ಪುತ್ತೂರು ಪುರುಷರಕಟ್ಟೆಯಲ್ಲಿ 25ನೇ ವರ್ಷದ ಬೆಳ್ಳಿಹಬ್ಬದ ಸಾರ್ವಜನಿಕ ಗಣೇಶೋತ್ಸವ

Upayuktha
0


ಪುತ್ತೂರು: ಪುತ್ತೂರು ಪುರುಷರಕಟ್ಟೆಯಲ್ಲಿ 25ನೇ ವರ್ಷದ ಬೆಳ್ಳಿಹಬ್ಬದ ಸಾರ್ವಜನಿಕ ಶ್ರೀ ಗಣೇಶೋತ್ಸವ ಉತ್ಸವದ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನು ಕುಮಾರ್ ಅವರ ಶಿವಮಣಿ ಕಲಾಸಂಘ ನೇತೃತ್ವದಲ್ಲಿ ಹಾಗೂ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ಸಹಯೋಗದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ನಡೆಯಿತು. 


ಸಾಂಸ್ಕೃತಿಕ ವೈಭವದಲ್ಲಿ ಕಲಾದೀಪಗಳಾದ ಮಧುಲತಾ ಪುತ್ತೂರು, ಪ್ರಥಮ್ಯ ನೆಲ್ಯಾಡಿ, ನಿಶಿತ್ ಉಪ್ಪಿನಂಗಡಿ,ಲಿಖಿತಾ ಭಂಡಾರಿ, ಲೇಖನ್ ಗೌಡ. ಕೃತ್ವಿಕ್, ತೀರ್ಥನ್ ಶೇವಿರೆ, ನಂದನ್, ದಕ್ಷಗೌಡ, ಗೌತಮ್, ಹೇಮಂತ್, ರಿತ್ವನ್, ಷಣ್ಮುಖ ಮುಂತಾದವರು ಭಾಗವಹಿಸಿ ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶಿಸಿ ಜನಮೆಚ್ಚುಗೆಗೆ ಪಾತ್ರರಾದರು. 


ಕಾರ್ಯಕ್ರಮದ ಕೊನೆಯಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ.) ಕಾಸರಗೋಡು ವತಿಯಿಂದ ಭಾಗವಹಿಸಿದ ಎಲ್ಲಾ ಕಲಾ ಸಂಪನ್ನರಿಗೆ ಕೆ. ವಿ. ಲಕ್ಷ್ಮಣಮೂರ್ತಿ ಬೆಂಗಳೂರು ಅವರ  ಭಾರತದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಸ್ವಾಭಿಮಾನ ದೇಶಾಭಿಮಾನದ ಪ್ರೇರಕ ಶಕ್ತಿ  ರಾಣಿ ಅಬ್ಬಕ್ಕ ದೇವಿಯ ಮಾಹಿತಿಯನ್ನು ಒಳಗೊಂಡ ರಾಣಿ ಅಬ್ಬಕ್ಕ ದೇವಿಯ ಜೊತೆ ಪ್ರಯಾಣ ಎಂಬ ಕೃತಿಯನ್ನು ವೇದಿಕೆಯಲ್ಲಿರುವ ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷ್ಮಿ, ಶ್ರೀಮತಿ ಸುಜಾತ, ಅಚ್ಯುತ ಭಟ್ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವ ಸಮಿತಿಯ  ವತಿಯಿಂದ ಪ್ರಸಾದ ನೀಡಿ ಪುರಸ್ಕರಿಸಲಾಯಿತು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top