ಮಹೀಂದ್ರಾದಿಂದ 35 ಡೀಲರ್ ಶಿಪ್ ಆರಂಭ

Chandrashekhara Kulamarva
0


ಮಂಗಳೂರು: ರಾಜ್ಯದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವ ಕಾರ್ಯತಂತ್ರದ ಅಂಗವಾಗಿ ಮಹೀಂದ್ರಾದ ಟ್ರಕ್ ಮತ್ತು ಬಸ್ ವ್ಯವಹಾರವು ರಾಜ್ಯದಲ್ಲಿ ಅತ್ಯಾಧುನಿಕ 35 ಡೀಲರ್'ಶಿಪ್‍ಗಳನ್ನು ಆರಂಭಿಸಿದೆ.

9 ಸೇವಾ ಬೇ ಹೊಂದಿರುವ ಈ ಸೌಲಭ್ಯವು ದಿನಕ್ಕೆ 8 ಕ್ಕೂ ಹೆಚ್ಚು ವಾಹನಗಳಿಗೆ ಸೇವೆ ನೀಡಲಿದೆ. ಚಾಲಕ ವಸತಿ, 24 ಗಂಟೆ ತಡೆ ರಹಿತ ಸೇವೆ ಮತ್ತು ಎಡಿ ಬ್ಲೂ ಸೇವೆ ಸಹ ಒದಗಿಸಲಿದೆ ಎಂದು ಎಸ್‍ಎಂಎಲ್ ಇಸುಜು ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ, ಏರೋಸ್ಪೇಸ್ & ಡಿಫೆನ್ಸ್, ಟ್ರಕ್ಸ್, ಬಸ್‍ಗಳು ಮತ್ತು ನಿರ್ಮಾಣ ಸಲಕರಣೆಗಳ ಅಧ್ಯಕ್ಷರು, ಉದ್ಯಮ ಸಮೂಹದ ಆಡಳಿತ ಮಂಡಳಿ ಸದಸ್ಯ ವಿನೋದ್ ಸಹಾಯ್ ವಿವರಿಸಿದ್ದಾರೆ.

ಹೊಸದಾಗಿ ಆರಂಭವಾದ ನಾರ್ತ್‍ಸ್ಟಾರ್ ಮೋಟರ್ಸ್, ಮಹೀಂದ್ರಾ ಟ್ರಕ್ಸ್ ಮತ್ತು ಬಸ್‍ಗಳ 84 ನೇ ಡೀಲರ್‍ಶಿಪ್ ಆಗಿದೆ. ಒಟ್ಟಾಗಿ, ಮಹೀಂದ್ರಾ ಟ್ರಕ್ಸ್ ಮತ್ತು ಬಸ್‍ಗಳು ಮತ್ತು ಎಸ್‍ಎಂಎಲ್ ಈಗ ದೇಶಾದ್ಯಂತ 185 ಡೀಲರ್‍ಶಿಪ್‍ಗಳು ಮತ್ತು ಟ್ರಕ್‍ಗಳು ಮತ್ತು ಬಸ್‍ಗಳಿಗಾಗಿ 597 ಅಧಿಕೃತ ಕಾರ್ಯಾಗಾರಗಳನ್ನು ಹೊಂದಿದ್ದು, ನಮ್ಮ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆ ಒದಗಿಸುತ್ತಿದೆ ಎಂದು ಎಸ್‍ಎಂಎಲ್ ಇಸುಜು ಲಿಮಿಟೆಡ್‍ನ ಇಡಿ ಮತ್ತು ಸಿಇಒ ಡಾ. ವೆಂಕಟ್ ಶ್ರೀನಿವಾಸ್ ಹೇಳಿದ್ದಾರೆ.

ಮಹೀಂದ್ರಾ ಗ್ರೂಪ್ ಈಗ ಟ್ರಕ್‍ಗಳು ಮತ್ತು ಬಸ್‍ಗಳಲ್ಲಿ ಸುಮಾರು ಶೇ .7 ಮಾರುಕಟ್ಟೆ ಪಾಲನ್ನು ಹೊಂದಿದೆ, ಐ & ಎಲ್, ಸಿವಿ ಬಸ್‍ಗಳಲ್ಲಿ 24% ಮಾರುಕಟ್ಟೆ ಪಾಲನ್ನು ಹೊಂದಿದೆ. ನಾವು 2031ರ ಆರ್ಥಿಕ ವರ್ಷದ ವೇಳೆಗೆ ನಮ್ಮ ಮಾರುಕಟ್ಟೆ ಪಾಲನ್ನು ಶೇ. 10-12 ಮತ್ತು 2036 ವಿತ್ತೀಯ ವರ್ಷದ ವೇಳೆಗೆ ಶೇ. 20 ಕ್ಕಿಂತ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ' ಎಂದು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top