ಪ್ರಥಮ ಅಂತರರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ
ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾಲಯದ ಇನ್‌ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ ತನ್ನ ಪ್ರಥಮ ಅಂತರರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ – ಶ್ರೀನಿವಾಸ ವಿಶ್ವವಿದ್ಯಾಲಯ ಫಿಸಿಯೋಥೆರಪಿ ಇನ್ ಅಡ್ವಾನ್ಸ್ಡ್ ರಿಹ್ಯಾಬಿಲಿಟೇಶನ್ ಕಾನ್ಫರೆನ್ಸ್ (SPARC-2025) ಎಂಬ ಎರಡು ದಿನಗಳ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಹೊಸ ಆವರಣ ಪಾಂಡೇಶ್ವರದಲ್ಲಿ ಇಂದು (ಆ.29) ಉದ್ಘಾಟಿಸಿತು.
ಶ್ರೀನಿವಾಸ ವಿವಿ ಮಾನ್ಯ ಕುಲಾಧಿಪತಿ ಡಾ. ಸಿಎ ಎ. ರಾಘವೇಂದ್ರ ರಾವ್ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀನಿವಾಸ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ಶಿಕ್ಷಣದ ಅಸಾಮಾನ್ಯ ಪಯಣವನ್ನು ನೆನಪಿಸಿಕೊಂಡು ಹೇಳಿದರು: “ನಮ್ಮ ವಿದ್ಯಾರ್ಥಿಗಳು ತಮ್ಮ ಪರಿಣಾಮಕಾರಿ ಫಿಸಿಯೋಥೆರಪಿ ಚಿಕಿತ್ಸೆಗಳಿಂದಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಇಂದಿನ ಜಗತ್ತಿನಲ್ಲಿ, ಫಿಸಿಯೋಥೆರಪಿ ಬಹುತೇಕ ಪ್ರತಿಯೊಂದು ರೋಗದ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಕೇವಲ ಏಳು ವಿದ್ಯಾರ್ಥಿಗಳೊಂದಿಗೆ ಬಿಪಿಟಿ ಕಾರ್ಯಕ್ರಮ ಆರಂಭಿಸಿದ್ದು, ಇಂದು ಎಂಪಿಟಿ ಕೂಡಾ ಇದೆ. ನಮ್ಮ ವಿದ್ಯಾರ್ಥಿಗಳ ನಿಷ್ಠೆ ಮತ್ತು ಸಾಧನೆಗಳಿಂದ ನಗರದಲ್ಲಿ ದೊಡ್ಡ ಖ್ಯಾತಿಯನ್ನು ಗಳಿಸಿದೆ ಎಂದರು.
ಸಮ್ಮೇಳನವನ್ನು ಸಹ ಕುಲಾಧಿಪತಿ ಡಾ. ಎ. ಶ್ರೀನಿವಾಸ ರಾವ್ ಉದ್ಘಾಟಿಸಿದರು. ಅವರು ಫಿಸಿಯೋಥೆರಪಿಯ ಆಧುನಿಕ ಆರೋಗ್ಯಸೇವೆಯಲ್ಲಿ ಮಹತ್ವವನ್ನು ಒತ್ತಿಹೇಳಿ ಹೇಳಿದರು: “ಈ ಅಧಿವೇಶನವು ಮಾನವ ಶರೀರಶಾಸ್ತ್ರವನ್ನು ಅಧ್ಯಯನ ಮಾಡಲು ಮತ್ತು ಚಿಕಿತ್ಸೆಯ ನೂತನ ವಿಧಾನಗಳನ್ನು ಅಭಿವೃದ್ಧಿಪಡಿಸಲು ಮೌಲ್ಯಯುತ ವೇದಿಕೆಯಾಗುತ್ತದೆ. ಫಿಸಿಯೋಥೆರಪಿ ಕೇವಲ ಚೇತರಿಕೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೆ ಅನಗತ್ಯ ಶಸ್ತ್ರಚಿಕಿತ್ಸೆಗಳನ್ನು ತಪ್ಪಿಸುತ್ತದೆ. ಇದು ಭವಿಷ್ಯದ ಅತ್ಯಂತ ಮಹತ್ವದ ಆರೋಗ್ಯ ಸೇವಾ ವಿಧಾನಗಳಲ್ಲಿ ಒಂದಾಗಿದೆ ಎಂದರು.
ಸರ್‍ಟಿಫೈಡ್ ಇಂಟರ್‌ನ್ಯಾಷನಲ್ ಫ್ಯಾಸಿಯಲ್ ಮ್ಯಾನಿಪ್ಯುಲೇಷನ್ ಟೀಚರ್ (FMA) ಮತ್ತು ರಿಜಿಸ್ಟರ್ಡ್ ಫ್ಯಾಸಿಯಲ್ ಮ್ಯಾನಿಪ್ಯುಲೇಷನ್ ಪ್ರ್ಯಾಕ್ಟಿಷನರ್ ಶ್ರೀ ಕೋಬಿ ವೈಸ್ (ಇಸ್ರೇಲ್) ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, “ನಾನು ಹೆಚ್ಚಿನ ಜನರನ್ನು ಭೇಟಿಯಾಗಿ ಜ್ಞಾನವನ್ನು ಹಂಚಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಈ ಅವಕಾಶ ನೀಡಿದಕ್ಕಾಗಿ ಶ್ರೀನಿವಾಸ ವಿಶ್ವವಿದ್ಯಾಲಯಕ್ಕೆ ನಾನು ಕೃತಜ್ಞ ಎಂದು ಹೇಳಿದರು.
AD Vivum Education and Research, ಖತಾರ್ ಸಂಸ್ಥೆಯ ಸ್ಥಾಪಕ ನಿರ್ದೇಶಕ ಡಾ. ವಾಕರ್ ಎಂ. ನಕ್ವಿ, ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಹೆಚ್ಚುತ್ತಿರುವ ಪಾತ್ರವನ್ನು ಉಲ್ಲೇಖಿಸಿ, “ಇನ್ನಷ್ಟು ಸಂಸ್ಥೆಗಳು ಕೃತಕ ಬುದ್ಧಿಮತ್ತೆ (AI) ಸಂಬಂಧಿತ ಕಲ್ಪನೆಗಳನ್ನು ಮುಂದಿಟ್ಟುಕೊಂಡು ಬರಬೇಕು. ಇದು ವಿಶ್ವದ ಜನರನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ,” ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಸತ್ಯನಾರಾಯಣ ರೆಡ್ಡಿ ಅವರು ಸಮ್ಮೇಳನದ ವಿಶಾಲ ದೃಷ್ಟಿಕೋನದ ಬಗ್ಗೆ ಮಾತನಾಡಿ, “ಈ ಅಧಿವೇಶನವು ಮುಂದಿನ ದಶಕವು ವಿಶ್ವಕ್ಕಾಗಿ ಹೇಗೆ ರೂಪುಗೊಳ್ಳುತ್ತದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ. ನೀವು ಕೇವಲ ದೇಹಗಳನ್ನು ಗುಣಪಡಿಸುವುದಲ್ಲ, ನಿಮ್ಮ ಸಾಂತ್ವನ ಮತ್ತು ಕಾಳಜಿಯ ಚಿಕಿತ್ಸೆಯಿಂದ ಜೀವಗಳನ್ನು ಗುಣಪಡಿಸುತ್ತೀರಿ,” ಎಂದು ಹೇಳಿದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇಆರ್. ಶ್ರೀಮತಿ ಮಿತ್ರಾ ಎಸ್. ರಾವ್, ಕುಲಸಚಿವ ಡಾ. ಅನಿಲ್ ಕುಮಾರ್, ಅಭಿವೃದ್ಧಿ ಕುಲಸಚಿವ ಡಾ. ಅಜಯ್ ಕುಮಾರ್ ಅವರು ಉಪಸ್ಥಿತರಿದ್ದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಫಿಸಿಯೋಥೆರಪಿ ಸಂಸ್ಥೆಯ ಡೀನ್ ಹಾಗೂ SPARC-2025 ಆಯೋಜನಾ ಅಧ್ಯಕ್ಷೆ ಡಾ. ತೃಷಲಾ ನೊರೋನ್ಹಾ ಪಿಟಿ ಅವರು ಸ್ವಾಗತಿಸಿ, ಸಂಯೋಜಕ ಡಾ. ಪ್ರೇಮ್ ಕುಮಾರ್ ಅವರು ಸಮ್ಮೇಳನದ ಉದ್ದೇಶಗಳನ್ನು ವಿವರಿಸಿದರು. ಸಹ-ಸಂಯೋಜಕಿ ಡಾ. ಐಶ್ವರ್ಯ ಸೋನ್ವನೆ ಪಿಟಿ ಅವರು ವಂದಿಸಿದರು.
ಈ ಎರಡು ದಿನಗಳ ಸಮ್ಮೇಳನವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ತಜ್ಞರು, ಸಂಶೋಧಕರು ಹಾಗೂ ಶಿಕ್ಷಣ ತಜ್ಞರನ್ನು ಒಟ್ಟುಗೂಡಿಸಿ ಫಿಸಿಯೋಥೆರಪಿ ಮತ್ತು ಪುನರ್ವಸತಿ ಕ್ಷೇತ್ರದ ಪ್ರಗತಿ ಕುರಿತು ಚರ್ಚೆ ನಡೆಸುವ ಮಹತ್ವದ ವೇದಿಕೆಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


