ಕೊಂಕಣಿಗೆ ಮನೆಯಲ್ಲಿ- ಸಮಾರಂಭದಲ್ಲಿ ಮೊದಲು ಮಾನ್ಯತೆ ಕೊಡೋಣ: ಪ್ರಶಾಂತ ಶೇಠ್

Upayuktha
0


ಮಂಗಳೂರು: ಮೊದಲು ನಮ್ಮ ಮನೆಯಲ್ಲಿ ಮಕ್ಕಳ, ಹಿರಿಯರ ಜೊತೆಯಲ್ಲಿ ನಾವು ಕೊಂಕಣಿ ಮಾತನಾಡಿ, ಮನೆಗೆ ಅದೇ ಆಧಿಕೃತ ಭಾಷೆಯನ್ನು ಮಾಡಿ ಭಾಷೆಯನ್ನು ಉಳಿಸಬೇಕು. ಅದೇ ಮಾನ್ಯತೆ. ನಂತರ ಬಂದು ಸಾರ್ವಜನಿಕ ಸಮಾರಂಭದಲ್ಲಿ ಭಾಷಣ ಮಾಡಲು ಯೋಗ್ಯತೆ ಬರುತ್ತದೆ ಎಂದು ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇದರ ಕಾರ್ಯಕಾರಿ ಸದಸ್ಯ ಎಸ್. ಎಲ್ ಪ್ರಶಾಂತ ಶೇಠ್ ನುಡಿದರು.


ಅವರು ಲೇಡಿಹಿಲ್ ವಿಕ್ಟೋರಿಯಾ ಶಾಲೆಯಲ್ಲಿ ನಡೆದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ವತಿಯಿಂದ ಕೊಂಕಣಿ ರಾಷ್ಟ್ರೀಯ ಮಾನ್ಯತೆ ದಿನಾಚರಣೆಯ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.


ಜಗತ್ತಿನ ಎಲ್ಲಾ ಭಾಷೆಗಳನ್ನು ನಾವು ಕಲಿಯಬೇಕು. ಅದರೆ ಮಾತೃಭಾಷೆ ಮರೆಯುವಂತೆ ಮಾಡಬಾರದು ಎಂದು ಕಿವಿಮಾತು ಹೇಳಿದರು.


ಮುಖ್ಯ ಅತಿಥಿ ಸಿಸ್ಟರ್ ಮರಿಯ ಕೃಪಾ ಎಸಿ ಮಾತನಾಡಿ, ನಮ್ಮ ತರಹದ ಎಲ್ಲಾ ಶಿಕ್ಷಣ ಸಂಸ್ಥೆಗಳು ಕೊಂಕಣಿ ಗೀತೆಗಳನ್ನು ಹಾಡಿ ಸಾಹಿತ್ಯದ ಮತ್ತು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಹಕಾರ ನೀಡುವ ಮೂಲಕ ಕೊಂಕಣಿ ಮಾತೃಭಾಷೆ ಅಭಿವೃದ್ಧಿಗೆ ಸಹಕಾರಿ ಆಗಬಹುದು ಎಂದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿ ದುಬಾಯ್ ಸೈಂಟ್ ಮೆರಿಸ್ ಚರ್ಚ್ ನ ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ‌ಜೋಸೆಫ್ ಮಥಾಯಸ್ ವಿದ್ಯಾರ್ಥಿಗಳ ಕೊಂಕಣಿ ಮಾತೃಭಾಷೆಯಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು,ಪ್ರಮಾಣಪತ್ರ ಮತ್ತು ಟ್ರೋಫಿ ವಿತರಿಸಿ ಮಾತನಾಡಿದರು.

ನಮ್ಮ ಭಾಷೆಯ ಕಡೆಗಣನೆ ನಾನು ಸಹಿಸುವುದಿಲ್ಲ. ಎಲ್ಲಿ ಹೋದರೂ ಮೊದಲು ಕೊಂಕಣಿಯಲ್ಲಿ ಮಾತನಾಡುವವರಿಗೆ ಆಧ್ಯತೆ ನೀಡುವ ಪರಿಪಾಠ ಇಟ್ಟುಕೊಂಡು ದುಬೈನಲ್ಲಿ ಉದ್ಯಮ ನಡೆಸುತ್ತಿದ್ದೇನೆ. ನೀವೂ ಹಾಗೆ ಮಾಡಿದರೆ ಕೊಂಕಣಿ ಮಾತೃಭಾಷೆ ಸೇವೆ ಮಾಡಿದಂತೆ ಎಂದರು.


ಮೊದಲಿಗೆ ಕಾರ್ಯಕ್ರಮ ಸಂಚಾಲಕ, ಕೆಬಿಎಂಕೆ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ, ಅಧ್ಯಕ್ಷ ಕೆ ವಸಂತ ರಾವ್ ಆಧ್ಯಕ್ಷತೆ ವಹಿಸಿ ಶುಭಾಶಯ ಕೋರಿದರು.


ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲಾ ಮುಖ್ಯಶಿಕ್ಷಕಿ ಸಿ. ಪುಷ್ಪಾ ಪಿಂಟೊ ಎಸಿ ಕೊಂಕಣಿ ಮಾತೃಭಾಷೆ ಮಾನ್ಯತೆ ಆಚರಿಸಲು ಸಹಕಾರಿ ಆದ ಎಲ್ಲಾ ಜನರಿಗೆ ಧನ್ಯವಾದ ಹೇಳಿದರು.


ಕೊಂಕಣಿ ಕ್ವಿಜ್ ಕೆಬಿಎಂಕೆ ಕಾರ್ಯಕಾರಿ ಸದಸ್ಯರು ನಡೆಸಿಕೊಟ್ಟರು.


ಹಿರಿಯ ಶಿಕ್ಷಕಿಯರಾದ  ವಿಲ್ಮಾ ಡಿಸೋಜ ಮತ್ತು ವಿಲ್ಮಾ ಲೋಬೊ  ವಂದಿಸಿದರು.  ಶಿಕ್ಷಕಿ ಸ್ವೀಟಿ ಡಿಸೋಜ ನಿರೂಪಿಸಿದರು. ಕೆಬಿಎಂಕೆ ಕಾರ್ಯಕಾರಿ ಸದಸ್ಯರಾದ ಗೀತಾ ಸಿ ಕಿಣಿ, ಮೀನಾಕ್ಷಿ ಪೈ, ಲಾರೆನ್ಸ್ ಪಿಂಟೊ, ರೋಬರ್ಟ್ ಮೆನೆಜಸ್, ಜೊಸ್ಸಿ ಪಿಂಟೊ, ಶಾಂತಿ ವೆರೊನಿಕಾ, ಎಡೊಲ್ಫಸ್ ಡಿಸೋಜ, ಸಹ ಕಾರ್ಯದರ್ಶಿ ಜೂಲಿಯೆಟ್‌ ಫೆರ್ನಾಂಡೀಸ್, ಕೊಂಕಣಿ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಪ್ರಭಾ ಅವರು ಇದ್ದರು. ಲೇಡಿಹಿಲ್ ವಿಕ್ಟೋರಿಯಾ ಸಂಸ್ಥೆಯ ಶಿಕ್ಷಕರು ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top