ಈಜು ಸ್ಪರ್ಧೆ: ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Chandrashekhara Kulamarva
0


ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ ಸಂಸ್ಥೆಯ ವಿದ್ಯಾರ್ಥಿಗಳು ಮಂಗಳೂರಿನ ಶಕ್ತಿ ವಸತಿಯುತ ಸಂಸ್ಥೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ವಿದ್ಯಾಭಾರತಿ ಈಜು ಸ್ಪರ್ಧೆಯಲ್ಲಿ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  10ನೇ ತರಗತಿಯ ಸಮೃದ್ಧ್‌ ಎಲ್. ಶೆಟ್ಟಿ ಇವರು 17ರ ವಯೋಮಾನದ ಬಾಲಕರ ವಿಭಾಗದಲ್ಲಿ 100 ಮೀಟರ್ ಫ್ರೀ ಸ್ಟೈಲ್ ಪ್ರಥಮ, 200 ಮೀಟರ್ ಫ್ರೀ ಸ್ಟೈಲ್ ಪ್ರಥಮ ಹಾಗೂ 200 ಮೀಟರ್ ಬ್ಯಾಕ್ ಸ್ಟ್ರೋಕ್‍ನಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.


9ನೇ ತರಗತಿಯ ಅನಿತೇಜ್ ಮಧುಸೂದನ್ ಸಾಲೆ 50 ಮೀ ಬ್ಯಾಕ್ ಸ್ಟ್ರೋಕ್ ಪ್ರಥಮ, 100ಮಿ ಬ್ಯಾಕ್ ಸ್ಟ್ರೋಕ್ ದ್ವಿತೀಯ ಮತ್ತು 800 ಮೀಟರ್ ಫ್ರೀ ಸ್ಟೈಲ್ ದ್ವಿತೀಯ ಸ್ಥಾನ ಹಾಗು 9ನೇ ತರಗತಿಯ ಲಲನ್ ಯು ನಾಯ್ಕ್ 400 ಮೀಟರ್ ಫ್ರೀ ಸ್ಟೈಲ್ ಪ್ರಥಮ 100 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಮತ್ತು 800 ಮೀಟರ್ ಫ್ರೀ ಸ್ಟೈಲ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


17 ವಯೋಮಾನದ ಬಾಲಕಿಯರ ವಿಭಾಗದಲ್ಲಿ 9ನೇ ತರಗತಿಯ ಮೆಹಕ್ ರವಿಕುಮಾರ್ ಕೊಟ್ಟಾರಿ 100ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಪ್ರಥಮ, 100 ಮೀಟರ್ ಬಟರ್ ಫ್ಲೈ ಪ್ರಥಮ ಮತ್ತು 100 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 14 ವಯೋಮಾನದ ಬಾಲಕರ ವಿಭಾಗದಲ್ಲಿ 7ನೇ ತರಗತಿಯ ಪ್ರತ್ಯೂμï ಎಲ್. ಎಸ್ ಗೌಡ 50 ಮೀಟರ್ ಫ್ರೀ ಸ್ಟೈಲ್ ಪ್ರಥಮ 50 ಮೀಟರ್ ಬ್ಯಾಕ್ ಸ್ಟ್ರೋಕ್ ಪ್ರಥಮ ಮತ್ತು 50 ಮೀಟರ್ ಪ್ರಥಮ ಮತ್ತು ಏಳನೇ ತರಗತಿಯ ದಿಪಾಂಶ್ ಶೆಟ್ಟಿ 100 ಮೀಟರ್ ಫ್ರೀ ಸ್ಟೈಲ್ ಪ್ರಥಮ 100 ಮೀಟರ್ ಪ್ರಥಮ ಮತ್ತು 50 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.


14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 7ನೇ ತರಗತಿಯ ರೀಶಾ ಪಿ. ಶೆಟ್ಟಿ 50 ಮೀಟರ್ ಬಟರ್ ಫ್ಲೈ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 17ರ ವಯೋಮಾನ ಬಾಲಕರ ತಂಡ ಮತ್ತು 14 ವಯೋಮಾನದ ಬಾಲಕರ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ ಹಾಗೂ ಆಗಸ್ಟ್ 23ರಂದು ನಡೆಯಲಿರುವ ಪ್ರಾಂತ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top