ಶ್ರೀಕ್ಷೇತ್ರ ಧರ್ಮಸ್ಥಳ: ದುಷ್ಟರ ಹುನ್ನಾರವನ್ನು ಆಸ್ತಿಕ ಭಕ್ತರು ಗ್ರಹಿಸಲಿ

Upayuktha
0



ರ್ಮಸ್ಥಳ ವಿಚಾರವಾಗಿ ಎಷ್ಟೊಂದು ವೀಡಿಯೋಗಳು ಬಂದವು. ಅವೆಲ್ಲ ಲಕ್ಷಗಳಲ್ಲಿ ವ್ಯೂವ್ ಆಯ್ತು. ಒಂದೊಂದಕ್ಕೂ ಮೂರು ಲಕ್ಷ, ನಾಲ್ಕು ಲಕ್ಷ, ಏಳು ಲಕ್ಷ views ಗಳು ಬಂದಿವೆ.


ಅಗ್ನಿ ಶ್ರೀಧರ್ ದು 'ವೀರೇಂದ್ರ ಹೆಗಡೆ ಕಡುಪಾಪಿ ಮಾನವ' ಎನ್ನುವ ವೀಡಿಯೋ ಅಂತೂ ಹತ್ತು ಲಕ್ಷ ವೀಕ್ಷಣೆಯಾಗಿದೆ. 

ಆದರೆ ಯಾರಾದರೂ ಧರ್ಮಸ್ಥಳದ ಪರವಾಗಿ, ವೀರೇಂದ್ರ ಹೆಗ್ಗಡೆಯವರ ಪರವಾಗಿ ಧರ್ಮಸ್ಥಳ ಕ್ಷೇತ್ರದ ಪರವಾಗಿ ಅಥವಾ ಅಲ್ಲಿನ ನಿಜಾಯತಿಯ ಪರವಾಗಿ ಮಾತನಾಡಿದರೆ ಅದರ views ಒಂದು ಲಕ್ಷವನ್ನೂ ದಾಟುತ್ತಿಲ್ಲ.

 

ನನಗೆ ಒಮ್ಮೊಮ್ಮೆ ಅನ್ನಿಸತ್ತೆ, ನಾವಿನ್ನೂ ಅದೇ ಮೊಘಲರ ಕಾಲದ ಹಿಂದುಗಳೇ ಎಂದು. ಅದೇ ಭಯ, ಅದೇ ಹಿಂಜರಿಕೆ, ಅದೇ ಭಾವುಕತೆ. 


ಅವರು ಆರಂಭದಲ್ಲಿ ಅಷ್ಟೊಂದು ವೀಡಿಯೋಗಳನ್ನು ಮಾಡಿ ಬಿಟ್ಟಾಗ, ಒಬ್ಬರಾದರೂ ಕೌಂಟರ್ ಕೊಟ್ಟು ವೀಡಿಯೋ ಮಾಡಿದರಾ?  ಇಲ್ಲ.

ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ ಎನ್ನುತ್ತೇವಲ್ಲ... ಎಲ್ಲಿ? 

ಹಿಂದುತ್ವ, ಸನಾತನ ಧರ್ಮ ಎಂದರೆ ಹೋಗಿ ಬಿಜೆಪಿಗೆ ವೋಟ್ ಒತ್ತಿ ಬರುವುದಲ್ಲ. ಇಂಥ ಧರ್ಮವಿರೋಧಿ ಚಟುವಟಿಕೆಗಳು ಶುರುವಾದಾಗ ಟಕ್ಕಂತ ಕೌಂಟರ್ ಕೊಡುವುದು ಕೂಡ. 

ಇವತ್ತು ಈ ಸೋ ಕಾಲ್ಡ್ ಸೌಜನ್ಯ ಪರ ನ್ಯಾಯ ಕೇಳುವವರ ಲೂಪ್ ಹೋಲ್ಸ್ ಗಳು ಸಾಕಷ್ಟು ಕಣ್ಣ ಮುಂದಿದೆ. ಅದನ್ನಿಟ್ಟುಕೊಂಡು ಸಾಕಷ್ಟು ರೀಲ್ಸ್ ಗಳು ಹರಿದಾಡ್ತಿವೆ. 


ಗುಂಡಿಯಲ್ಲಿ ಹೆಣಗಳು ಇಲ್ಲ ಎನ್ನುವುದು ಕನ್ಫರ್ಮ್ ಆದ ಮೇಲೆ ಇವರು ತಮ್ಮ ಬುಟ್ಟಿಯ ಹಾವನ್ನು ನಿಧಾನವಾಗಿ ಹೊರತೆಗೆಯತೊಡಗಿದರು.  ಅಲ್ಲಿವರೆಗೆ ಅವರು ಮಾಡಿದ ವೀಡಿಯೋ ನೋಡುತ್ತಾ ತೆಪ್ಪಗಿದ್ದರು.


ಬುಟ್ಟಿಯೊಳಗೆ ಹಾವೇ ಇರಬೇಕು ಎಂದಿಲ್ಲ, ಕೊನೆಪಕ್ಷ ಹಾವಿದೆ, ಬಿಟ್ಟು ಬಿಡ್ತೀನಿ ಅಂತ ಹೆದ್ರಸ್ರಯ್ಯ ಸಾಕು. ಮಟ್ಟಣ್ಣನವರ್ ಅದೆಷ್ಟು ಸಲ ಸಾಕ್ಷಿ ಇದೆ ಕೊಡ್ತೀನಿ ಎನ್ನುತ್ತಾ ಪುಂಗಿ ಊದಿದ. ಆದ್ರೆ ಕೊಡಲಿಲ್ಲ. ಎಲ್ಲಿ ಸಾಕ್ಷಿ? ಮೊದ್ಲು ಸಾಕ್ಷಿ ಇಟ್ಟು ಮಾತಾಡು ಎಂದು ಕೇಳಲು ಒಬ್ಬರೂ ಮುಂದೆ ಬರಲಿಲ್ಲ.


ಅಗ್ನಿ ಶ್ರೀದರ್ ಅದದೇ ಹಳಸಲು ಕಮ್ಯುನಿಸ್ಟ್ ಐಡಿಯಾಲಜಿ ಮುಂದಿಟ್ಟುಕೊಂಡು ಬಡವರ ಪರ ಎಂದು ಫೋಸ್ ಕೊಡುತ್ತಾ ಹೆಗ್ಗಡೆಯವರನ್ನು ಬೈದ. ಆಗ ಧರ್ಮಸ್ಥಳದಿಂದಾದ ಸಾಮಾಜಿಕ ಕಾರ್ಯಗಳನ್ನಿಟ್ಟು ಕೊಂಡು ಎಫೆಕ್ಟಿವ್ ಆದ ವೀಡಿಯೊ ಮಾಡಲು ಬರುತ್ತಿರಲಿಲ್ಲವೆ? ಬರುತ್ತಿತ್ತು.


ಇನ್ನು AI ವೀಡಿಯೋ ಅವರಿಗೊಂದೇ ಮಾಡಲು ಬರುವುದಾ? 

ಜನರ ಭಾವನೆಗಳನ್ನು ಹೇಗೆ ತಮ್ಮ‌ಕಡೆ ತಿರುಗಿಸಿಕೊಳ್ಳಬೇಕು ಎನ್ನುವುದು ಎಡಪಂಥೀಯರಿಗೆ ಚೆನ್ನಾಗಿ ಗೊತ್ತು. ನಮ್ಮವರು ಹೇಗೆಂದರೆ,ಜೈ ಶ್ರೀರಾಮ್ ಎಂದರೆ ಬಿಜೆಪಿ ಕಡೆ, ಜೈ ಭೀಮ್ ಎಂದರೆ ಕಾಂಗ್ರೆಸ್ ಕಡೆ.


ಇದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುತ್ತಿರುವುದು ಎಡಚರ ಸಮಾಜ ಘಾತುಕರು. ನಮ್ಮ ಬಿಜೆಪಿ ನಾಯಕರು ಈಗೀಗ ಎಲೆಕ್ಷನ್ ಬಂದಾಗಲೂ ಜೈ ಶ್ರೀರಾಮ್ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ಇವರಿಗೆ ಜನರನ್ನು ಭಾವನೆಯ ದಾಳ ಬಿಟ್ಟು ತಮ್ಮ ಕಡೆ ತಿರುಗಿಸಿಕೊಳ್ಳಬೇಕು ಎಂಬ ಕನಿಷ್ಠ ಐಡಿಯಾ ಕೂಡ ಇಲ್ಲ.


ಇವತ್ತು ನ್ಯೂಸ್ ಚಾನೆಲ್ ಗಳಿಗಿಂತ ಜನ ಯೂಟ್ಯೂಬ್ ವೀಡಿಯೋಗಳನ್ನು ಹೆಚ್ಚು ನಂಬುತ್ತಾರೆ. ಧರ್ಮಸ್ಥಳ ವಿರುದ್ಧ ವೀಡಿಯೋ ಮಾಡಿ ಹಾಕಿದವರ ಉದ್ದೇಶವೇನು? ಜನರನ್ನು ನಂಬಿಸುವುದು. ಜನರನ್ನು ಶ್ರೀ ಕ್ಷೇತ್ರದ ವಿರುದ್ಧ ರೊಚ್ಚಿಗೇಳಿಸುವುದು.


ಸಮೀರ್, ಮಟ್ಟಣ್ಣ ಥರದವರು ತಲೆಬುಡ ಇಲ್ಲದವರಂತೆ ಮಾತಾಡುತ್ತಿದ್ದರೆ ಜನ ಸಂಪೂರ್ಣವಾಗಿ ನಂಬಿ ಬಿಡುತ್ತಾರೆ. ಅದಕ್ಕೇ ಹೇಳುವುದು ಹಿಂದೂಗಳು ಬೋಳೆಗಳು ಎಂದು. ಇವರಿಗೆ ಯಾವ ಹುನ್ನಾರಗಳ ಐಡಿಯಾ ಇರಲ್ಲ. ಸಂಚು, ಕುತಂತ್ರಗಳಿರಬಹುದಾ ಎಂದು ಯೋಚಿಸಲ್ಲ. ಭಾವನೆಗೆ ಬಲಿ ಬಿದ್ದು ಕುರಿಗಳಂತೆ ಉಘೇ ಉಘೇ ಎನ್ನತೊಡಗುತ್ತಾರೆ.‌


ಈ ಬೇಸಿಕ್ ಸೆನ್ಸ್ ನ್ನು ಅರ್ಥ ಮಾಡಿಕೊಂಡಿದ್ದರೆ ಧರ್ಮಸ್ಥಳ ವಿರೋಧಿಗಳನ್ನು ಆರಂಭದಲ್ಲೇ ಚಿವುಟಿ ಹಾಕಬಹುದಿತ್ತು. ಧರ್ಮಸ್ಥಳ ಸಂಘದಿಂದ ಎಷ್ಟು ಮಂದಿಯ ಜೀವನ ಉದ್ಧಾರವಾಗಿದೆ ಎಂಬುದರ ಕುರಿತು ನಾಲ್ಕಾರು ಜನರ ಸಂದರ್ಶನ ಮಾಡಿ, ಅದಕೊಂದಿಷ್ಟು ಸೂಪರಾಗಿರೋ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೊಟ್ಟು ವೀಡಿಯೋ ಮಾಡಿದ್ದರೆ ಜನ ಅದನ್ನೂ ನೋಡುತ್ತಿದ್ದರು.


ಧರ್ಮಸ್ಥಳ ದಿಂದ ಎಷ್ಟು ಜನರು ವಿದ್ಯೆ ಪಡೆದುಕೊಂಡರು, ಎಂದು ಒಂದಷ್ಟು ಜನರ ಮಾತಾಡಿಸಿದ್ದರೆ ಆಗುತ್ತಿತ್ತು. ಧರ್ಮಸ್ಥಳ ಎಷ್ಟು ವಿದ್ಯಾಸಂಸ್ಥೆಗಳನ್ನು ಪೊರೆಯುತ್ತಿದೆ ಎಂಬುದರ ಕುರಿತು ಅಲ್ಲಿನ ವಿದ್ಯಾರ್ಥಿಗಳನ್ನು, ಪ್ರಾಂಶುಪಾಲರನ್ನು ಮಾತಾಡಿಸಿ ಒಂದಷ್ಟು ಸೌಂಡ್ ಮಾಡಬಹುದಿತ್ತು.


ಹೋಗಲಿ, ಇದ್ಯಾವುದೂ ಆಗಲ್ಲ ಎಂದರೆ, ಭಕ್ತಾದಿಗಳನ್ನು ಮಾತಾಡಿಸಿ ನಿರಂತರವಾಗಿ ವೀಡಿಯೋ ಮಾಡಿ ಹಾಕಬಹುದಿತ್ತು. ಅದೂ ಮಾಡಲಿಲ್ಲ.

ಈ ವೀಡಿಯೋ ಗಳನ್ನು ಧರ್ಮಸ್ಥಳದವರೇ ಮಾಡಬಹುದಿತ್ತು. ಸಜ್ಜನರ ಮೌನ ಕೂಡ ಅಪಾಯಕಾರಿಯೇ. ಎಲ್ಲದನ್ನೂ ಮಂಜುನಾಥ ನೋಡಿಕೊಳ್ತಾನೆ ಎಂಬ ಏಕೋಭಾವದಲ್ಲಿ ಕುಳಿತಿದ್ದರ ಪರಿಣಾಮ‌ ಇವತ್ತು ಇಷ್ಟೊಂದು ತೇಜೋವಧೆ ಅನುಭವಿಸುವಂತಾಯ್ತು.


ಈಗ ಕೆಲವು ಅಲ್ಲಿನ ಸ್ಥಳೀಯರು, ಪಂಚಾಯತಿ ಸದಸ್ಯರು, ಮಾಜಿ ನೌಕರರು, ಇವರ ಜೊತೆ ವಸಂತ್ ಗಿಳಿಯಾರ್, ಕಿರಿಕ್ ಕೀರ್ತಿ ಥರದವರು ಮುನ್ನೆಲೆಗೆ ಬಂದು ಧರ್ಮಸ್ಥಳ ಪರವಾಗಿ ಮಾತನಾಡುತ್ತಿದ್ದಾರೆ. ಇವರಿಂದಾಗಿ ಕೆಲವರಿಗಾದರೂ ಸತ್ಯಾಂಶದ ಮನವರಿಕೆಯಾಗುತ್ತಿದೆ. 

ಧರ್ಮಸ್ಥಳದ ಕುರಿತು ಗೊತ್ತಿರಲು ಸ್ಥಳೀಯರೇ ಆಗಬೇಕೆಂದಿಲ್ಲ, ಇಡೀ ಪ್ರಕರಣವನ್ನು ಲಾಜಿಕಲಿ ಅರ್ಥ ಮಾಡಿಕೊಂಡರೂ ಸಾಕು, ಇದೆಲ್ಲ ಭಯಾನಕ ಹುನ್ನಾರ ಎಂದು ಸ್ಪಷ್ಟವಾಗಿ ಗೊತ್ತಾಗುತ್ತದೆ.


ಇದು ಸೌಜನ್ಯ ಪರ ಹೋರಾಟವಲ್ಲ, ಧರ್ಮಸ್ಥಳವನ್ನು ಹಾಳುಗೆಡಹುವ ಕುತಂತ್ರ ಎಂಬುದು. ಇನ್ನಾದರೂ ಎಚ್ಚೆತ್ತುಕೊಳ್ಳಬಹುದಾ ನಾವು? ಇನ್ನಾದರೂ ಭಯ ಬಿಡಬಹುದಾ ನಾವು? ಮುಂದಾದರೂ ಇಂಥ ಅಪಸವ್ಯಗಳು ಶುರುವಾದಾಗ ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಬಹುದಾ? ಗೊತ್ತಿಲ್ಲ!


- ಗೀರ್ವಾಣಿ ಎಂ. ಎಚ್‌.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top