ಪರ್ಕಳ: ಮಂಗಳ ಕಲಾ ಸಾಹಿತ್ಯ ವೇದಿಕೆ ಪರ್ಕಳ ದಿನಾಂಕ 3 ಅಗಸ್ಟ್ ಭಾನುವಾರದಂದು ಕೆಳಪರ್ಕಳದ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿ 20025/26ನೇ ಸಾಲಿನ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ವೇದಿಕೆಯ ನೂತನ ಅಧ್ಯಕ್ಷರನ್ನಾಗಿ ಆಧ್ಯಾತ್ಮಿಕ ಚಿಂತಕರು ಹಾಗೂ ಪ್ರವಚನಕಾರರಾದ ನಟರಾಜ್ ಪರ್ಕಳ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ವೇದಿಕೆಯ ಗೌರವ ಅಧ್ಯಕ್ಷರಾಗಿ ಕೆ. ಪ್ರಕಾಶ್ ಶೆಣೈ ಪರ್ಕಳ, ಶ್ರೀನಿವಾಸ ಉಪಾಧ್ಯ, ಪರ್ಕಳ; ಸಂಚಾಲಕರಾಗಿ ಎಂ. ಮಂಜುನಾಥ ಉಪಾಧ್ಯ ಪರ್ಕಳ ಸಹ ಸಂಚಾಲಕರಾಗಿ ಗೋಪಿ ಹಿರೇಬೆಟ್ಟು; ಪೋಷಕರಾಗಿ ಶ್ರೀಧರ್ ಭಟ್ ನೆಲ್ಲಿಕಟ್ಟೆ ಹಿರೇಬೆಟ್ಟು, ಭುವನ ಪ್ರಸಾದ್ ಹೆಗ್ಡೆ ಮಣಿಪಾಲ, ಸರ್ವೋದಯ ಶೆಟ್ಟಿಗಾರ್ ಪರ್ಕಳ, ಉಪಾಧ್ಯಕ್ಷರಾಗಿ ಅನಂತರಾಮ ನಾಯಕ್ ಸಣ್ಣಕ್ಕಿಬೆಟ್ಟು, ರಾಜೇಶ್ ನಾಯಕ್ ಸಣ್ಣಕ್ಕಿಬೆಟ್ಟು, ಗಣೇಶ್ ಸಣ್ಣಕ್ಕಿಬೆಟ್ಟು, ಕೃಷ್ಣ ನಾಯಕ್ ಸಣ್ಣಕ್ಕಿಬೆಟ್ಟು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ, ಕೋಶಾಧಿಕಾರಿಯಾಗಿ ಸಂದೀಪ್ ನಾಯ್ಕ್ ಕಬ್ಯಾಡಿ, ಜೊತೆ ಕಾರ್ಯದರ್ಶಿಯಾಗಿ ಸುಧಾಕರ್ ನಾಯಕ್ ಕಬ್ಯಾಡಿ, ಸಂತೋಷ್ ಕುಮಾರ್ ಸಣ್ಣಕ್ಕಿಬೆಟ್ಟು, ಸುಧೀರ್ ಕುಮಾರ್ ನಗರ ಬೆಟ್ಟು; ಸಂಘಟನಾ ಕಾರ್ಯದರ್ಶಿಯಾಗಿ ಗುರುಪ್ರಸಾದ್ ಕಬ್ಯಾಡಿ ಸಂತೋಷ್ ಪ್ರಭು ಕಬ್ಯಾಡಿ, ಬಸವರಾಜ್ ನಡಿದಾರೆ, ರಾಘವೇಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು; ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯಕುಮಾರ್ ಆಲಂಬಿ, ಗಣೇಶ್ ಕುಲಾಲ್ ಕೆಳ ಪರ್ಕಳ, ಗೌರವ ಸಲಹೆಗಾರರಾಗಿ ಅಶೋಕ್ ಸಣ್ಣಕ್ಕಿ ಬೆಟ್ಟು, ಮೌನೇಶ್ ಆಚಾರ್ಯ ಕೆಳಪರ್ಕಳ, ಪಿ. ರವಿರಾಜ್ ಆಚಾರ್ಯ ಪರ್ಕಳ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಕಾರ್ಯಕಾರಿ ಸಮಿತಿಯ ಸದಸ್ಯರು ನಾಗರಾಜ ಪ್ರಭು, ರಾಘವೇಂದ್ರ ಪ್ರಭು ಮಾಣಿಬೆಟ್ಟು, ರಾಜೇಶ್ವರ ಶೆಟ್ಟಿಗಾರ್ ಸತೀಶ್ ಶೆಟ್ಟಿಗಾರ್ ಆಯ್ಕೆಯಾಗಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ