ಮುದ್ದುಕಂದ ಕೃಷ್ಣರ ಮೋಹಕ ಲೀಲೆ: ಕೆನರಾ ಶಿಕ್ಷಣ ಸಂಸ್ಥೆಯಲ್ಲಿ ಗೋಕುಲಾಷ್ಟಮಿ- 2025

Upayuktha
0


ಮಂಗಳೂರು: ಕೆನರಾ ಹೈಸ್ಕೂಲ್ ಅಸೋಸಿಯೇಷನ್, ಮಂಗಳೂರು, ಕೆನರಾ ಸಾಂಸ್ಕೃತಿಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಗೋಕುಲಾಷ್ಟಮಿ-2025 ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆವನ್ನು ಭವ್ಯವಾಗಿ ಆಯೋಜಿಸಲಾಯಿತು. ಭಾರತೀಯ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿ ಹಾಗೂ ಯುವ ಸಮುದಾಯದಲ್ಲಿ ಬೆಳೆಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.


ಟಿವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೆನರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ವಾಸುದೇವ ಕಾಮತ್ ಉದ್ಘಾಟಿಸಿದರು. ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಸದಸ್ಯರಾದ ಡಿ. ವಿಕ್ರಂ ಪೈ, ಸಿ.ಎ. ಗಿರಿಧರ ಕಾಮತ್, ಕೆನರಾ ಪ್ರೌಢಶಾಲೆ ಮೈನ್ ಇದರ ಸಂಚಾಲಕರಾದ ಅಶ್ವಿನಿ ಕಾಮತ್,  ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ಉಜ್ವಲ್ ಮಲ್ಯ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಮಮತಾ ಪೈ ಹಾಗೂ ಶ್ರೀಮತಿ ಸುಶ್ಮಿತಾ ಅವರು ಉಪಸ್ಥಿತರಿದ್ದರು.


ಸ್ಪರ್ಧೆಯನ್ನು ಕಂದ ಕೃಷ್ಣ (6 ತಿಂಗಳು– 1 ವರ್ಷ), ಮುದ್ದು ಕೃಷ್ಣ (1–2 ವರ್ಷ), ಬಾಲ ಕಿಶೋರ್ ಕೃಷ್ಣ (3– 4 ವರ್ಷ), ಕೃಷ್ಣ ಲೀಲಾ (4–6 ವರ್ಷ), ಮತ್ತು ಯಶೋಧಾ ಕೃಷ್ಣ (ತಾಯಿ-ಮಗು– 6 ತಿಂಗಳು–6 ವರ್ಷ) ವಿಭಾಗಗಳಲ್ಲಿ ನಡೆಸಲಾಯಿತು. ನೂರಕ್ಕಿಂತ ಹೆಚ್ಚುಮಕ್ಕಳು ಭಾಗವಹಿಸಿ ಕೃಷ್ಣನ ವಿವಿಧ ರೂಪಗಳನ್ನು ಪ್ರದರ್ಶಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು. ಇಡೀ ಸಭಾಂಗಣವೇ ಕೃಷ್ಣಮಯವಾಗಿತ್ತು.


ಒಟ್ಟು ಐದು ವಿಭಾಗಗಳ ಈ ಸ್ಪರ್ಧೆಯಲ್ಲಿ ವಿದುಷಿ ಭಾವನ ವಿಷ್ಣುಮೂರ್ತಿ, ದೀಪಕ್ ಕುಮಾರ್ ಕಿನ್ನಿಮುಲ್ಕಿ, ಪುನೀತ್ ರಾಜ್, ಭಾರ್ಗವಿ ನಾಯಕ್, ನೂತನ್ ಕಾಮತ್ ಹಾಗೂ ರಾಹುಲ್ ಆರ್ ಶ್ರೀಯಾನ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಪಡೆದುಕೊಂಡವರಿಗೆ ಕ್ರಮವಾಗಿ ₹10,000, ₹5,000 ಮತ್ತು ₹3,000 ನಗದು ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಸಂಘಟಕರ ಪರವಾಗಿ ಡಿ. ವಾಸುದೇವ ಕಾಮತ್ ಮಾತನಾಡಿ, “ಮಕ್ಕಳಲ್ಲಿ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಬೆಳೆಸುವ ಪ್ರಯತ್ನದಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ತರ ಪಾತ್ರ ವಹಿಸುತ್ತವೆ” ಎಂದು ಅಭಿಪ್ರಾಯಪಟ್ಟರು.


ಸಂಪೂರ್ಣ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದ ಸಂಘಟಕರು, ಸ್ಪರ್ಧಾಳುಗಳು ಹಾಗೂ ಪೋಷಕರು ಮತ್ತು ತೀರ್ಪುಗಾರರು ಅಭಿನಂದ ನಾರ್ಹರಾಗಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top