ಮಂಗಳೂರು: ಕೆನರಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಸಾಹಿತ್ಯದಲ್ಲಿ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ಹಾಸ್ಯ ಲೇಖಕಿ ಪ್ರೊಫೆಸರ್ ಭುವನೇಶ್ವರಿ ಹೆಗಡೆ ಸಂಪನ್ಮೂಲ ವ್ಯಕ್ತಿಯಾಗಿ ನಿತ್ಯ ಜೀವನದಲ್ಲಿ ವೃತ್ತಿಯಲ್ಲಿ ಹಾಸ್ಯ ಹೇಗೆ ಹಾಸು ಹೊಕ್ಕಾಗಿದೆ ಎಂಬುದನ್ನು ತಮ್ಮ ಲಘು ಹಾಸ್ಯ ಶೈಲಿಯಲ್ಲಿ ತಿಳಿಸಿದರು.
ಹಾಸ್ಯವು ಅಪಹಾಸ್ಯ ಅಥವಾ ಅಮಾನವೀಯವಾಗಬಾರದು. ಜೀವನದಲ್ಲಿ ಖಾಲಿ ಅನಿಸದೆ ಇರಲು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಅಧ್ಯಾಪಕ ಸಂಬಂಧವನ್ನು ಸುಂದರವಾಗಿ ಮಾಡಿಕೊಂಡರೆ ಅದರ ಸೊಗಸನ್ನು ಅನುಭವಿಸಲು ಸಾಧ್ಯ. ಶಿಕ್ಷಣ, ಗ್ರಂಥಾಲಯ, ಸಮಾಜ ಈ ಎಲ್ಲವುಗಳಿಂದ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ. ಸಾಹಿತ್ಯ ಓದಿನಿಂದ ಕಷ್ಟಗಳನ್ನು ಎದುರಿಸುವ ಧೈರ್ಯ ಹಾಗೂ ಆರೋಗ್ಯಕರ ಮನಸ್ಥಿತಿ ಬರುವುದು ಎಂದು ನುಡಿದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ದೇಜಮ್ಮ ಎ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ತೃಷಾಂಕ ತನ್ವಿ ಸ್ವಾಗತಿಸಿ, ಕಾವ್ಯ ವಂದಿಸಿದರು. ಶ್ರೀಕರಿ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ವಾಣಿ ಯು ಎಸ್, ಶೈಲಜಾ ಪುದುಕೋಳಿ ಉಪಸ್ಥಿತರಿದ್ದರು. ಪ್ರಥಮ ಬಿಬಿಎ ಹಾಗೂ ಬಿಸಿಎ ವಿಭಾಗದ ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ