ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

Upayuktha
0

ಮಧ್ಯಪ್ರದೇಶದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟ



ಪುತ್ತೂರು: ಬನಶಂಕರಿಯ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಈಜು ಸ್ಪರ್ಧೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‍ಇ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಬಹುಮಾನಗಳನ್ನು ತಮ್ಮದಾಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 


10ನೇ ತರಗತಿಯ ಸಮೃದ್ಧ್ ಎಲ್. ಶೆಟ್ಟಿ 100 ಮೀಟರ್ ಫ್ರೀ ಸ್ಟೈಲ್, 200 ಮೀಟರ್ ಫ್ರೀ ಸ್ಟೈಲ್, 200 ಮೀ. ಬ್ಯಾಕ್‍ಸ್ಟ್ರೋಕ್‍ನಲ್ಲಿ ಬೆಳ್ಳಿ ಪದಕ ಮತ್ತು 4x100 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. 9ನೇ ತರಗತಿಯ ವಿದ್ಯಾರ್ಥಿಗಳಾದ ಅನಿತೇಜ್ ಮಧುಸೂದನ ಸಾಲೆ 800 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಬೆಳ್ಳಿ ಹಾಗೂ 50 ಮೀಟರ್ ಬ್ಯಾಕ್‍ಸ್ಟ್ರೋಕ್‍ನಲ್ಲಿ ಕಂಚಿನ ಪದಕ ಪಡೆದರೆ, 7ನೇ ತರಗತಿಯ ಪ್ರತ್ಯುಷ್ಎಲ್.ಎಸ್. ಗೌಡ 50 ಮೀ. ಬ್ಯಾಕ್‍ಸ್ಟ್ರೋಕ್ ಹಾಗೂ 50 ಮೀ. ಬಟರ್‍ಫ್ಲೈಯಲ್ಲಿ ಚಿನ್ನ, 50 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಕಂಚು ಹಾಗೂ 4x100 ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪಡೆದಿದ್ದಾರೆ. ಇದೇ ತರಗತಿಯ ದೀಪಾಂಶ್ ಶೆಟ್ಟಿ 100 ಮೀ. ಬ್ಯಾಕ್‍ಸ್ಟ್ರೋಕ್‍ನಲ್ಲಿ ಬೆಳ್ಳಿ, 100 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಕಂಚು ಹಾಗೂ 4x100 ಮೀಟರ್ ಮಿಡಲ್ ರಿಲೇಯಲ್ಲಿ ಬೆಳ್ಳಿ ಪದಕ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಜತೆಗೆ, ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಒಂಬತ್ತನೇ ತರಗತಿಯ ಲಲನ್ ಯು. ನಾಯಕ್ 400 ಮೀಟರ್ ಫ್ರೀ ಸ್ಟೈಲ್‍ನಲ್ಲಿ ಕಂಚಿನಪದಕÀ ಮತ್ತು 4x100 ಮೀ. ಮಿಡಲ್ ರಿಲೇಯಲ್ಲಿ ಬೆಳ್ಳಿಪದಕ ಪಡೆದಿದ್ದಾರೆ. ಇದೇ ತರಗತಿಯ ಮೆಹಕ್ ರವಿ ಕುಮಾರ ಕೋಠಾರಿ 100 ಮೀಟರ್ ಬ್ಯಾಕ್‍ಸ್ಟ್ರೋಕ್, 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ 100 ಮೀಟರ್ ಬಟರ್ ಫ್ಲೈಯಲ್ಲಿ ಕಂಚಿನ ಪದಕವನ್ನೂ, 4x100 ಮೆಡ್ಲೆ  ರಿಲೇ ಹಾಗೂ 4x100 ಫ್ರೀ ಸ್ಟೈಲ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.


ರಾಜ್ಮಟ್ಟದಿಂದ ಆಯ್ಕೆಯಾ ಸಮೃದ್ಧ ಎಲ್. ಶೆಟ್ಟಿ, ಅನಿತೇಜ್ ಮಧುಸೂದನ್ ಸಾಲೆ, ಪ್ರತ್ಯುಷ್‌ ಎಲ್.ಎಸ್ ಗೌಡ ಮತ್ತು ದೀಪಾಂಶು ಶೆಟ್ಟಿ ಇವರು ನವೆಂಬರ್ ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top