ತೆಂಕನಿಡಿಯೂರು ಕಾಲೇಜಿನಲ್ಲಿ ಡಿ.ದೇವರಾಜ ಅರಸ್ ಜನ್ಮದಿನಾಚರಣೆ

Chandrashekhara Kulamarva
0


ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಆಶ್ರಯದಲ್ಲಿ ಸಾಮಾಜಿಕ ನ್ಯಾಯ  ಪರಿವರ್ತನೆಯ ಹರಿಕಾರ ಡಿ. ದೇವರಾಜ್ ಅರಸ್ ಜನ್ಮದಿನಾಚರಣೆ ಆಚರಿಸಲಾಯಿತು. 


ದೇವರಾಜ್ ಅರಸರ ಜೀವನ ಮತ್ತು ಸಾಧನೆಗಳ ಕುರಿತಾಗಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರಶಾಂತ್ ನೀಲಾವರ ಅರಸ್ ರಾಜಕಾರಣ ಎಲ್ಲರನ್ನು ಒಳಗೊಳ್ಳುವ ಸಮಷ್ಟಿಯ ಚಿಂತನೆಯ ಸಮಾಜ ಸೇವೆಯಾಗಿತ್ತು; ಭೂಸುಧಾರಣೆ, ಮೀಸಲಾತಿ ಮತ್ತು ಹಿಂದುಳಿದವರ ಶಿಕ್ಷಣಕ್ಕೆ ಒತ್ತು ನೀಡಿ ಸಾಮಾಜಿಕ ನ್ಯಾಯವನ್ನು ವಾಸ್ತವಗೊಳಿಸಿ ಕರ್ನಾಟಕದಲ್ಲಿ ಕ್ರಾಂತಿಕಾರಕ ಪರಿವರ್ತನೆಗೆ ಕಾರಣರಾದರು. ಇಂದು ಹಿಂದುಳಿದ ವರ್ಗಗಳು ಪಡೆಯುತ್ತಿರುವ ಅನೇಕ ಸೌಲಭ್ಯಗಳಿಗೆ ಅರಸರವರು ಹಾಕಿಕೊಟ್ಟ ಬುನಾದಿಯೇ ಕಾರಣ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ ಸಮಾನತೆಯ ಕನಸನ್ನು ನನಸಾಗಿಸುವಲ್ಲಿ ದೇವರಾಜ ಅರಸ್ ರ ಕೊಡುಗೆಗಳನ್ನು ಸ್ಮರಿಸಿದರು.


ಗ್ರಂಥಪಾಲಕರಾದ ಕ್ರಷ್ಣ ಸಾಸ್ತಾನ ಹಾಗೂ ಬೋಧಕ - ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥರಾದ ರತ್ನಮಾಲಾ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top