ಜೀವವೈವಿಧ್ಯದ ಸಂರಕ್ಷಣೆಯಲ್ಲಿದೆ ಸುಸ್ಥಿರ ಪರಿಸರದ ಭವಿಷ್ಯ: ಅಭಿಲಾಷ್ ಕೆ.ಎಸ್.

Upayuktha
0

 


ಉಜಿರೆ: ಜೀವವೈವಿಧ್ಯವು ಪ್ರಕೃತಿಯ ಸಮತೋಲನಕ್ಕೆ ಅತ್ಯಂತ ಆವಶ್ಯಕ ಅಂಶವಾಗಿದ್ದು, ಜೀವವೈವಿಧ್ಯದ ಸಂರಕ್ಷಣೆಯಿಂದ ಭವಿಷ್ಯದಲ್ಲಿ ಸುಸ್ಥಿರವಾದ ಪರಿಸರವನ್ನು ಉಳಿಸಲು ಸಾಧ್ಯ ಎಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ.ಎಸ್. ಹೇಳಿದರು.


ಕಾಲೇಜಿನಲ್ಲಿ ಜು.31ರಂದು ಎನ್.ಸಿ.ಸಿ. ಭೂದಳ ಆಯೋಜಿಸಿದ್ದ ‘ಸುಸ್ಥಿರ ಪರಿಸರಕ್ಕಾಗಿ ಜೀವವೈವಿಧ್ಯದ ಸಂರಕ್ಷಣೆ’ ಮತ್ತು ‘ಭಾರತದ ಪಾಳುಭೂಮಿಯ ಹಸುರೀಕರಣ’ ಕುರಿತ ಉಪನ್ಯಾಸ ಕಾರ್ಯಕ್ರಮ ಮತ್ತು ಸಸಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


 ಜೀವವೈವಿಧ್ಯ ಎಂದರೆ ನಾನಾ ವಿಧದ ಸಸ್ಯಗಳು, ಪ್ರಾಣಿಗಳು ಮತ್ತು ಜೀವಿಗಳ ಸಮೃದ್ಧಿಯಾಗಿದೆ. ಪ್ರಾಣಿಗಳು ಮತ್ತು ಸಸ್ಯಗಳನ್ನು ಅದರ ಮೂಲ ವಾಸಸ್ಥಳದಲ್ಲಿಯೇ ರಕ್ಷಿಸುವುದು ಉತ್ತಮ. ರಾಷ್ಟ್ರೀಯ ಉದ್ಯಾನ ಹಾಗೂ ಮೀಸಲು ಅರಣ್ಯಗಳಲ್ಲಿ ಈ ಕ್ರಮವನ್ನು ಕಾಣಬಹುದು. ಇದಲ್ಲದೆ, ಮೂಲ ನೈಸರ್ಗಿಕ ವಾಸಸ್ಥಳದಿಂದ ಹೊರಗೆ (ಮೃಗಾಲಯ, ಸಸ್ಯೋದ್ಯಾನ ಮತ್ತು ಬೀಜ ಸಂರಕ್ಷಣಾ ಕೇಂದ್ರ) ರಕ್ಷಿಸುವ ಮೂಲಕವೂ ಭೂಮಿಯ ಜೀವಜಾಲವನ್ನು ಭದ್ರಪಡಿಸಬಹುದು ಎಂದು ಅವರು ತಿಳಿಸಿದರು.


 ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ, ಎನ್ ಸಿ ಸಿ ಆರ್ಮಿ ಘಟಕದ ನಿಕಟಪೂರ್ವ ಮುಖ್ಯಸ್ಥ ಕ್ಯಾಪ್ಟನ್ ಗಜಾನನ ಆರ್. ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿಯಲ್ಲಿರುವ ವಿಭಿನ್ನ ಜಾತಿಯ ಸಸ್ಯಗಳು, ಪ್ರಾಣಿಗಳು ಮತ್ತು ಸಣ್ಣ ಜೀವಿಗಳನ್ನು ಉಳಿಸಿಕೊಳ್ಳಬೇಕು ಎಂದರು.


“ಜೀವವೈವಿಧ್ಯದ ಸಂರಕ್ಷಣೆ ನಿಸರ್ಗದ ಸಮತೋಲನಕ್ಕೆ ಬಹಳ ಮುಖ್ಯವಾಗಿದೆ. ಎಲ್ಲರೂ ಸಾಲುಮರದ ತಿಮ್ಮಕ್ಕ ಆಗಲು ಸಾಧ್ಯವಿಲ್ಲ. ಆದರೆ ಅವರ ಕ್ರಮವನ್ನು ಅನುಸರಿಸಿ ಸಸಿಗಳನ್ನು ನೆಟ್ಟು ಮಾದರಿಯಾಗಬಹುದು” ಎಂದು ಸಲಹೆ ನೀಡಿದರು. 


ಇದೇ ಸಂದರ್ಭದಲ್ಲಿ ಎನ್‌.ಸಿ.ಸಿ. ಕೆಡೆಟ್ ಗಳಿಗೆ 150 ಬೀಜದ ಉಂಡೆಗಳು ಮತ್ತು ಸಸಿಗಳನ್ನು ವಿತರಿಸಲಾಯಿತು.


ಎನ್ ಸಿ ಸಿ ಆರ್ಮಿ ಘಟಕದ ಮುಖ್ಯಸ್ಥ ಲೆಫ್ಟಿನೆಂಟ್ ಡಾ. ಭಾನುಪ್ರಕಾಶ್ ಬಿ.ಇ., ಕೇರ್ ಟೇಕಿಂಗ್ ಆಫೀಸರ್ ಶೋಭಾ ಎಸ್. ಹಾಗೂ ಆರ್ಮಿ, ನೇವಿ ಕೆಡೆಟ್ಸ್ ಉಪಸ್ಥಿತರಿದ್ದರು.



ಕಾರ್ಪೊರಲ್ ಉನ್ನತಿ ಸ್ವಾಗತಿಸಿ, ಕೆಡೆಟ್ ಮನ್ವಿತಾ ವಂದಿಸಿದರು. ಕಾರ್ಪೊರಲ್ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top