ಮೂಡಬಿದ್ರೆ: ಹೆದ್ದಾರಿ ಭೂಸ್ವಾಧೀನ- ಪರಿಹಾರ ಪಾವತಿ ಆಗಸ್ಟ್ 30 ರಂದು

Upayuktha
0

ಪ್ರಾತಿನಿಧಿಕ ಚಿತ್ರ


ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸಾಣೂರು - ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಮಾಲೀಕರಿಗೆ ಪರಿಹಾರ ಪಾವತಿ ಹಾಗೂ ಕ್ಲೈಮ್‍ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮ ಆಗಸ್ಟ್ 30 ರಂದು ಬೆಳಿಗ್ಗೆ 10.30 ಗಂಟೆಗೆ ಮೂಡಬಿದ್ರೆಯ ತಾಲೂಕು ಆಡಳಿತ ಸೌಧ ಸಭಾಭವನದಲ್ಲಿ ನಡೆಯಲಿದೆ.


ಸಾಣೂರು, ಬೆಳುವಾಯಿ, ಪಡುಮಾರ್ನಾಡ್, ಮಾರ್ಪಾಡಿ, ಪುತ್ತಿಗೆ, ತೋಡಾರು, ಬಡಗಮಿಜಾರು, ತೆಂಕ ಮಿಜಾರು ಗ್ರಾಮಗಳ ಜಮೀನಿನ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ಪರಿಹಾರ ಮೊತ್ತವನ್ನು ಪಡೆಯಬಹುದು. ಅದಾಲತ್ ಕಾರ್ಯಕ್ರಮದಲ್ಲಿ ಪರಿಹಾರ ಪಡೆಯಲು ಕ್ಲೈಮ್ ಸಲ್ಲಿಸಿದ ಭೂಮಾಲೀಕರು ಅವಾರ್ಡ್ ನೋಟಿಸ್‍ನಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಹಾಜರಾಗಿ ಕ್ಲೈಮ್ ಸಲ್ಲಿಸುವಂತೆ ಹಾಗೂ ಈಗಾಗಲೇ ಕ್ಲೈಮ್ ಸಲ್ಲಿಸಿದ ಭೂಮಾಲೀಕರು ಹಾಜರಾಗಿ ಅಗತ್ಯ ದಾಖಲೆಗಳಿಗೆ ಸಹಿ ಮಾಡಬೇಕು.


ಈ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂ ಸಂತ್ರಸ್ತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಮುಹಮ್ಮದ್ ಇಸಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top