಾಲೆಯ ವ್ಯವಸ್ಥಾಪಕ ಎನ್ ಶಂಕರನಾರಾಯಣ ಭಟ್, ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶಶಿಕುಮಾರ್ ಪಿ, ರಕ್ಷಕ ಶಿಕ್ಷಕ ಸಮಿತಿಯ ಅಧ್ಯಕ್ಷ ಅಶೋಕ್ ಭಂಡಾರಿ, ಮಾತೃ ಮಂಡಳಿ ಅಧ್ಯಕ್ಷೆ ದಿವ್ಯಾ ಭಾರತಿ ಶುಭಹಾರೈಸಿ ಮಾತನಾಡಿದರು.
ಬದಿಯಡ್ಕ ಠಾಣೆಯ ಆರಕ್ಷಕರಾದ ರಜೀಶ್, ಪ್ರಸೀತಾ ಕ್ಯಾಂಪಿನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಈಶ್ವರಿ ಡಿ ಸ್ವಾಗತಿಸಿ, ಪ್ರಶಾಂತ ಹೊಳ್ಳ ಎನ್ ನಿರೂಪಿಸಿ, ಶಿವಪ್ರಸಾದ್ ಸಿ ವಂದಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿದ್ಯಾರ್ಥಿಗಳ ಮೂಲಭೂತ ಮೌಲ್ಯಗಳ ಕುರಿತ ತರಗತಿಯನ್ನು ಪ್ರೌಢಶಾಲೆಯ ಶಿಕ್ಷಕರಾದ ಅಭಿಲಾಷ್ ಪೆರ್ಲ ಮತ್ತು ಪ್ರಶಾಂತ ಹೊಳ್ಳ ನೆರವೇರಿಸಿದರು.
ಮಧ್ಯಾಹ್ನ ನಂತರ ಸಾಮಾಜಿಕ ನೈತಿಕ ಮೌಲ್ಯಗಳ ಕುರಿತ ತರಗತಿಯನ್ನು ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲೆಯ ಎಕನಾಮಿಕ್ಸ್ ಅಧ್ಯಾಪಕ ಸತೀಶ್ ಶೆಟ್ಟಿ ಒಡ್ಡಂಬೆಟ್ಟು ನೆರವೇರಿಸಿದರು.
ಬಳಿಕ ಸದಾಶಿವ ಬಾಲಮಿತ್ರ ಮತ್ತು ಗೋಪಾಲ ಕಾಟುಕುಕ್ಕೆಯವರು ವಿವಿಧ ಆಟೋಟಗಳ ಮನೋರಂಜನಾತ್ಮಕ ತರಗತಿಯನ್ನು ನಡೆಸಿ ಕೊಟ್ಟರು.
ಶಿಬಿರದ ಪ್ರಾರಂಭದ ದಿನದ ಕೊನೆಗೆ ಆರಕ್ಷಕರಾದ ರಜೀಶ್ ಮತ್ತು ಪ್ರಸೀತಾ ಅವರು ಡ್ರಿಲ್ ತರಗತಿಯನ್ನು ನಡೆಸಿಕೊಟ್ಟರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ