ಮೊಂಟೆಪದವು: ಅದಮ್ಯ ಚೇತನಾ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ

Upayuktha
0


ಉಳ್ಳಾಲ: ಸೇವಾಭಾರತಿ (ರಿ) ಮಂಗಳೂರು ಸಂಸ್ಥೆಯು ಉಳ್ಳಾಲ ತಾಲೂಕಿನ ನರಿಂಗಾನದ ಮೊಂಟೆಪದವಿನ “ಮಾಧವ ವನ”ದಲ್ಲಿ ನಡೆಸುತ್ತಿರುವ ಅದಮ್ಯ ಚೇತನಾ ದಿವ್ಯಾಂಗ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.


ನರಿಂಗಾನ ಶ್ರೀ ದುರ್ಗಾಪರಮೇಶ್ವರಿ ಮಠದ ಎಂ.ಸಿ.ಶಂಕರ ಭಟ್ ಇವರು ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯ ದಿನದ ಶುಭಾಶಂಸನೆಗೈದರು. ನಂತರ ಶಾಲೆಯ ವಿಶೇಷ ಮಕ್ಕಳಿಂದ ದೇಶಭಕ್ತಿಯನ್ನು ಒಳಗೊಂಡ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇವು ಎಲ್ಲರ ಮೆಚ್ಚುಗೆಗೆ ಪಾತ್ರವಾದುವು.

 

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಪೃಥ್ವಿಪಾಲ್, ಶಾಲಾ ಶಿಕ್ಷಕ ಶಿಕ್ಷಕೇತರರು, ಪೋಷಕರು, ಸ್ವಯಂಸೇವಕರು, ಊರ ಮಹನೀಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಮಕ್ಕಳಿಗೆ ಸಿಹಿತಿಂಡಿ ಹಂಚಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top