ನಗರದ ಪರಿಸರ ಮಾಲಿನ್ಯ ತಗ್ಗಿಸಲು ಮಿಯಾವಾಕಿ ಅರಣ್ಯ ಉತ್ತಮ

Upayuktha
0


ಸುರತ್ಕಲ್‌: ಇಂದಿನ ದಿನಗಳಲ್ಲಿ  ನಗರ ಪ್ರದೇಶಗಳಲ್ಲಿ ಪರಿಸರ ಮಾಲಿನ್ಯವು ಹೆಚ್ಚಾಗುತ್ತಿದ್ದು ಅದರ ಪ್ರಮಾಣವನ್ನು ಕಡಿಮೆಗೊಳಿಸಲು ಮಿಯಾವಾಕಿ ನಗರ ಅರಣ್ಯ ಯೋಜನೆ ಅತ್ಯುತ್ತಮ ಪರಿಹಾರವಾಗಿದೆ. ಫಲ ಹಾಗೂ ಪುಷ್ಪಗಳನ್ನು ನೀಡುವ ಪ್ರಾದೇಶಿಕ ಅನನ್ಯತೆಯ ಗಿಡಗಳನ್ನು ನೆಡುವ ಮೂಲಕ ವಿವಿಧ ಜೀವ ಸಂಕುಲಕ್ಕೂ ಆಸರೆ ಒದಗಿಸಲು ಸಾಧ್ಯ. ಎಂದು 3181ಜಿಲ್ಲಾ ರೋಟರಿಯ ವಲಯ 2ರ ಸಹಾಯಕ ಗವರ್ನರ್ ಮತ್ತು ದಕ್ಷಿಣ ಕನ್ನಡ ರೆಡ್ ಕ್ರಾಸ್ ನ ಜಿಲ್ಲಾ ಅಧ್ಯಕ್ಷ ರೊ. ಎಂಪಿಹೆಚ್ ಎಫ್ ಸಿಎ ಶಾಂತರಾಮ್ ಶೆಟ್ಟಿ ನುಡಿದರು.


ಅವರು ಸುರತ್ಕಲ್ ರೋಟರಿ ಕ್ಲಬ್ ರೋಟರಿ ಜಿಲ್ಲಾ ಯೋಜನೆ ಯಾಗಿ ಕಾಟಿಪಳ್ಳ 3ನೇ ಬ್ಲಾಕ್ ನ ಹಿಂದು ರುದ್ರಭೂಮಿಯಲ್ಲಿ ಸುರತ್ಕಲ್ ನಾಗರಿಕ ಸಲಹಾ ಸಮಿತಿಯ ನಿರ್ವಹಣೆ ಮತ್ತು ಅಭಿವೃದ್ದಿಪಡಿಸು ವಿಕೆಯ ಸಹಯೋಗದಲ್ಲಿ  ಕಾಟಿಪಳ್ಳ 3ನೇ ಬ್ಲಾಕ್ ಹಿಂದು ರುದ್ರ ಭೂಮಿ ಅಭಿವೃದ್ಧಿ ಮತ್ತು ನಿರ್ವಹಣಾ ಸಮಿತಿಯ ಸಹಕಾರದೊಂದಿಗೆ ರೂಪಿಸಿರುವ ಮಿಯಾವಾಕಿ ನಗರ ಅರಣ್ಯವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


ಮುಂದಿನ ಯುವ ತಲೆಮಾರಿಗೆ ಮಾಲಿನ್ಯ ರಹಿತ ಪರಿಸರ ವ್ಯವಸ್ಥೆಯನ್ನು ವರ್ಗಾಯಿಸುವ ಹೊಣೆಗಾರಿಕೆ ನಮ್ಮದಾಗಿದೆ. ಸುರತ್ಕಲ್ ರೋಟರಿ ಕ್ಲಬ್ ಆದ್ಯತೆಯ ನೆಲೆ ಯಲ್ಲಿ ನಗರ ಅರಣ್ಯಗಳನ್ನು ರೂಪಿಸುತ್ತಿದ್ದು ಉತ್ತಮ ಮಾದರಿ ಯೋಜನೆಯನ್ನು ಕಟ್ಟಿಕೊಟ್ಟಿದ್ದಾರೆ ಎಂದರು. ಝೋನಲ್ ಲೇಫ್ಟಿನೆಂಟ್ ಸಂದೀಪ್ ರಾವ್ ಇಡ್ಯಾ ಶುಭ ಹಾರೈಸಿದರು.


ಸುರತ್ಕಲ್ ರೋಟರಿಯ ಜಿಲ್ಲಾ ಯೋಜನೆಯ ಸಂಯೋಜಕ ಮಾತನಾಡಿ, ಕಡಿಮೆ ಪ್ರದೇಶದಲ್ಲಿ ಹೆಚ್ಚು ಗಿಡಗಳನ್ನು ನೆಡುವ ಮೂಲಕ ಉತ್ತಮ ಅರಣ್ಯ ಬೆಳೆಸುವ ಪರಿಕಲ್ಪನೆ ಇದಾಗಿದ್ದು ಪಶ್ಚಿಮ ಘಟ್ಟ ಪ್ರದೇಶದ ಬೆಳೆಯುವ ಗಿಡಗಳನ್ನು ನೆಡಲಾಗಿದೆ ಎಂದರು.


ಸುರತ್ಕಲ್ ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ರಾಮ್ ಮೋಹನ್ ವೈ. ವಂದಿಸಿದರು. ಕೋಶಾಧಿಕಾರಿ ಮೋಹನ್ ರಾವ್ ಹೆಚ್., ಉಪಾಧ್ಯಕ್ಷ ರಮೇಶ್ ರಾವ್ ಮಧ್ಯ, ಸೇವಾ ನಿರ್ದೇಶಕ ಕೃಷ್ಣಮೂರ್ತಿ, ಪಾದೆಬೆಟ್ಟು ಶ್ರೀನಿವಾಸ ರಾವ್, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಯ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್, ಟ್ರಸ್ಟಿ ಆನಂದ ಭಂಡಾರಿ ಹೊಸಬೆಟ್ಟು ಉಪಸ್ಥಿತರಿದ್ದರು. ಸುಮಾರು 180 ವೈವಿಧ್ಯಗಳ ಗಿಡಗಳನ್ನು ನೆಡಲಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top