ಐಮ್ಯಾಕ್ಸ್ ಬಿಗ್ ಸಿನಿ ಅವಾರ್ಡ್ಸ್ 2025 ಮುಡಿಗೇರಿಸಿದ ಕಲಬುರಗಿಯ ಶೆಟ್ಟಿ ಸಿನಿಮಾಸ್

Upayuktha
0

ಆಗಸ್ಟ್ 19ರಂದು ಚೆನ್ನೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ




ಕಲಬುರಗಿ: ಮನರಂಜನಾ ಕ್ಷೇತ್ರದಲ್ಲಿ ಕಲಬುರಗಿಯು ಹೆಮ್ಮೆಯ ಸಾಧನೆ ಮಾಡಿದ್ದು ಭಾರತೀಯ ಅತ್ಯುತ್ತಮ ಸಿನಿಮಾ ಥಿಯೇಟರ್ ಗಳಲ್ಲಿ ಕಲಬುರಗಿಯ ಶೆಟ್ಟಿ ಸಿನಿಮಾಸ್  ಪ್ರತಿಷ್ಠಿತ "ಐಮ್ಯಾಕ್ಸ್ ಬಿಗ್ ಸಿನಿ ಅವಾರ್ಡ್ಸ್ 2025" ಮುಡಿಗೇರಿಸಿಕೊಂಡಿದೆ. 


ಆಗಸ್ಟ್ 19ರಂದು ಚೆನ್ನೈಯಲ್ಲಿ ನಡೆಯಲಿರುವ ರಾಷ್ಟ್ರೀಯ ವೇದಿಕೆಯಲ್ಲಿ ಅತ್ಯುತ್ತಮ ರಂಗಭೂಮಿ ಪ್ರಶಸ್ತಿಯನ್ನು ಶೆಟ್ಟಿ ಸಿನಿಮಾಸ್ ಮಾಲಕರಾದ ಸಂಗಪ್ಪ ಶೆಟ್ಟಿ ರಾಷ್ಟ್ರೀಯ ಪ್ರಶಸ್ತಿಗೆಲ್ಲುವ ಮೂಲಕ ಕಲಬುರಗಿ ಯಂತಹ ಎರಡನೇ ದರ್ಜೆಯ ನಗರಗಳ ಪಟ್ಟಿಯಲ್ಲಿ (ಟಯರ್ 2) ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಈ ಮನ್ನಣೆಯು ಕಲಬುರಗಿ ನಗರವು ಭಾರತದ ಸಿನಿಮಾರಂಗದ ನಕ್ಷೆಯಲ್ಲಿ ಸ್ಥಾನ ಪಡೆದು ಕಲ್ಯಾಣ ಕರ್ನಾಟಕ ಭಾಗಕ್ಕೆ ಗರಿಯನ್ನು ಮೂಡಿಸಿದೆ. ಶೆಟ್ಟಿ ಸಿನಿಮಾಸ್ ನಲ್ಲಿ ಚಲನಚಿತ್ರ ವೀಕ್ಷಕರ ಅನುಭವಗಳೇ ರಾಷ್ಟ್ರೀಯ ಮಟ್ಟದ ಶ್ರೇಷ್ಠ ಪುರಸ್ಕಾರ ಪಡೆಯಲು ಮಾನದಂಡ ಆಗಿದೆ ಎಂದು ಸಂಗಪ್ಪ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ಮೂಲತಃ 2006 ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಗಿರಿಜಾಶಂಕರ್ ಶೆಟ್ಟಿ ಅವರಿಂದ ಸ್ಥಾಪಿಸಲ್ಪಟ್ಟ ಶೆಟ್ಟಿ ಸಿನಿಮಾಸ್ 2024 ರಲ್ಲಿ ಅಂತರಾಷ್ಟ್ರೀಯ ಮಾನದಂಡದಲ್ಲಿ ಬೃಹತ್ ನವೀಕರಣಕ್ಕೆ ಒಳಗಾಯಿತು.ಪ್ರಸ್ತುತ ಉತ್ತರ ಕರ್ನಾಟಕದ ಅತಿದೊಡ್ಡ ಬೆಳ್ಳಿ ಪರದೆಯ ಮಲ್ಟಿಪ್ಲೆಕ್ಸ್ ಆಗಿ ಹೆಸರುವಾಸಿ ಯಾಗಿದೆ. ಡಾಲ್ಬಿ ಅಟ್ಮಾಸ್ ಧ್ವನಿ, 4 ಕೆ ಲೇಸರ್ ಪ್ರೊಜೆಕ್ಷನ್, ಐಷಾರಾಮಿ ಆಸನ ಮತ್ತು ಶ್ರೇಷ್ಠ ದರ್ಜೆಯ ಬಾಣಸಿಗರಿಂದ ಸಿದ್ಧಪಡಿಸಲಾದ ಗೌರ್ಮೆಟ್ ಎಫ್  ಅಂಡ್ ಬಿ ಉಪಹಾರ ಮಳಿಗೆಗಳು ಸಿನಿಪ್ರಿಯರ ವಿಶೇಷ ಖಾದ್ಯ ತಾಣವಾಗಿ ಮನ ಸೆಳೆದಿದೆ. ಥಿಯೇಟರ್ ನ ನಾಲ್ಕು ಪರದೆಗಳಲ್ಲಿ ಪ್ರತಿಯೊಂದೂ ವಿಶಿಷ್ಟವಾದ, ಭವ್ಯವಾದ ಒಳಾಂಗಣವನ್ನು ಹೊಂದಿದ್ದು ಸಿನಿಮಾ ವೀಕ್ಷಕ ಅತಿಥಿಗಳಿಗೆ ಮರೆಯಲಾಗದ ಚಲನಚಿತ್ರ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. 


“ಈ ಮನ್ನಣೆ ನಮಗೆ ಕೇವಲ ಪ್ರಶಸ್ತಿಯಲ್ಲ, ಶೆಟ್ಟಿ ಸಿನಿಮಾಸ್ ಕುಟುಂಬದ ಪ್ರತಿಯೊಬ್ಬ ಸಿನಿ ಪ್ರಿಯರಿಗೆ ಹಾಗೂ ಸದಸ್ಯರಿಗೆ ಮತ್ತು ಮುಖ್ಯವಾಗಿ, ನಮ್ಮ ನಿಷ್ಠಾವಂತ ಅತಿಥಿಗಳಿಗೆ ಹೆಮ್ಮೆಯ ಕ್ಷಣವಾಗಿದೆ. ನಾವು ಯಾವಾಗಲೂ ಸಿನಿಮಾವನ್ನು ಆತ್ಮೀಯವಾಗಿ ಸಿನಿರಸಿಕರಿಗೆ ತಲುಪಿಸುವಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ರಾಷ್ಟ್ರೀಯ ಮಟ್ಟದ ಗುರುತಿಸುವಿಕೆಯ ಗೆಲುವು, ಉತ್ಸಾಹ ಮನೋರಂಜನ ಕ್ಷೇತ್ರದಲ್ಲಿ ಸಮರ್ಪಣೆಯ ಕರ್ತವ್ಯ ನಿಷ್ಠೆಗೆ ದೊರಕಿದೆ ಸನ್ಮಾನ.ಶೆಟ್ಟಿ ಸಿನಿಮಾಸ್‌ನ ಯಶಸ್ಸಿನ ಕಥೆ ಕೇವಲ ತಂತ್ರಜ್ಞಾನ ಮತ್ತು ಐಷಾರಾಮಿ ಬಗ್ಗೆ ಅಲ್ಲ, ಆದರೆ ಸಮುದಾಯ ಮತ್ತು ಸಂಸ್ಕೃತಿಯ ಬಗ್ಗೆ ಕನಿಷ್ಠಾವಧಿಯಲ್ಲಿ ರಂಗಭೂಮಿ ಚಲನಚಿತ್ರ ಪ್ರಿಯರಿಗೆ ಕೇಂದ್ರವಾಗಿ ಮಾರ್ಪಟ್ಟಿದೆ. ವಿಶ್ವ ದರ್ಜೆಯ ವಾತಾವರಣವನ್ನು ಕಾಯ್ದುಕೊಳ್ಳುವಾಗ ಪ್ರೀಮಿಯರ್‌ಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಅಭಿಮಾನಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ.


ಈ ರಾಷ್ಟ್ರೀಯ ಗೌರವದೊಂದಿಗೆ, ಶೆಟ್ಟಿ ಸಿನಿಮಾಸ್ ಪ್ರಾದೇಶಿಕ ಪ್ರೇಕ್ಷಕರಿಗೆ ವಿಶ್ವ ದರ್ಜೆಯ ಸಿನಿಮಾ ಅನುಭವಗಳನ್ನು ತರುವ ತನ್ನ ದೃಷ್ಟಿಕೋನವನ್ನು ಮುಂದೆಯೂ ಕಾಯ್ದುಕೊಳ್ಳಲಾಗುವುದು. ಕಲಬುರಗಿಯು ಭಾರತದ ಮನರಂಜನಾ ಭೂಪಟದಲ್ಲಿ ಹೆಮ್ಮೆಯ ಹೆಸರಾಗಿ ಉಳಿಯುತ್ತದೆ. ಹಿಂದುಳಿದಿರುವಿಕೆಯ ಕೀಳರಿಮೆ ಬಿಟ್ಟು ಪ್ರಯತ್ನದಿಂದ ಮುನ್ನಡೆದರೆ ಯಶಸ್ಸು ಸಾಧ್ಯ ಎಂಬುದು ಮನರಂಜನ ಕ್ಷೇತ್ರದಲ್ಲಿ ಸಾಬೀತುಪಡಿಸಲಾಗಿದೆ ಎಂದು ಎಂದು ಸಂಗಪ್ಪ ಶೆಟ್ಟಿ ಅವರ ಸ್ಪಷ್ಟ ಅಭಿಪ್ರಾಯವಾಗಿದೆ.


ಆಗಸ್ಟ್ 19 ರಂದು ಚೆನ್ನೈಯಲ್ಲಿ ಐ ಮ್ಯಾಕ್ಸ್ ಬಿಗ್ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾಲೋಕದ ಗಣ್ಯರು ಹಾಗೂ ವಿಶೇಷ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.


ರಾಷ್ಟ್ರೀಯ ಪ್ರಶಸ್ತಿಗೆ ಅಭಿನಂದನೆ:

ಕಲಬರಗಿಯ ಮಲ್ಟಿ ಫ್ಲೆಕ್ಸ್ ಥಿಯೇಟರ್ ಗಳಲ್ಲಿ ಶೆಟ್ಟಿ ಸಿನಿಮಾಸ್ ಗೆ ರಾಷ್ಟ್ರೀಯ ಮಟ್ಟದ ಐಮ್ಯಾಕ್ಸ್ ಬಿಗ್ ಸಿನಿಮಾ 2025 ಪ್ರಶಸ್ತಿ ಲಭಿಸಿರುವುದು ಕಲ್ಯಾಣ ಕರ್ನಾಟಕ ಭಾಗಕ್ಕೆ ಒಂದ ಗೌರವ ಎಂದು ಹಿರಿಯ ಉದ್ಯಮಿಗಳಾದ ಸತೀಶ್ ವಿ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ವೆಂಕಟೇಶ ಕಡೇಚೂರ್, ಮಹಾದೇವ ಗುತ್ತೇದಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಆರ್ ಪಿ ರೆಡ್ಡಿ, ಬಿಜೆಪಿಯ ಯುವ ಮುಖಂಡರಾದ ನಿತಿನ್ ವಿ.ಗುತ್ತೇದಾರ್, ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷರಾದ ರಾಜೇಶ್ ಜಗದೇವ ಗುತ್ತೇದಾರ್,ಜಿಲ್ಲಾ ಹೋಟೆಲ್ ಎಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ಮಾಲಾ ಕಣ್ಣಿ, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಉದ್ಯಮಿಗಳಾದ ರಾಜೇಶ್ ದತ್ತು ಗುತ್ತೇದಾರ್, ದಯಾನಂದ ಪೂಜಾರಿ, ಸತೀಶ್ ಸಲಗಾರ್, ಹೃದ್ರೋಗ ತಜ್ಞರಾದ ಡಾ. ಅರುಣ್ ಕುಮಾರ್ ಹರಿದಾಸ್, ಹಿರಿಯ ಸಾಹಿತಿ ಚಿ.ಸಿ ನಿಂಗಣ್ಣ ಮತ್ತಿತರರು ಶುಭ ಹಾರೈಸಿದ್ದಾರೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top