ಮಾಹಿ ಕಿರುಚಿತ್ರದ ಮೊದಲ ಪೋಸ್ಟರ್ ಬಿಡುಗಡೆ

Upayuktha
0


ಪುತ್ತೂರು: ದೃಶ್ಯ ಮೂವೀಸ್ ಅರ್ಪಿಸುವ ಅಜಿತ್ ಬಿಟಿ ನಿರ್ಮಾಣದ ಕೀರ್ತನ್ ಶೆಟ್ಟಿ ಸುಳ್ಯ ಕಥೆ ಹಾಗೂ ನಿರ್ದೇಶನದ ಹೊಸ ಕಿರುಚಿತ್ರದ ಟೈಟಲ್ ರಿವಿಲ್ ನವರಸರಾಜ ಭೋಜರಾಜ್ ವಾಮಂಜೂರು ರವರು ಮಾಡಿದರು.


ಶ್ರೀಯುತ ನನ್ಯ ಅಚ್ಚುತ ಮೂಡಿತ್ತಾಯರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಶ್ವರಮಂಗಲದ ಹನುಮಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿನಿಮಾದ ವಿತರಕರಾದ ಬಾಲಕೃಷ್ಣ ಶೆಟ್ಟಿ, ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ದೇಶಕರಾದ ರಝಾಕ್ ಪುತ್ತೂರು, ಧರ್ಮಚಾವಡಿ ಚಿತ್ರದ ನಿರ್ಮಾಪಕರಾದ ಜಗದೀಶ್ ಅಮೀನ್ ನಡುಬೈಲು ಮತ್ತು ನಿರ್ದೇಶಕರಾದ ನಿತಿನ್ ರೈ ಕುಕ್ಕುವಳ್ಳಿ, ತೆನ್ಕಾಯಿ ಮಲೆ ಚಿತ್ರದ ನಿರ್ದೇಶಕರಾದ ರವಿಚಂದ್ರ ರೈ ಮೂಡೂರು  ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. 



ಚಿತ್ರದ ಚಿತ್ರೀಕರಣವು ಕಾವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದು ಧರ್ಮ ಚಾವಡಿ ಚಿತ್ರದ ಸಹ ನಿರ್ದೇಶಕ ಕೀರ್ತನ್ ಶೆಟ್ಟಿ ಸುಳ್ಯ ಇವರ ನಿರ್ದೇಶನದಲ್ಲಿ, ಪ್ರಶಾಂತ್ ಶೇಣಿ ಇವರ ಛಾಯಾಗ್ರಹಣದಲ್ಲಿ, ಶ್ರೀನಾಥ್ ಪವರ್ ಇವರ ಸಂಕಲನದಲ್ಲಿ, ಭವಿಷ್ಯತ್ ಇವರ ಹಿನ್ನೆಲೆ ಗಾಯನದಲ್ಲಿ, ಮೂಡಿಬಂದಿದೆ. ಚಿತ್ರದ ಸಹ ಬರಹಗಾರರಾಗಿ ಜೈದೀಪ್ ರೈ, ಸುಪ್ರೀತ ಕೆಎಸ್, ಹಿತಶ್ರೀ ಶೆಟ್ಟಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಯಶ್ವಿತ್ ಕಾವ್ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಚಿತ್ರದ ಮುಖ್ಯ ಭೂಮಿಯಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ನಿರ್ಮಾಪಕರಾದ ದಯಾನಂದರ ಬೆಟ್ಟಂಪಾಡಿ, ಜೈದೀಪ್ ರೈ ಕೊರಂಗ, ಸುಪ್ರೀತ ಕೆಎಸ್, ಸುಷ್ಮ ಕೆಎಸ್, ನಿರಂಜನ್ ರಾವ್, ಪ್ರಮೀತ್ ರಾಜ್, ಹರ್ಷಿತ್ ಅರ್ಭಟ್ಕ, ಸೌಪರ್ಣಿಕಾ ರೈ, ಹಾಗೂ ಸುಮಾರು 15 ಬಾಲ ಕಲಾವಿದರು ಅಭಿನಯಿಸಿರುತ್ತಾರೆ. ಇಂದು ಚಿತ್ರತಂಡ ಈ ಮಾಹಿತಿಯನ್ನು ಹಂಚಿಕೊಂಡಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top