ಮಲೆನಾಡಿನಲ್ಲಿ ಆನೆ ರಕ್ಷಿಸುವ ಸಂಕಲ್ಪ! : ಶಾಸಕರ ನಾನ್ಸೆನ್ಸ್ ಹೇಳಿಕೆಯಲ್ವಾ ಇದು?

Upayuktha
0


ಆನೆಗಳ ಸಂಕುಲವನ್ನು ರಕ್ಷಿಸೋಣ ಎನ್ನುವುದಕ್ಕೆ ಅವುಗಳ ಸಂತತಿ ಕಡಿಮೆ ಆಗುತ್ತಿದೆಯಾ!?


ಸಧ್ಯಕ್ಕೆ ಮಲೆನಾಡಿನಲ್ಲಿ ಆನೆಗಳು, ಕಾಡುಕೋಣಗಳು, (ಈವನ್ ಮಂಗಗಳು ಕೂಡ) ಭಯೋತ್ಪಾದಕ (ಭಯವನ್ನು ಉಂಟು ಮಾಡುತ್ತಿರುವ) ಪ್ರಾಣಿಗಳಾಗಿವೆ!


ಆಗಷ್ಟ್ 12 ವಿಶ್ವ ಆನೆ ದಿನ ಅನ್ನುವ ಬದಲಿಗೆ ಮಲೆನಾಡಿನ ಜನತೆ ಮಲೆನಾಡು ನೆಲವಾಸಿಗಳ ದಿನ ಅಂತ ಆಚರಿಸಬಹುದೇನೋ!!?


ಸಧ್ಯಕ್ಕೆ ಆನೆಗಳನ್ನು ಯಾರೂ ಸಾಯಿಸುತ್ತಿಲ್ಲ. ಇನ್ನು ಆನೆ ರಕ್ಷಣೆಯ ಹೆಸರಲ್ಲಿ, ಆನೆಗಳಿಂದ ಸಂಕಷ್ಟ, ಸಾವು ಅನುಭವಿಸುತ್ತಿರುವ ಕಾಲ ಮತ್ತು ಪ್ರದೇಶದಲ್ಲಿ, ಸಂಕಷ್ಟ ಪ್ರದೇಶದ ಶಾಸಕರೇ ಆನೆಗಳನ್ನು ರಕ್ಷಿಸುವ ಸಂಕಲ್ಪ ಮಾಡೋಣ ಅಂತ ಹೇಳುವುದು ಒಂದು ಹಾಸ್ಯಾಸ್ಪದ ಹೇಳಿಕೆಯಾಗಿ ಕಾಣುತ್ತದೆ.  ನಾನ್ಸೆನ್ಸ್ ಅಂತ ಅನಿಸುತ್ತಿದೆ? ಒಂದು ಆನೆಯನ್ನು ಯಾರಾದರು ಸಾಯಿಸಿದ್ದರೂ ಈ ಹೇಳಿಕೆಗೆ ಒಂದು ಅರ್ಥ ಇರುತ್ತಿತ್ತು. ಇಲ್ಲ ಅಂತಹದ್ದೇನೂ ಆಗ್ತಾ ಇಲ್ಲ. ಸಾಯಿಸುವುದಿರಲಿ, ಬಾಳೆಹೊನ್ನೂರು ಮಠದಲ್ಲಿರುವ ಕೃತಕ ಆನೆ ನೋಡಿದರೂ ಹೆದರುವ ಪರಿಸ್ಥಿತಿಯಲ್ಲಿ ಮಲೆನಾಡ ಜನ ಇದ್ದಾರೆ!


ಶಾಸಕರು ಮಲೆನಾಡು ನೆಲವಾಸಿಗಳ ದಿನ ಅಂತ ಆಗಷ್ಟು 12 ನ್ನು ಆಚರಿಸಿ, ಮಲೆನಾಡ ಜನರ ಜೀವ ಜೀವನ, ಬದುಕನ್ನು ರಕ್ಷಿಸುವ ಸಂಕಲ್ಪ ಮಾಡಲಿ.  


ಸ್ಟೇಡಿಯಂ ಹೊರಗಡೆ 11 ಜನ ಸಾಯುತ್ತಿರುವಾಗ, ಒಳಗಡೆ 11 ಜನರ ಕ್ರಿಕೇಟ್ IPL ಸಂಭ್ರಮಾಚರಣೆ ಮಾಡಿದಂತೆ, ಆನೆಗಳಿಂದ ಮಲೆನಾಡ ಜನ ಸತ್ತ ಸೂತಕ, ಮಾಸಿಕ ತಿಥಿ ಮುಗಿಯುವ ಮೊದಲೆ, ಸೂತಕದ ಮನೆಯಂತಾಗಿರುವ ಮಲೆನಾಡಿನಲ್ಲೇ,  ಕೊಂದ ಆನೆ ಸಂತತಿಗೆ ವಿಶ್ವ ಆನೆ ದಿನ ದ ಹೆಸರಲ್ಲಿ ಸಂಭ್ರಮಾಚರಣೆ ಬೇಡ, ಪ್ಲೀಸ್. ಸ್ವಲ್ಪ ಮನುಷ್ಯರಾಗಿ ವರ್ತಿಸೋಣ.


ಇನ್ನು 'ವಿಶ್ವ ಮಂಗಗಳ ದಿನ', 'ವಿಶ್ವ ಬೀದಿ ನಾಯಿಗಳ ದಿನ', 'ವಿಶ್ವ ಭಯೋತ್ಪಾದಕ ಜೀವಿಗಳ ದಿನ' ಅಂತೆಲ್ಲ ಇರುವುದಾದರೆ, ಸಧ್ಯಕ್ಕೆ ಅವುಗಳ ಅಚರಣೆ ಮಲೆನಾಡಿನಲ್ಲಿ ಬೇಡ.  ಅವತ್ತು ಯಾವ ಶಾಸಕರೂ ಯಾವ ನಾನ್ಸೆನ್ಸ್ ಸಂಕಲ್ಪವನ್ನು ಸಾರ್ವಜನಿಕವಾಗಿ ಮಾಡದಿರುವುದು ಒಳ್ಳೆಯದು.


ಸಾಧ್ಯವಾದರೆ, ಮಲೆನಾಡ ಶಾಸಕರುಗಳು ಮಲೆನಾಡ ಜನರನ್ನು, ಮಲೆನಾಡ ಕೃಷಿ ಭೂಮಿಯನ್ನು ಆನೆ, ಕಾಡುಕೋಣ, ಮಂಗಗಳಿಂದ ರಕ್ಷಿಸಲು ಒಂದು ಪ್ರಬಲ ಸಂಕಲ್ಪ ಮಾಡಿ


ಅಂತಹ ಸಂಕಲ್ಪ ಮಾಡಿದರೆ, ಸಮಸ್ತ ಮಲೆನಾಡಿಗರ ಶುಭಾಶಯಗಳು ನಿಮ್ಮ ಜೊತೆಗಿರುತ್ತದೆ.


ಸ್ವಲ್ಪ ಯೋಚನೆ ಮಾಡಿ.


-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top