ಸಂಸ್ಕಾರ ಭಾರತಿಯಿಂದ ನಟರಾಜ ಪೂಜನ, ಉಪನ್ಯಾಸ, ಅಭಿನಂದನೆ ಕಾರ್ಯಕ್ರಮ

Chandrashekhara Kulamarva
0

ಕಲೆಯ ಅರಿವಿಗೆ ಪುರಾಣ ಜ್ಞಾನ ಅಗತ್ಯ: ಎಂ.ಎಲ್ ಸಾಮಗ




ಮಂಗಳೂರು: ಭಾರತೀಯ ಕಲಾಪ್ರಕಾರಗಳ ಸಾಧನೆಗಾಗಿ ನಮ್ಮ ಪುರಾಣಗಳ ಹಿನ್ನೆಲೆ ಅತ್ಯಗತ್ಯ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ, ಕಲಾಚಿಂತಕರೂ ಆದ ಡಾ.ಎಂ.ಎಲ್‌. ಸಾಮಗ ಹೇಳಿದರು.


ಅವರು ಮಂಗಳವಾರ ಮಂಗಳೂರಿನ ಸಂಸ್ಕಾರ ಭಾರತಿ ಮಂಗಳೂರು ಮಹಾನಗರ ಘಟಕದ ವತಿಯಿಂದ ಮಂಗಳವಾರ ಸನಾತನ ನಾಟ್ಯಾಲಯದಲ್ಲಿ ನಡೆದ ನಟರಾಜ ಪೂಜನ್ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.


ಭಾರತೀಯ ತತ್ತ್ವಶಾಸ್ತ್ರವನ್ನು ಪ್ರತಿನಿಧಿಸುವ ನಟರಾಜ‌ ವಿಗ್ರಹವೇ ನಮ್ಮ‌ ದೇಶದ‌ ಕಲಾ ಶ್ರೀಮಂತಿಕೆಯನ್ನೂ ತತ್ವಶಾಸ್ತ್ರದ ಸಮಗ್ರತೆಯನ್ನೂ ತೋರಿಸಿಕೊಡುತ್ತದೆ ಎಂದರು. ಜ್ಞಾನಕ್ಕಾಗಿ ಈಶ್ವರನೂ,‌ ಆರೋಗ್ಯಕ್ಕಾಗಿ ಸೂರ್ಯನನ್ನು ಆರಾಧಿಸಬೇಕು ಎನ್ನುತ್ತ ನಟರಾಜ ವಿಗ್ರಹದ ಮಹತ್ವವನ್ನು ವಿವರಿಸಿದರು.


170 ಗಂಟೆ ನೃತ್ಯ ಪ್ರದರ್ಶಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ ಕುಮಾರಿ ರೆಮೋನಾ ಇವೆಟ್ ಪಿರೇರ ಇವರನ್ನು ಅಭಿನಂದಿಸಲಾಯಿತು. ವಿದ್ವಾನ್ ಶ್ರೀಧರ ಹೊಳ್ಳ ಅವರು ರೆಮೊನಾ ಅವರ ಸಾಧನೆಯನ್ನು ವಿವರಿಸಿದರು.


ಸಂಸ್ಕಾರ ಭಾರತಿಯ ಮಂಗಳೂರು ಘಟಕದ ಅಧ್ಯಕ್ಷರಾದ ಕೆ. ಪುರುಷೋತ್ತಮ್ ಭಂಡಾರಿ ಅವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಕಾರ ಭಾರತಿಯ ಮಾಜಿ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವಿದುಷಿ ಶ್ರೀಲತಾ ನಾಗರಾಜ್‌ ನಿರೂಪಿಸಿದರು. ಸಹ ಕಾರ್ಯದರ್ಶಿ ಮಾಧವ ಭಂಡಾರಿ ವಂದಿಸಿದರು.


ಭರತನಾಟ್ಯ ಕಲಾವಿದೆಯರಾದ ಶ್ರೀಕರಿ ಮತ್ತು ವಿದುಷಿ ಪ್ರಕ್ಷಿಲಾ ಜೈನ್‌ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸಂಸ್ಕಾರ ಭಾರತೀ ಪ್ರಾಂತ್ಯ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪ್ರಾಂತ್ಯ ಸಹ ಕೋಶಾಧಿಕಾರಿ ರಘುವೀರ್ ಗಟ್ಟಿ, ವಿದುಷಿ ರಾಜಶ್ರೀ ಉಳ್ಳಾಲ್, ಶಾರದಾಮಣಿ ಶೇಖರ್, ರತ್ನಾವತಿ ಬೈಕಾಡಿ, ತುಳು ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ವಿದ್ವಾನ್ ಚಂದ್ರಶೇಖರ ನಾವಡ, ಹಿರಿಯ ನೃತ್ಯ ಗುರುಗಳಾದ ಪ್ರತಿಭಾ ಸಾಮಗ, ಚಂದ್ರಪ್ರಭ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top