ಸಂಸ್ಕಾರ, ಸಂಸ್ಕೃತಿಯ ಹರಿಕಾರರಾಗಲು ನೃತ್ಯ ಆಶ್ರಯ ತಾಣ: ಜನಾರ್ದನ್ ಕೊಡವೂರು

Upayuktha
0


ಉಡುಪಿ: ಭರತ ನಾಟ್ಯ ಕಲೆ ದೇಶದ ಪ್ರಾಚೀನ ಕಲೆಗಳಲ್ಲಿ ಒಂದಾಗಿದ್ದು, ಇದಕ್ಕೆ ಮಕ್ಕಳು ಹೆಚ್ಚಿನ ಒತ್ತು ಕೊಡಬೇಕು.ಅಲ್ಲದೆ ಜೀವನದಲ್ಲಿ ಸಂಸ್ಕಾರವಂತರಾಗಲು  ಇದೊಂದು ಆಶ್ರಯ ತಾಣ. ಹಾಗಾಗಿ ಮಕ್ಕಳು,  ಯುವಕರು ನೃತ್ಯದಂತಹ ಲಲಿತ ಕಲೆಗಳಲ್ಲಿ  ಹೆಚ್ಚು ಹೆಚ್ಚು ತೊಡಗಿಸಿ ಕೊಳ್ಳಬೇಕೆಂದು ಪತ್ರಕರ್ತ ಜನಾರ್ದನ್ ಕೊಡವೂರು ಹೇಳಿದರು. 


ಉಡುಪಿಯ ಐ ವೈ ಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ರಾಧಾಕೃಷ್ಣ ನೃತ್ಯ ನಿಕೇತನ ಸಂಸ್ಥೆ ಆಯೋಜಿಸಿದ್ದ ಅದಿತಿ ಜಿ ನಾಯಕ್ ರವರ ನೃತ್ಯಾರ್ಪಣೆಯ ಸಭಾ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. 


ನೃತ್ಯ ಗುರು ವೀಣಾ ಸಾಮಗ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ,  ಕೂಚಿಪುಡಿ, ಜನಪದ ಮುಂತಾದ ನೃತ್ಯ ತರಗತಿಯನ್ನು ನಡೆಸುವದರ ಮೂಲಕ ಸಂಸ್ಕಾರಯುತ ಜೀವನ ನಡೆಸಲು ದಾರಿ ಮಾಡಿ ಕೊಟ್ಟಿದ್ದಾರೆ ಎಂದು ಅತಿಥಿಯಾಗಿ ಆಗಮಿಸಿದ ಮಂಗಳೂರಿನಲ್ಲಿ ಸೌರಭ ಕಲಾ ಪರಿಷತ್ತು ನಿರ್ದೇಶಕಿ ಡಾ. ವಿದ್ಯಾ ಹೇಳಿದರು. 


ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ವತಿಯಿಂದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್ ಅದಿತಿ ಜಿ ನಾಯಕ್ ರವರನ್ನು ಗೌರವಿಸಿ, ಅಭಿನಂದಿಸಿದರು. 


ಈ ಸಂದರ್ಭದಲ್ಲಿ ಅದಿತಿಯ ಮಾತಾಪಿತೃಗಳಾದ ಲಕ್ಷ್ಮೀ ಜಿ ನಾಯಕ್, ಹೆಚ್ ಗಣೇಶ್ ನಾಯಕ್, ಗುರು ವಿದುಷಿ ವೀಣಾ ಸಾಮಗ, ಮುರಳೀಧರ ಸಮಗ ಉಪಸ್ಥಿತರಿದ್ದರು. 


ಪವನ್ ರಾಜ್ ಸಾಮಗ ಸ್ವಾಗತಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅದಿತಿ ಜಿ ನಾಯಕ್ ರವರ ಭರತನಾಟ್ಯ ಸಂಪನ್ನಗೊಂಡಿತು.




 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top