40 ವರ್ಷದ ಬಳಿಕ ನಿಯಮಿತ ಆರೋಗ್ಯ ತಪಾಸಣೆ ಅಗತ್ಯ: ಡಾ. ಜಿ.ಕೆ ಭಟ್ ಸಂಕಬಿತ್ತಿಲು

Chandrashekhara Kulamarva
0

ಕುಳಾಯಿಯಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ




ಸುರತ್ಕಲ್‌: ನಲುವತ್ತರ ಹರೆಯದ ಅನಂತರದಲ್ಲಿ ಪ್ರತಿಯೊಬ್ಬರು ನಿರಂತರವಾಗಿ ನಿರ್ದಿಷ್ಟ ಸಮಯದಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಕ್ಷೇಮಕರ. ಸಾಮಾಜಿಕ ಸೇವಾ ಸಂಸ್ಥೆಗಳು ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ನಡೆಸುವ ವೈದ್ಯಕೀಯ ಶಿಬಿರಗಳ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳುವುದು ಜನತೆಯ ಕರ್ತವ್ಯ ಎಂದು ಹಿರಿಯ ವೈದ್ಯ ಡಾ. ಗೋಪಾಲಕೃಷ್ಣ ಭಟ್ ಸಂಕಬಿತ್ತಿಲು ನುಡಿದರು.


ಅವರು ಸುರತ್ಕಲ್ ರೋಟರಿ ಕ್ಲಬ್ ಸಂಸ್ಥೆಯು ಪಣಂಬೂರು, ಕುಳಾಯಿಯ ಯುವ ವಾಹಿನಿ (ರಿ), ಮಹಿಳಾ ಮಂಡಲ ಕುಳಾಯಿ, ಸುರತ್ಕಲ್ ಇನ್ನರ್ ವೀಲ್ ಕ್ಲಬ್ ಸಹಯೋಗದಲ್ಲಿ ಜಸ್ಟಿಸ್ ಕೆ. ಎಸ್. ಹೆಗ್ಡೆ ಆಸ್ಪತ್ರೆ, ದೇರಳಕಟ್ಟೆ ಮತ್ತು ಎ. ಬಿ. ಶೆಟ್ಟಿ ಸ್ಮಾರಕ ದಂತ ಕಾಲೇಜು, ಮಂಗಳೂರು ಸಹಭಾಗಿತ್ವದಲ್ಲಿ ಕುಳಾಯಿ ಮಹಿಳಾ ಮಂಡಲದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡುತ್ತಿದ್ದರು.


ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ದಿವ್ಯ ಶೆಟ್ಟಿ ಮಾತನಾಡಿ, ವೈದ್ಯಕೀಯ ಶಿಬಿರಗಳ ಮೂಲಕ ಜನತೆಗೆ ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ ಅರೋಗ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಲು ಸಾಧ್ಯ ಎಂದರು.

 

ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ. ಭವಾನಿ, ಎ.ಬಿ. ಶೆಟ್ಟಿ ಸ್ಮಾರಕ ದಂತ ಕಾಲೇಜಿನ ಡಾ. ದೀಪಿಕಾ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿದರು.


ಯುವ ವಾಹಿನಿಯ ಅಧ್ಯಕ್ಷ ಧನೀಶ್ ಕುಳಾಯಿ,ಮಹಿಳಾ ಮಂಡಳಿ ಕುಳಾಯಿಯ ಅಧ್ಯಕ್ಷೆ ರೇವತಿ, ರೋಟರಿ ಕ್ಲಬ್ ಕಾರ್ಯದರ್ಶಿ ರಾಮ್ ಮೋಹನ್. ವೈ. ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಡಾ. ರೇಷ್ಮಾ ರಾವ್, ಸುರತ್ಕಲ್ ರೋಟರಿ ಕ್ಲಬ್ ನ ನಿಕಟ ಪೂರ್ವ ಅಧ್ಯಕ್ಷ ಸಂದೀಪ್ ರಾವ್ ಇಡ್ಯಾ, ಸಾಮಾಜಿಕ ಸೇ ವಾ ನಿರ್ದೇಶಕ ಚಂದ್ರಕಾಂತ್, ಹಿರಿಯ ಸದಸ್ಯರಾದ ಎಂ.ಬಿ. ಶೆಟ್ಟಿ, ಶ್ರೀಧರ್ ಭಟ್, ಉಮೇಶ ಭಟ್, ಯೋಗೀಶ್ ಕುಳಾಯಿ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗಾಯತ್ರಿ ಸತೀಶ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಸುರೇಶ್ ಪೂಜಾರಿ ವಂದಿಸಿದರು. 150ಕ್ಕೂ ಮಿಕ್ಕಿ ಮಂದಿ ಶಿಬಿರದ ಪ್ರಯೋಜನ ಪಡೆದು ಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top