ಕಾಸರಗೋಡು: ದೀಪಾವಳಿ ನೇಮೋತ್ಸವ ಪೂರ್ವಭಾವಿ ಸಭೆ ಸಂಪನ್ನ

Upayuktha
0


ನಾಗರಕಟ್ಟೆ: ಪಳ್ಳದ ಕೊಟ್ಯ ಶ್ರೀ ಧೂಮಾವತಿ "ದೀಪಾವಳಿ ನೇಮೋತ್ಸವ "ಪೂರ್ವಭಾವಿ ಸಭೆ ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮ ಸಭಾ ಭವನದಲ್ಲಿ ಸಮಿತಿ ಗೌರವ ಅಧ್ಯಕ್ಷ ನಿರಂಜನ್ ಕೊರಕ್ಕೋಡು ಅಧ್ಯಕ್ಷತೆಯಲ್ಲಿ ನಡೆಯಿತು.


ಕಾಸರಗೋಡು ಕೋಟೆ ಬಾಗಿಲಿನಲ್ಲಿರುವ ಪಳ್ಳದಕೊಟ್ಯ ಶ್ರೀ ಧೂಮಾವತಿ ದೈವ ಕೋಲವು ಪ್ರತಿ ವರ್ಷ ದೀಪಾವಳಿ ಉತ್ಸವ ದಿನದಂದು ವೈಭವ ಪೂರ್ಣವಾಗಿ ಕಾಸರಗೋಡು ಕೋಟೆ ನಾಯಕರ ವಂಶಸ್ಥರಿಂದ ಸಮಾಜದ ಹಾಗೂ ಊರವರ ಸಹಕಾರದಿಂದ ಸಂಪ್ರದಾಯದಂತೆ ಭಕ್ತಿ ಪೂರ್ವಕ ನಡೆಸಲು ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಸಹಕರಿಸಲು ಸಮಿತಿ ಅಧ್ಯಕ್ಷರಾದ ನವೀನ್ ನಾಯಕ್ ಕರೆ ನೀಡಿದರು.


ನೇಮೋತ್ಸವಕ್ಕೆ ವಿವಿಧ ಉಪ ಸಮಿತಿಗಳನ್ನು ನೇಮಿಸಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯದರ್ಶಿ ಮೋಹನ್ ದಾಸ್, ಕೋಶಾಧಿಕಾರಿ ಡಾ. ವಾಮನ್ ರಾವ್ ಬೇಕಲ್, ದಿನೇಶ್ ನಾಗರಕಟ್ಟೆ, ಶಶಿಕಾಂತ್, ಪ್ರಸಾದ್, ಕೇಶವ, ವೈಶಾಕ್, ಪುನೀತ್, ನಿತಿನ್, ಉದಯಕುಮಾರ್, ವಿನೋದ್ ಕುಮಾರ್, ಪ್ರದೀಪ್ ನಾಯ್ಕ್, ಪ್ರಜ್ವಲ್ ನಾಯ್ಕ್ ಸಲಹೆ ಸೂಚನೆ ನೀಡಿದರು. ವಾಮನ್ ರಾವ್ ಬೇಕಲ್ ಸ್ವಾಗತಿಸಿ, ಮೋಹನ್ ದಾಸ್ ಕಾರ್ಯಕ್ರಮ ನಿರ್ವಹಿಸಿ, ಭಟ್ಟ ರಾಜ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top