ಸುರತ್ಕಲ್ ರೋಟರಿ ಕ್ಲಬ್ ನಿಂದ ಆಟಿಯ ಹುಣ್ಣಿಮೆ- ಆಟಿದ ಕೂಟ

Upayuktha
0


ಸುರತ್ಕಲ್‌: ನಮ್ಮ ಹಿರಿಯರಿಂದ ಬಂದಿರುವ ಪಾರಂಪರಿಕ ಜ್ಞಾನ ವಿಚಾರಗಳನ್ನು ಯುವ ಸಮುದಾಯಕ್ಕೆ ತಲುಪಿಸಲು ಜ್ಞಾನದ ಮನೆ ತುಳುನಾಡ ವಸ್ತು ವಿಚಾರಗಳ ಸಂಗ್ರಹಾಲಯ ಸ್ಥಾಪನೆ ಮಾಡಲಾಯಿತು ಎಂದು ಜಾನ್ ಎಫ್. ಕೆನಡಿ ನುಡಿದರು. ಅವರು ಸುರತ್ಕಲ್ ರೋಟರಿ ಕ್ಲಬ್ ಅಯೋಜಿಸಿದ್ದ ಆಟಿಯ ಹುಣ್ಣಿಮೆ- ಆಟಿದ ಕೂಟದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.



ಕ್ಲಬ್ ಸರ್ವಿಸ್ ನಿರ್ದೇಶಕ ಪ್ರೊ. ಕೃಷ್ಣಮೂರ್ತಿ ಅಭಿನಂದನ ಮಾತುಗಳಲ್ಲಿ, ಪಾರಂಪರಿಕ ವಸ್ತುಗಳ ಮೂಲಕ ನಮ್ಮ ನಾಡಿನ ಇತಿಹಾಸವನ್ನು ಪುನರ್ ರಚಿಸಲು ಸಾಧ್ಯವಿದೆ. ಜಾನ್ ಎಫ್. ಕೆನಡಿ ಅವರ ಕಾರ್ಯಗಳಿಗೆ ಸೇವಾ ಹಾಗೂ ಕೈಗಾರಿಕಾ ಸಂಸ್ಥೆಗಳ ಬೆಂಬಲ ಅಗತ್ಯ ಎಂದರು.


ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ತುಳುನಾಡ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಆಟಿದ ಕೂಟಗಳು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕೆಂದರು.


ನಿಯೋಜಿತ ಅಧ್ಯಕ್ಷ ಶ್ರೀಧರ್ ಟಿ. ಎನ್. ಶುಭ ಹಾರೈಸಿದರು. ರೋಟರಿ ಕುಟುಂಬ ಸದಸ್ಯರು ವಸ್ತು ಸಂಗ್ರಹಾಲಯ ವೀಕ್ಷಿಸಿದರು. ಜಾನ್ ಎಫ್. ಕೆನಡಿಯವರನ್ನು ಸಂಮಾನಿಸಲಾಯಿತು.


ಸತೀಶ್ ಸದಾನಂದ ಅಪೂರ್ವವಾದ ಹಳೆ ಮಾದರಿಯ ಕ್ಯಾಮೆರಾವನ್ನು ಕೊಡುಗೆಯಾಗಿ ನೀಡಿದರು. ಕಾರ್ಯದರ್ಶಿ ರಾಮಮೋಹನ್ ವೈ. ವಂದಿಸಿದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top