ತಿಳಿದು ಬರುವುದು ಜನನ, ತಿಳಿಯದೇ ಬರುವುದು ಮರಣ, ತಿಳಿದು ಬದುಕುವುದೇ ಜೀವನ!
ಜೀವನ ಒಂದು test, ಸಂತೋಷ ಒಂದು Rest, ಹೆಚ್ಚು ಯೋಚಿಸುವುದು waste, ಏಕೆಂದರೆ ನಾವೇ ಈ ಜಗತ್ತಿನಲ್ಲಿ Guest, ಆದ್ದರಿಂದ ನೀವು ಸಂತೋಷವಾಗಿರಿ ಮತ್ತು ಇತರರನ್ನು ಸಂತೋಷವಾಗಿಡಿ, ಇದು ನಮಗೇ best!
ಪಡೆದುಕೊಳ್ಳುವ ಆತುರದಲ್ಲಿ ನಾವು ಕಳೆದು ಕೊಂಡದ್ದೇ ಜಾಸ್ತಿ. ಏಕೆಂದರೆ ನಾವು ಹೊಸತನ್ನು ಪಡೆದುಕೊಳ್ಳುವ ಅವಸರದಲ್ಲಿ, ನಮ್ಮಲ್ಲಿ ಈಗ ಅಡಕವಾಗಿರುವ ಅಮೂಲ್ಯವಾದವುಗಳನ್ನು ಕಳೆದು ಕೊಳ್ಳುತ್ತೇವೆ. ಅದು ವಸ್ತುವಾಗಿರಬಹುದು ಅಥವಾ ಬಾಂಧವ್ಯವಾಗಿರಬಹುದು!
ಒಂದು ತೊಟ್ಟು ನೀರು ಸಹ ಸೋಕದಂತೆ ಸಮುದ್ರವನ್ನು ದಾಟಬಹುದು, ಆದರೆ ಒಂದು ಹನಿ ಕಣ್ಣೀರು ಹಾಕದೆ ಜೀವನ ಎಂಬ ಸಮುದ್ರದಾಟಲು ಕಷ್ಟ.
ಕಷ್ಟವೆಂಬುದು ಸ್ವಭಾವತಃ ಸುಖಕ್ಕಿಂತ ಒಳ್ಳೇಯದು. ಅದು ಎದುರಾಗಿದ್ದಾಗಷ್ಟೇ ಕಾಡುತ್ತದೆ. ಆದರೆ ಸುಖ ಹಾಗಲ್ಲ. ಅದು ಕೈಗೆ ಸಿಗುವ ತನಕ ಅದಕ್ಕಾಗಿ ಚಡಪಡಿಸುವಂತೆ ನರಳುವಂತೆ ಮಾಡುತ್ತದೆ!
ಅನ್ನದ ಮುಂದೆ ಮತ್ತು ಅಮ್ಮನ ಮುಂದೆ ಎಂದಿಗೂ ಅಹಂಕಾರ ತೋರಿಸಬೇಡಿ! ಇಂದು ಅರಳಿ ನಾಳೆ ಬಾಡುವಂತಹ ಹೂವಿಗಿರುವ ಆತ್ಮವಿಶ್ವಾಸದ ನಗು ದೀರ್ಘಾಯಸ್ಸಿರುವ ನಮ್ಮಲ್ಲಿ ಕಾಣೆಯಾಗುತ್ತಿದೆ!
ಕಾಣದ ನೋವ ತೋರುವ ಬದಲು ಮರೆಮಾಚಿ ನಗುವುದೇ ಲೇಸು! ಬದುಕು ಒಂದು ಭ್ರಮೆ. ಸಂಬಂಧ ಸಂಸಾರ ನಾಟಕ. ನನ್ನವರು ನನಗಾಗುವರು ಎಂಬುದು ಸುಳ್ಳು. ಬದುಕು ಎಂಬುವುದು ಮಿಥ್ಯ. ಸಾವು ಒಂದೇ ಸತ್ಯ!
ದುಡಿಮೆ ದುಡಿಮೆ ಅಂತ ದೇಹಕ್ಕೆ ವಿಶ್ರಾಂತಿ ಕೊಡದೇ ಹೋದರೆ ನೀನು ದುಡಿದದ್ದೆಲ್ಲಾ ಪರರಿಗೆ ವಿಶ್ರಾಂತಿ ಪಡೆಯಲು ಕೊಟ್ಟು ನೀನು ಶಾಶ್ವತ ವಿಶ್ರಾಂತಿ ಪಡೆಯುವೆ!
ಜೈ ಶ್ರೀ ಕೃಷ್ಣ
- ಗೀತಾ ಭಾಸ್ಕರ್, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


