ಸುರತ್ಕಲ್: ಪದವಿ ವ್ಯಾಸಂಗದೊಂದಿಗೆ ವೃತ್ತಿಪರ ಕೋರ್ಸುಗಳನ್ನು ಅಭ್ಯಸಿಸುವುದು ಪ್ರಸ್ತುತ ಶೈಕ್ಷಣಿಕ ಅಗತ್ಯಗಳಲ್ಲಿ ಒಂದಾಗಿದ್ದು ಎ.ಸಿ.ಸಿ.ಎ. ಕೋರ್ಸ್ ಬಿ.ಕಾಂ. ಮತ್ತು ಬಿ.ಬಿ.ಎ.ಯ ವಿದ್ಯಾರ್ಥಿಗಳಿಗೆ ಮುಂದಿನ ವೃತ್ತಿ ಬದುಕಿಗೆ ಸಹಾಯಕವಾಗುತ್ತದೆ ಎಂದು ಮೈ-ಲಾಜಿಕ್‌ನ ಶೈಕ್ಷಣಿಕ ಸಂಯೋಜಕಿ ತೇಜಸ್ವಿ ನುಡಿದರು.
ಅವರು ಹಿಂದು ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಆಡಳಿತಕ್ಕೊಳಪಟ್ಟ ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ವಾಣಿಜ್ಯ ಶಾಸ್ತ್ರ ಮತ್ತು ವ್ಯವಹಾರ ಶಾಸ್ತ್ರ ವಿಭಾಗಗಳು ಪ್ರಥಮ ವರ್ಷದ ಬಿ.ಕಾಂ. ಮತ್ತು ಬಿ.ಬಿ.ಎ. ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಎ.ಸಿ.ಸಿ.ಎ.- ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮೈ-ಲಾಜಿಕ್‌ನ ವಿಶ್ವವಿದ್ಯಾನಿಲಯ ವಲಯ ಮುಖ್ಯಸ್ಥ ಕೌಸ್ತುಭ್ ಪ್ರಕಾಶ್ ಪುತ್ರನ್ ಮಾತನಾಡಿ ಎ.ಸಿ.ಸಿ.ಎ.ಯು ಬಹುಬೇಡಿಕೆಯ ವೃತ್ತಿಪರ ಕೋರ್ಸುಗಳಲ್ಲಿ ಒಂದಾಗಿದ್ದು ವಿದ್ಯಾರ್ಥಿಗಳು ಈ ಕೋರ್ಸಿನ ಅಭ್ಯಾಸದ ಅಗತ್ಯತೆಯ ಬಗ್ಗೆ ಗಮನ ನೀಡಬೇಕೆಂದರು.
ಮುಖ್ಯ ಅತಿಥಿ, ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಭಟ್ ಎಸ್.ಜಿ. ಮಾತನಾಡಿ ಸಾಂಪ್ರದಾಯಿಕ ಪದವಿ ಶಿಕ್ಷಣದೊಂದಿಗೆ ನೂತನ ವೃತ್ತಿಪರ ಕೋರ್ಸುಗಳು ಉದ್ಯೋಗ ಕ್ಷೇತ್ರದಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಹರೀಶ ಆಚಾರ್ಯ ಪಿ. ಮಾತನಾಡಿ, ಗೋವಿಂದ ದಾಸ ಕಾಲೇಜು ವೃತ್ತಿಪರ ಕೋರ್ಸುಗಳಿಗೆ ಮತ್ತು ಕೌಶಲ್ಯ ತರಬೇತಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು.
ದಿಶಾ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯ ಪ್ರವೀಣ್ ಕೆ. ಸ್ವಾಗತಿಸಿದರು. ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರೀದೇವಿ ಧನ್ಯವಾದಗೈದರು.
ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಶಾಸ್ತ್ರ ಸಂಘದ ಸಂಯೋಜಕಿ ಅಪೇಕ್ಷ ಭಂಡಾರಿ, ಉಪನ್ಯಾಸಕರಾದ ಡಾ. ಭಾಗ್ಯಲಕ್ಷ್ಮಿ, ಧನ್ಯಕುಮಾರ್ ವೆಂಕಣ್ಣವರ್ ಮತ್ತು ಪುನೀತ ಕೆ. ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ