ಗಣೇಶ ಚತುರ್ಥಿ ಹಬ್ಬವು ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾಗಿದೆ. ಗಣೇಶ ಚತುರ್ಥಿಯನ್ನು ಎಲ್ಲ ಭಾರತದ ಧಾರ್ಮಿಕ ಕ್ಷೇತ್ರಗಳಲ್ಲಿ ಮಣ್ಣಿನಲ್ಲಿ ಮಾಡಿದಂತಹ ಗಣೇಶನ ವಿಗ್ರಹವನ್ನು ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲವೂ ಬದಲಾಗುತ್ತ ಹೋಗುತ್ತಿದೆ.
ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವುದು ನಮ್ಮ ಕರ್ತವ್ಯ. ಆದರೆ ದಿನ ಕಳೆದಂತೆ ಜನರು ಬದಲಾಗುತ್ತಿದ್ದಾರೆ. ಮಣ್ಣಿನಲ್ಲಿ ಮಾಡುವಂತಹ ವಿಗ್ರಹದ ಬದಲು ಪ್ಲಾಸ್ಟಿಕ್ ವಿಗ್ರಹ ತಂದು ಪೂಜೆಯನ್ನು ಮಾಡುತ್ತಿದ್ದಾರೆ. ದೇವರಿಗೆ ಶುದ್ಧವಾದ ಪರಿಮಳ ಪೂರಿತವಾಗಿರುವಂತಹ ಹೂವು, ತುಳಸಿದಳ, ಹಣ್ಣು ಇತ್ಯಾದಿಗಳನ್ನು ಇಟ್ಟು ಗಣೇಶನನ್ನು ಆರಾಧಿಸುತ್ತಾರೆ. ಇವುಗಳು ಪರಿಸರಕ್ಕೆ ಹಾನಿ ಮಾಡುತ್ತಿದೆ. ಪರಿಸರ ಸ್ನೇಹಿ ವಸ್ತುಗಳನ್ನು ಉಪಯೋಗಿಸೋಣ. ಪ್ಲಾಸ್ಟಿಕ್ ಕವರ್ ಗಳ ಬದಲು ಬಟ್ಟೆ ಚೀಲಗಳು, ಕಾಗದದ ಕವರ್ ಗಳು, ಮುಂತಾದವುಗಳನ್ನು ಬಳಸಿ ಗಣಪತಿಯನ್ನು ಆರಾಧಿಸೋಣ.
ಗಣೇಶನಿಗೆ ಶುದ್ಧವಾದ ವಸ್ತುಗಳನ್ನು ಇಟ್ಟು ಭಕ್ತಿಯಿಂದ ಪೂಜಿಸೋಣ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮೇಲೆ ಹಾನಿಕಾರಕ ಪರಿಣಾಮಗಳು ಉಂಟಾಗಿದ್ದರಿಂದ, ಪ್ಲಾಸ್ಟಿಕ್ ಮುಕ್ತ ಗಣೇಶಾಚಾರಣೆಗೆ ಎಲ್ಲರೂ ಒಗ್ಗಟ್ಟಿನಿಂದ ಮುಂದಾಗಬೇಕು.
-ಧೀರಜ್,
ವಿವೇಕಾನಂದ ಕಾಲೇಜು ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ