ತೆಂಕನಿಡಿಯೂರು: ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಇಲ್ಲಿ ಯೂತ್ ರೆಡಿಕ್ರಾಸ್ ಮತ್ತು ಎನ್. ಎಸ್.ಎಸ್ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ ದಿನಾಚರಣೆ ಆಯೋಜಿಸಲಾಯಿತು.
ಸದ್ಭಾವನಾ ಪ್ರತಿಜ್ಞೆ ಭೋದಿಸಿದ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವ್ಕರ್ "ಜಗತ್ತಿನಲ್ಲೇ ವೈವಿಧ್ಯಮಯ ದೇಶವೆಂದು ಗುರುತಿಸಲ್ಪಟ್ಟ ಭಾರತದಲ್ಲಿ ಭಾಷೆ, ಸಂಸ್ಕೃತಿ, ಮತಧರ್ಮ, ಜಾತಿ ಜನಾಂಗಗಳಲ್ಲಿ ಜೀವನ ಶೈಲಿಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದರೂ ಸಾಕಷ್ಟು ವಿಶಾಲ ಮನೋಭಾವನೆ ಬೆಳೆಸಿಕೊಂಡು ಪರಸ್ಪರ ಅರಿತು ಗೌರವಿಸಿಕೊಳ್ಳುತ್ತಾ ಸೌಹಾರ್ದಯುತವಾಗಿ ಬದುಕಿನಲ್ಲಿ ಮಾತ್ರ ಶಾಂತಿ ಸಾಮರಸ್ಯ ಸಾಧ್ಯ" ಎಂದರು.
ಯೂತ್ ರೆಡ್ ಕ್ರಾಸ್ ಸಂಚಾಲಕ ಪ್ರಶಾಂತ್ ನೀಲಾವರ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರಾಜಕುಮಾರ್, ಗ್ರಂಥಪಾಲಕ ಕೃಷ್ಣ ಸಾಸ್ತಾನ ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥರಾದ ರತ್ನಮಾಲಾ ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


