ಉಡುಪಿ: ಜಗದ್ಗುರು ಮಧ್ವಾಚಾರ್ಯರ ಸಂಸ್ಮರಣಾ ಅಂಚೆ ಚೀಟಿ ಬಿಡುಗಡೆಯ ಶುಭ ಸಂದರ್ಭದಲ್ಲಿ ಖ್ಯಾತ ಅಂಚೆ ಚೀಟಿ ಸಂಗ್ರಹಕಾರರು (ಫಿಲಾಟಲಿಸ್ಟ್) ಉಡುಪಿ ಹಾಗೂ ಉಡುಪಿಗೆ ಸಂಬಂಧಿಸಿದ ವಿಷಯವಾಗಿ ಮತ್ತು ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಅಂಚೆ ಚೀಟಿ, ವಿಶೇಷ ಅಂಚೆ ಲಕೋಟೆ ಹಾಗೂ ಅಂಚೆ ಪರಿಕರಗಳ ಸಂಗ್ರಹದ ಪ್ರದರ್ಶನ ನಡೆಸಿಕೊಡಲಿದ್ದಾರೆ.
ಪುತ್ತಿಗೆ ಶ್ರೀಗಳ ಜನ್ಮ ನಕ್ಷತ್ರೋತ್ಸವದ ಶುಭ ಸಂದರ್ಭದಲ್ಲಿ ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿರುವ ಅಪರೂಪದ ವಿಶಿಷ್ಟ ಅಂಚೆ ಚೀಟಿಗಳ ಈ ಪ್ರದರ್ಶನಕ್ಕೆ ಆಗಸ್ಟ್ 30 ರ ಬೆಳಿಗ್ಗೆ 9 ಗಂಟೆಗೆ ಪುತ್ತಿಗೆ ಶ್ರೀಗಳು ಮಾಹೆಯ ಉಪ ಕುಲಾಧಿಪತಿ ಹೆಚ್ ಎಸ್ ಬಲ್ಲಾಳ್ ರವರ ಉಪಸ್ಥಿತಿಯಲ್ಲಿ ಚಾಲನೆ ನೀಡಲಿದ್ದಾರೆ.
ಈ ಅಂಚೆ ಚೀಟಿ ಪ್ರದರ್ಶನಕ್ಕೆ ದಿನವಿಡೀ ಸರ್ವರಿಗೂ ಮುಕ್ತ ಅವಕಾಶವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಹಾಗೂ ಪ್ರಸನ್ನಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ