ಯುಎಇ ರಾಜಧಾನಿ ಅಬುಧಾಬಿಯಲ್ಲಿ ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆ

Chandrashekhara Kulamarva
0



ಅಬುಧಾಬಿ: ಈ ಬಾರಿಯ ಭಾರತದ 79ನೇ ಭಾರತದ ಸ್ವಾತಂತ್ರ್ಯ ದಿನಾಚರಣೆ ಯುಎಇ ರಾಜಧಾನಿ ಅಬುಧಾಬಿಯಲ್ಲಿರುವ ಭಾರತದ ರಾಯಭಾರಿ ಕಚೇರಿಯ ಪ್ರಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು.


ಧ್ವಜಾರೋಹಣ ಮಾಡಿದ ಭಾರತದ ರಾಯಭಾರಿ ಸುಧೀರ್ ಸಂಜಯ್ ಮಾತನಾಡಿ, ಭಾರತ ಮತ್ತು ಯು.ಎ.ಇ. ನಡುವಿನ ಸಂಬಂಧ ಎರಡು ದೇಶಗಳ ಸಾಮಾಜಿಕ ಆಥಿ೯ಕ ಶೈಕ್ಷಣಿಕ ಸಾಂಸ್ಕೃತಿಕ ಸಂಬಂಧ ವೃದ್ದಿಸುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ಭಯೇೂತ್ಪಾದನೆಯ ವಿರುದ್ಧ ಧ್ವನಿ ಎತ್ತಿರುವ ಭಾರತದ ಪರವಾಗಿ ವಿಶ್ವವ್ಯಾಪಿಯಾಗಿ ಉತ್ತಮ ಪ್ರತಿಕ್ರಿಯೆ ಮೂಡಿ ಬಂದಿದ್ದು ಅಭಿವೃದ್ಧಿ ಒಂದೇ ನಮ್ಮೆಲ್ಲರ ಮುಖ್ಯ ಉದ್ದೇಶವೆಂದು ತಿಳಿಸಿದರು.


ಭಾರತದ ಮತ್ತು ಯು.ಎ.ಇ.ನಡುವಿನ ಸಂಬಂಧ ಉತ್ತೇಜಿಸುವಲ್ಲಿ ಎರಡು ದೇಶಗಳು ಸಾಕಷ್ಟು ಆರ್ಥಿಕ ಶೈಕ್ಷಣಿಕ ಒಡಂಬಡಿಕೆಗಳನ್ನು ಮಾಡಿಕೊಂಡಿರುವುದನ್ನು ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ಭಾರತ ಯುಎಇ ನಡುವಿನ ಸಂಬಂಧಗಳನ್ನು ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಸಮಾಜಸೇವಕರನ್ನು ಗುರುತಿಸಿ ಗೌರವಿಸಲಾಯಿತು.


ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷ  ಪರೀಕ ಸರ್ವೋತ್ತಮ ಶೆಟ್ಟಿ, ಅಬುಧಾಬಿ ಪ್ರವಾಸದಲ್ಲಿರುವ ಎಂಜಿಎಂ ಕಾಲೇಜಿನ ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ  ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಯು.ಎ.ಇ ನಲ್ಲಿರುವ ಇಂಡೇೂ ಸೇೂಶಿಯಲ್ ಕಲ್ಚರಲ್ ಸಂಸ್ಥೆಯ ಪ್ರಮುಖರು, ರಾಯಭಾರಿ ಸಂಜಯ್ ಸುಧೀರ್, ಪತ್ನಿ ವಂದನಾ ಸುಧೀರ್ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಗಣ್ಯರಾಗಿ ಭಾಗವಹಿಸಿದ್ದರು.


Post a Comment

0 Comments
Post a Comment (0)
To Top