ತೆಂಕನಿಡಿಯೂರು ಕಾಲೇಜಿನಲ್ಲಿ ಗ್ರಂಥಪಾಲಕರ ದಿನಾಚರಣೆ

Upayuktha
0


ತೆಂಕನಿಡಿಯೂರು: ‘ಪುಸ್ತಕ ಪ್ರೀತಿಯಿಂದ ಜೀವನ ಪ್ರೀತಿ’ ಶ್ರೀಧರ ಶಾಸ್ತ್ರಿ, ಶಿಕ್ಷಣ ತಜ್ಞರು ಸರ್ಕಾರಿ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರುಇಲ್ಲಿ ಭಾರತದ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್. ರಂಗನಾಥನ್‍ ಜನ್ಮದಿನದ ಅಂಗವಾಗಿ ಗ್ರಂಥಪಾಲಕರ ದಿನಾಚರಣೆ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ತಜ್ಞ ಶ್ರೀಧರ ಶಾಸ್ತ್ರಿ ಪುಸ್ತಕ ಪ್ರೀತಿಯಿಂದಜೀವನಪ್ರೀತಿ ಬೆಳೆಯತ್ತದೆ, ಬದುಕಿನ ಅನಿರ್ವಾಯತೆಗಳಾದ ನೋವು ನಲಿವು, ಸುಖ ದುಃಖ ಸಂದರ್ಭದಲ್ಲಿ ಸಂಕಷ್ಟಗಳೆದುರಾದಗ, ಆತ್ಮ ವಿಶ್ವಾಶಕುಂದಿದಾಗ, ಶೂನ್ಯತೆ ಆವರಿಸಿದಾಗ ಪುಸ್ತಕಗಳ ಓದು ನಮ್ಮನ್ನು ಮತ್ತೆ ಪುನಶ್ಚೇತನಗೊಳಿಸುತ್ತದೆ. 



ಸಾಧಕರ ಸಾಧನೆಯಕಥೆ ವಿಶ್ವಾಸತುಂಬುತ್ತದೆ ಮತ್ತು ವಿಶಾಲ ದೃಷ್ಟಿಕೋನ ಬೆಳೆಸುತ್ತದೆ. ಮಾನವೀಯ ಮೌಲ್ಯಗಳ ಮಹತ್ವ ತಿಳಿಸುತ್ತದೆ ಎಂದರು. ಪುಸ್ತಕ ಪ್ರೀತಿ ಸಾಧನೆಗಳಿಗೆ ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ನಿತ್ಯಾನಂದ ಗಾಂವಕರ ಯುವಜನತೆಯಲ್ಲಿ ಕ್ಷೀಣಿಸುತ್ತಿರುವ ಓದುವ ಹವ್ಯಾಸದ ಕುರಿತು ಆತಂಕ ವ್ಯಕ್ತ ಪಡಿಸಿ ಯುವಜನತೆಯನ್ನು ಮತ್ತೆ ಪುಸ್ತಕ ಓದಿನ ಕಡೆ ಆಕರ್ಷಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಡಾ. ರಘುನಾಯ್ಕ್ ಅಥಿತಿಗಳನ್ನು ಸ್ವಾಗತಿಸಿದರೆ, ಪ್ರಶಾಂತ್ ನಿಲಾವರ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿ ನಿರೂಪಿಸಿದರು. ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಕಾರ್ಯಕ್ರಮ ಆಯೋಜಿಸಿದರು. ಇದೇ ಸಂದರ್ಭದಲ್ಲಿ ಡಾ. ಎಸ್. ಆರ್. ರಂಗನಾಥನ್‍ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಬೋಧಕ ಬೋಧಕೇತರ ವೃಂದದವರು ಉಪಸ್ಥಿತರಿದ್ದರು.



   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top