ಸನಾತನ ಸಂಸ್ಥೆಯನ್ನು 'ಭಯೋತ್ಪಾದಕ' ಎಂದು ಕರೆದ ಮಾಜಿ ಮುಖ್ಯಮಂತ್ರಿ

Upayuktha
0




ಪೃಥ್ವಿರಾಜ್ ಚವ್ಹಾಣ್ ರಿಗೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೊಟೀಸ್ 

ಬೇಷರತ್ತಾಗಿ ಕ್ಷಮೆಯಾಚಿಸಿ; ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಿ: ಸನಾತನ ಸಂಸ್ಥೆಯಿಂದ ಪೃಥ್ವಿರಾಜ್ ಚವ್ಹಾಣ್ ಗೆ ಎಚ್ಚರಿಕೆ


ತ್ತೀಚೆಗೆ, ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಯಿತು. ಅದರ ನಂತರ, 'ಕೇಸರಿ ಭಯೋತ್ಪಾದನೆ'ಯ ಕಾಂಗ್ರೆಸ್ ಪಿತೂರಿ ಬಹಿರಂಗವಾಯಿತು. ಇದರ ಸಾರಾಂಶವನ್ನು ನೀಡುತ್ತಾ, ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ ಪೃಥ್ವಿರಾಜ್ ಚವ್ಹಾಣ್ ಸನಾತನ ಧರ್ಮವನ್ನು ಮತ್ತೊಮ್ಮೆ ಟೀಕಿಸಿದರು, ಮೊದಲು, ಇದನ್ನು 'ಕೇಸರಿ ಭಯೋತ್ಪಾದನೆ' ಎಂಬುದರ ಬದಲು 'ಸನಾತನೀ ಭಯೋತ್ಪಾದನೆ' ಕರೆಯಿರಿ ಎಂದು ಹೇಳಿ ಸನಾತನ ಧರ್ಮವನ್ನು ಪುನಃ ಟೀಕಿಸಿದರು. 


ಇದರ ಬಗ್ಗೆ ಸ್ಪಷ್ಟೀಕರಣ ನೀಡುವಾಗ ಅವರು 'ನಾನು ಧರ್ಮವನ್ನು ಅಲ್ಲ, ಸನಾತನ ಸಂಸ್ಥೆಯನ್ನು ಭಯೋತ್ಪಾದಕ ಸಂಘಟನೆ ಕರೆದೆ' ಎಂದು ಹೇಳಿದರು. ಈ ಹೇಳಿಕೆ ಸುಳ್ಳು, ಆಧಾರರಹಿತ ಮತ್ತು ದಾರಿತಪ್ಪಿಸುವಂತಿದೆ ಮತ್ತು ಈ ಕುರಿತು, ಸನಾತನ ಸಂಸ್ಥೆಯ ವಿಶ್ವಸ್ಥರಾದ  ವೀರೇಂದ್ರ ಮರಾಠೆ ಪರವಾಗಿ ಚವ್ಹಾಣ್ ಅವರಿಗೆ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್ ಕಳುಹಿಸಲಾಗಿದೆ. ಅಲ್ಲದೆ, ಪೃಥ್ವಿರಾಜ್ ಚವ್ಹಾಣ್ ಸನಾತನ ಸಂಸ್ಥೆಗೆ ಬೇಷರತ್ತಾಗಿ ಕ್ಷಮೆಯಾಚಿಸಬೇಕು ಅಥವಾ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿರಬೇಕು ಎಂದು ಸನಾತನ ಸಂಸ್ಥೆಯ ವಕ್ತಾರ ಅಭಯ್ ವರ್ತಕ್ ಎಚ್ಚರಿಸಿದ್ದಾರೆ.


ಈ ನೋಟಿಸ್‌ನಲ್ಲಿ, ಪೃಥ್ವಿರಾಜ್ ಚವ್ಹಾಣ್ 15 ದಿನಗಳಲ್ಲಿ ಲಿಖಿತವಾಗಿ ಕ್ಷಮೆಯಾಚಿಸಬೇಕು, ಮೂಲ ಸಂದರ್ಶನದಂತೆಯೇ ಪ್ರಚಾರದೊಂದಿಗೆ ಕ್ಷಮೆಯಾಚನೆಯನ್ನು ಪ್ರಕಟಿಸಬೇಕು, ಭವಿಷ್ಯದಲ್ಲಿ ಯಾವುದೇ ಮಾನನಷ್ಟ ಹೇಳಿಕೆಗಳನ್ನು ನೀಡಬಾರದು ಮತ್ತು ಕಾನೂನು ವೆಚ್ಚಗಳಿಗೆ ಪರಿಹಾರವಾಗಿ 10,000 ರೂ.ಗಳನ್ನು ಪಾವತಿಸಬೇಕು. ಸಂಸ್ಥೆಯ ಗೌರವ ಕಾನೂನು ಸಲಹೆಗಾರ ಮತ್ತು ಬಾಂಬೆ ಹೈಕೋರ್ಟ್‌ನ ವಕೀಲ ರಾಮದಾಸ್ ಕೇಸರ್ಕರ್ ಅವರು, ಚವ್ಹಾಣ್ ಅವರ ಹೇಳಿಕೆಯು ಸನಾತನ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದಿದೆ ಮತ್ತು ಸಾವಿರಾರು ಸಾಧಕರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಈ ನೋಟಿಸ್ ಸಿಕ್ಕ ನಂತರವೂ ಚವ್ಹಾಣ್ ಪ್ರತಿಕ್ರಿಯಿಸದಿದ್ದರೆ, ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆಗಳನ್ನು ಹೂಡಲಾಗುವುದು.


ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅಭಯ್ ವರ್ತಕ್, ಪೃಥ್ವಿರಾಜ್ ಚವ್ಹಾಣ್ ಇಂದು 'ಕೇಸರಿ' ಮಹಾರಾಷ್ಟ್ರದ ಮರಾಠಿ ಸಂಸ್ಕೃತಿಯ, ಛತ್ರಪತಿ ಶಿವಾಜಿ ಮಹಾರಾಜರ, ಸಂತ ಜ್ಞಾನೇಶ್ವರರಿಂದ ಹಿಡಿದು ಎಲ್ಲಾ ಸಂತರು ಮತ್ತು ವಾರಕರಿಗಳ ಪವಿತ್ರ 'ಕೇಸರಿ' ಎಂದು ಹೇಳಿ ಎಂದು ಹೇಳಿದರು.


ಆದ್ದರಿಂದ, ಯಾರೂ ಇದನ್ನು "ಕೇಸರಿ ಭಯೋತ್ಪಾದನೆ" ಎಂದು ಕರೆಯಬಾರದು ಎಂದು ಅವರು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡುತ್ತಿದ್ದಾರೆ; ಆದರೆ ಮಾಲೆಗಾಂವ್ ಘಟನೆ ನಡೆದಾಗ, ಕಾಂಗ್ರೆಸ್ ನಾಯಕರಾದ ಪಿ. ಚಿದಂಬರಂ, ದಿಗ್ವಿಜಯ್ ಸಿಂಗ್, ಸುಶೀಲ್ ಕುಮಾರ್ ಶಿಂಧೆ ಮತ್ತು ಇತರ ನಾಯಕರು ಇದನ್ನು 'ಕೇಸರಿ ಭಯೋತ್ಪಾದನೆ' ಎಂದು ಕರೆದು ಹಿಂದೂಗಳನ್ನು ಗುರಿಯಾಗಿಸಿಕೊಂಡರು. 'ಕೇಸರಿ' ಛತ್ರಪತಿಗೆ, ಸಂತರಿಗೆ ಸೇರಿದ್ದು ಎಂದು ಚವ್ಹಾಣ್ ಗೆ ಆಗ ಅರಿವಾಗಲಿಲ್ಲವೇ? ಅವರು ಇಷ್ಟು ವರ್ಷಗಳಿಂದ ನಿದ್ರಿಸುತ್ತಿದ್ದರೆ ? ಎಂದು ಪ್ರಶ್ನಿಸಿದರು.


                           


-ಅಭಯ ವರ್ತಕ, ವಕ್ತಾರರು,

ಸನಾತನ ಸಂಸ್ಥೆ (ಸಂಪರ್ಕ: 99897 22222)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top