ಬೆಂಗಳೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ನಡೆಸುವ 2024-25 ನೇ ಶೈಕ್ಷಣಿಕ ಸಾಲಿನ ವಿಶೇಷ ಸಂಗೀತ ನೃತ್ಯ ತಾಳವಾದ್ಯ ಪರೀಕ್ಷೆಯಲ್ಲಿ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಕುಮಾರಿ ಹೃದ್ಯಾ ಭಟ್ ಕೆ. 394/400 (98.5%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಉತ್ತೀರ್ಣರಾಗಿರುತ್ತಾರೆ.
ಈಕೆ ಬಿಜಿಎಸ್ ಪಬ್ಲಿಕ್ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ತನ್ನ ತಾಯಿ, ಭರತನಾಟ್ಯ ಗುರು ವಿದುಷಿ ಶ್ರೀಮತಿ ರೂಪಶ್ರೀ ಕೆ. ಎಸ್. ಅವರ ಶಿಷ್ಯೆಯಾಗಿದ್ದು, ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ಭರತನಾಟ್ಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತಾರೆ. ಈಕೆಯು ತನ್ನ ನೃತ್ಯದ ಸಾಧನೆಗೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ "ನಟನ ಕಲೈಕೊತ್ತೈ", "ಸಾಧಕಶ್ರೀ", "ಸ್ವರಶ್ರೀಮೋದ", "ಹವ್ಯಕ ಪಲ್ಲವ" ಪ್ರಶಸ್ತಿಗಳನ್ನು ಪಡೆದಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ