ಪ್ರತಿಭಾನ್ವೇಷಣೆ ಪರೀಕ್ಷೆ: ಆಕಾಶ್‍ನಿಂದ 250 ಕೋಟಿ ಮೌಲ್ಯದ ವಿದ್ಯಾರ್ಥಿವೇತನ

Upayuktha
0


ಮಂಗಳೂರು: ವಿದ್ಯಾರ್ಥಿಗಳ ಆಕಾಂಕ್ಷೆಗಳನ್ನು ಸಾಧನೆಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (ಎಇಎಸ್‍ಎಲ್), ಅಂಥೆ- 2025 (ಆಕಾಶ್ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ-ANTHE) ಅನ್ನು ಪ್ರಾರಂಭಿಸಿದೆ. 5ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳು ಸವಾಲುಗಳನ್ನು ಮೀರಿ ಬೆಳೆಯಲು ಮತ್ತು ನಿಜವಾದ ಸಮಸ್ಯೆ ಪರಿಹಾರಕರಾಗಿ ಹೊರಹೊಮ್ಮಲು ಸಬಲೀಕರಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.


ಗುಣಮಟ್ಟದ ಶಿಕ್ಷಣ ಕೈಗೆಟುಕುವಂತೆ ಮಾಡಲು ಆಕಾಶ್ ತನ್ನ ಡಿಜಿಟಲ್ ಮತ್ತು ಇನ್ವಿಕ್ಟಸ್ ಕೋರ್ಸ್‍ಗಳಿಗೆ ಒಟ್ಟು ರೂ. 250 ಕೋಟಿ ಮೌಲ್ಯದ ಶೇಕಡ 100 ವಿದ್ಯಾರ್ಥಿ ವೇತನವನ್ನು ನೀಡುತ್ತದೆ, ಜೊತೆಗೆ 2.5 ಕೋಟಿ ಮೌಲ್ಯದ ನಗದು ಪ್ರಶಸ್ತಿಗಳನ್ನು ನೀಡುತ್ತದೆ, ಜೊತೆಗೆ ವಿದ್ಯಾರ್ಥಿಗಳು ವೈದ್ಯಕೀಯ ಅಥವಾ ಎಂಜಿನಿಯರಿಂಗ್‍ನಲ್ಲಿ ಯಶಸ್ವಿ ವೃತ್ತಿಜೀವನದ ಕನಸುಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ಆಕಾಶ್‍ನ ತಜ್ಞ ಅಧ್ಯಾಪಕರು ನೀಡುವ ನೀಟ್, ಜೆಇಇ, ರಾಜ್ಯ ಸಿಇಟಿಗಳು, ಎನ್‍ಟಿಎಸ್‍ಇ ಮತ್ತು ಒಲಿಂಪಿಯಾಡ್‍ಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮ ತರಬೇತಿಯನ್ನು ಪಡೆಯಲು ಬಾಗಿಲು ತೆರೆಯುತ್ತದೆ ಎಂದು ಎಇಎಸ್‍ಎಲ್ ಸಿಇಒ ಮತ್ತು ಎಂಡಿ ದೀಪಕ್ ಮೆಹ್ರೋತ್ರಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಜತೆಗೆ ಆಕಾಶ್ 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಆಕಾಶ್ ಇನ್ವಿಕ್ಟಸ್ ಜೆಇಇ ಅಡ್ವಾನ್ಸ್ಡ್ ತಯಾರಿ ಕಾರ್ಯಕ್ರಮಕ್ಕೆ ಪ್ರವೇಶಕ್ಕಾಗಿ ವಿದ್ಯಾರ್ಥಿವೇತನ ಪರೀಕ್ಷೆಯಾದ ಇನ್ವಿಕ್ಟಸ್ ಏಸ್ ಪರೀಕ್ಷೆಯನ್ನು ಸಹ ಪ್ರಾರಂಭಿಸುತ್ತಿದೆ. ರಾಷ್ಟ್ರೀಯ ಮಟ್ಟದ ಅರ್ಹತಾ-ಕಮ್-ವಿದ್ಯಾರ್ಥಿವೇತನ ಪರೀಕ್ಷೆಯನ್ನು ಆಗಸ್ಟ್ 24, ಆಗಸ್ಟ್ 31 ಮತ್ತು ಸೆಪ್ಟೆಂಬರ್ 7, 2025 ರಂದು ನಡೆಸಲಾಗುವುದು. ಆನ್‍ಲೈನ್ ಮತ್ತು ಆಫ್‍ಲೈನ್ ವಿಧಾನದಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ. ಇದರಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಶೇಕಡ 100ರ ವರೆಗೆ ವಿದ್ಯಾರ್ಥಿ ವೇತನ ಮತ್ತು ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.


ಈ ವರ್ಷದಿಂದ, ಪ್ರತಿಷ್ಠಿತ ಆಕಾಶ್ ಇನ್ವಿಕ್ಟಸ್ ಕೋರ್ಸ್‍ನ ಅಡ್ವಾನ್ಸ್ಡ್ ಜೆಇಇ ತಯಾರಿಗಾಗಿ ವಿದ್ಯಾರ್ಥಿವೇತನ ಮತ್ತು ಪ್ರವೇಶಕ್ಕಾಗಿ ಇನ್ವಿಕ್ಟಸ್ ಏಸ್ ಪರೀಕ್ಷೆಯನ್ನು ನಾವು ಪ್ರಾರಂಭಿಸಲಾಗುತ್ತಿದೆ. ಇದನ್ನು ವಿದ್ಯಾರ್ಥಿಗಳ ಮೂಲ ಪರಿಕಲ್ಪನೆಗಳ ತಿಳಿವಳಿಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. 2025 ರಲ್ಲಿ, 10 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷ ನೀಟ್ ನಲ್ಲಿ ಟಾಪ್ 100 ರಲ್ಲಿ 22 ಜನರು ಮತ್ತು ಜೆಇಇ ಅಡ್ವಾನ್ಸ್ಡ್ 2025 ರಲ್ಲಿ ಟಾಪ್ 100 ರಲ್ಲಿ 10 ಜನರು ಅಂಥೆ ಪ್ರಯೋಜನ ಪಡೆದವರು ಎಂದು ವಿವರಿಸಿದರು.


ಅಂಥೆ 2025 ಗಾಗಿ ನೋಂದಣಿ ಆರಂಭವಾಗಿದ್ದು,<https://anthe.aakash.ac.in/home> ನಲ್ಲಿ ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಅವರ ಹತ್ತಿರದ ಆಕಾಶ್ ಕೇಂದ್ರಕ್ಕೆ ಭೇಟಿ ನೀಡಬಹುದು. ಅಂಥೆ 2025 ರ ಫಲಿತಾಂಶಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು. ಎಲ್ಲ ಫಲಿತಾಂಶಗಳು ಅಧಿಕೃತ ಅಂಥೆ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತವೆ ಎಂದರು. ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ವರುಣ್ ಸೋನಿ, ಸೂರಜ್ ಪ್ರಭು, ಮಂಗಳೂರು ಕೇಂದ್ರದ ಮುಖ್ಯಸ್ಥ ಶ್ಯಾಮ್ ಪ್ರಸಾದ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top