ವಿಜ್ಞಾನ ಬರವಣಿಗೆ ಕುರಿತು ವಿದ್ಯಾರ್ಥಿಗಳು ಗಮನ ಹರಿಸಿ: ಡಾ. ಭಾಸ್ಕರ ಹೆಗಡೆ

Upayuktha
0

ಸಂಖ್ಯಾಶಾಸ್ತ್ರ ವಿಭಾಗದ ಶೈಕ್ಷಣಿಕ ಚಟುವಟಿಕೆ ಮತ್ತು ‘ಸಾಂಖ್ಯ’ ಸಂಘ ಉದ್ಘಾಟನೆ



ಉಜಿರೆ: ವಿಜ್ಞಾನ ವಿಷಯಗಳ ಬಗ್ಗೆ ಪತ್ರಿಕೆಗಳಿಗೆ ಬರೆಯುವವರು ಕಡಿಮೆಯಾಗುತ್ತಿದ್ದು, ವಿಜ್ಞಾನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದು ಉಜಿರೆಯ ಶ್ರೀ ಧ.ಮಂ. ಕಾಲೇಜಿನ ಕಲಾ ನಿಕಾಯದ ಡೀನ್ ಹಾಗೂ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಹೇಳಿದರು.

 

ಕಾಲೇಜಿನಲ್ಲಿ ಜು.25ರಂದು ಅವರು ಸಂಖ್ಯಾಶಾಸ್ತ್ರ ವಿಭಾಗದ ಪ್ರಸಕ್ತ ಸಾಲಿನ ಶೈಕ್ಷಣಿಕ ಚಟುವಟಿಕೆ ಮತ್ತು ‘ಸಾಂಖ್ಯ’ ಸಂಘ ಉದ್ಘಾಟಿಸಿ ಮಾತನಾಡಿದರು.

 

ವಿಜ್ಞಾನ, ವಾಣಿಜ್ಯ ಕ್ಷೇತ್ರದ ವಿಷಯಗಳ ಬಗ್ಗೆ ಬರೆಯುವವರು ಬಹಳ ಕಡಿಮೆಯಾಗುತ್ತಿದ್ದಾರೆ. ವಿಜ್ಞಾನ ಪರಿಣತರೂ ಬರೆಯಲು ಮುಂದೆ ಬರುತ್ತಿಲ್ಲ. ಈ ಕುರಿತಂತೆ ಇರುವ ಹೇರಳ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

 

ಭಿತ್ತಿಪತ್ರಿಕೆಗಳು ಒಂದು ವಿಭಾಗದ ಕನ್ನಡಿಯಿದ್ದಂತೆ. ಇವುಗಳು ಕಾಲೇಜಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಿತ್ತಿಪತ್ರಿಕೆ ಮಾಡುವಾಗ ಯಾವ ವಿಷಯಗಳನ್ನು ಬರೆಯಬೇಕು ಎಂಬುದು ಬಹಳ ಮುಖ್ಯವಾಗಿರುತ್ತದೆ. ಯಾವ ವಿಷಯಗಳನ್ನು ಬರೆದರೆ ಓದುಗರು ಓದುತ್ತಾರೆ ಎಂದು ನಿರ್ಣಯ ಮಾಡಬೇಕಾಗುತ್ತದೆ. ತಯಾರಿಸುವಾಗ ಎಲ್ಲರನ್ನೂ ಸೆಳೆಯುವಂತೆ ಬರೆಯಬೇಕು. ಇವೆಲ್ಲವನ್ನೂ ಒಳಗೊಂಡು ಭಿತ್ತಿಪತ್ರಿಕೆಗಳನ್ನು ತಯಾರಿಸಿದರೆ ಅವು ನಮ್ಮ ಜೀವನವನ್ನೇ ಬದಲಿಸಬಹುದು ಎಂದು ಸಲಹೆ ನೀಡಿದರು.

 

"ಅಸೋಸಿಯೇಶನ್ ಎನ್ನುವಂಥದ್ದು ಕೇವಲ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಕಾಲೇಜಿನ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಆಗಬೇಕು. ಕಾಲೇಜಿನಲ್ಲಿ ರೇಡಿಯೋ, ಮನೀಷಾ ವಾರ್ಷಿಕ ಸಂಚಿಕೆಯಂತಹ ಹಲವು ಅವಕಾಶಗಳಿವೆ. ಅವುಗಳನ್ನು ವಿಜ್ಞಾನ ವಿಭಾಗದ ಮಕ್ಕಳು ಉಪಯೋಗಿಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳನ್ನು ಬರಹದ ರೂಪದಲ್ಲಿ ತಂದರೆ ಬಹಳ ಉತ್ತಮವಾದ ಅವಕಾಶಗಳು ನಮ್ಮ ಕಾಲೇಜಿನಲ್ಲಿಯೇ ಇವೆ" ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜ್ಞಾನ ನಿಕಾಯದ ಡೀನ್ ಹಾಗೂ ಸಂಖ್ಯಾಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಸವಿತಾ ರಾವ್ ಅವರು, ವಿಭಾಗದ ಬಗ್ಗೆ ಮಾಹಿತಿ ಹಂಚಿಕೊಂಡರು.


ಈ ಸಂದರ್ಭದಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಭಿತ್ತಿಪತ್ರಿಕೆ ‘ಸಾಂಖ್ಯ’ದ ನೂತನ ಸಂಚಿಕೆ ಅನಾವರಣಗೊಳಿಸಲಾಯಿತು.

 

ವೇದಿಕೆಯಲ್ಲಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮಂಜುಳ, ಸಾಂಖ್ಯ ಸಂಘದ ಅಧ್ಯಕ್ಷೆ ಹಜಿರ ಹಾಗೂ ಕಾರ್ಯದರ್ಶಿ ಮಧುರ ಉಪಸ್ಥಿತರಿದ್ದರು.

 

ಪ್ರತೀಕ್ಷಾ ಸ್ವಾಗತಿಸಿದರು. ನಿಕಿತಾ ಮತ್ತು ತಂಡದವರು ಪ್ರಾರ್ಥಿಸಿದರು. ಭೂಮಿಕಾ ವಂದಿಸಿದರು. ನಿತ್ಯ ಜೈನ್ ಕಾರ್ಯಕ್ರಮ ನಿರೂಪಿಸಿದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top