ಕುಂದಾಪುರ: ಗೆಳೆಯರ ಬಳಗ(ರಿ.) ಕಾರ್ಕಡ ಇದರ 37ನೇ ವಾರ್ಷಿಕ ಮಹಾಸಭೆಯು ಆ.10ರಂದು ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರ ಅಧ್ಯಕ್ಷತೆಯಲ್ಲಿ ಜರಗಿತು. ವಾರ್ಷಿಕ ವರದಿಯನ್ನು ಬಳಗದ ಕಾರ್ಯದರ್ಶಿ ಕೆ. ಶೀನ ಹಾಗೂ ಅಡಿಟ್ ಮಾಡಿದ 2024-2025 ರ ಆಯ ವ್ಯಯವನ್ನು ಕೋಶಾಧಿಕಾರಿ ಕೆ. ನಾಗರಾಜ ಉಪಾಧ್ಯ ಸಭೆಯಲ್ಲಿ ಮಂಡಿಸಿದರು. ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ನಂತರ ಕಾರ್ಯಕಾರಿಣಿ ಸಭೆಯಲ್ಲಿ ಈ ಕೆಳಗಿನವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷ-ಕೆ. ತಾರಾನಾಥ ಹೊಳ್ಳ, ಉಪಾಧ್ಯಕ್ಷ- ಕೆ. ಶಶಿಧರ ಮಯ್ಯ, ಕಾರ್ಯದರ್ಶಿ- ಕೆ. ನಾಗರಾಜ ಉಪಾಧ್ಯ, ಜೊತೆ ಕಾರ್ಯದರ್ಶಿ- ಕೆ. ಜಗದೀಶ ಆಚಾರ್ಯ, ಖಜಾಂಚಿ- ಕೆ. ಶೀನ, ಕಾರ್ಯಕಾರಿ ಸಮಿತಿ: ಕೆ. ಚಂದ್ರಕಾಂತ ನಾಯರಿ, ಕೆ. ಶ್ರೀಕಾಂತ ಐತಾಳ, ಕೆ. ಶ್ರೀಪತಿ ಆಚಾರ್ಯ, ಕೆ. ತಮ್ಮಯ್ಯ, ಕೆ. ಉದಯ ಐತಾಳ, ಕೆ. ರಾಘವೇಂದ್ರ ದೇವಾಡಿಗ, ಕೆ. ಶೇಖರ, ಕೆ. ರಘು ಭಂಡಾರಿ ಇವರುಗಳು ಆಯ್ಕೆ ಆಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


