ಖ್ಯಾತ ಸಾಹಿತಿ ಪ್ರಭಾಕರ ಶಿಶಿಲ "ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ"ಗೆ ಆಯ್ಕೆ

Chandrashekhara Kulamarva
0



ಸುಳ್ಯ: ಖ್ಯಾತ ಕಾದಂಬರಿಕಾರ, ಹಿರಿಯ ಸಾಹಿತಿ ಪ್ರಭಾಕರ ಶಿಶಿಲ ಅವರು ಹಲವಾರು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಪಾರ ಸಾಧನೆಗಾಗಿ "ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ"ಗೆ ಆಯ್ಕೆಯಾಗಿದ್ದಾರೆ.


ಆಗಸ್ಟ್‌ 3ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಜರುಗಲಿರುವ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವದ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಖ್ಯಾತ ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿಗಳಾದ ಮೋಹನ್ ನಂಗಾರು, ಹಾ ಮ ಸತೀಶ್ ಬೆಂಗಳೂರು, ನಾರಾಯಣ ರೈ ಕುಕ್ಕುವಳ್ಳಿ, ಶ್ರೀ ಶ್ರೀ ಯೋಗೇಶ್ವರಾನಂದ ಸರಸ್ವತಿ ಸ್ವಾಮೀಜಿ ಇನ್ನಿತರರು ಪ್ರದಾನ ಮಾಡುವರು.


ಚಂದನ ಸಾಹಿತ್ಯ ವೇದಿಕೆಯು ತನ್ನ 20ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿದ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ- 2025 ಈ ಸಮಾರಂಭದಲ್ಲಿ ಸಾಹಿತಿ ಪ್ರಭಾಕರ ಶಿಶಿಲ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್. ಭೀಮರಾವ್ ವಾಷ್ಠರ್ ಸುಳ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top