ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ರಾಜ್ಯಮಟ್ಟದ ವಿದ್ವತ್ ಅಂತಿಮ ಪರೀಕ್ಷೆ: ಗಗನ್ ಜಿ ಗಾಂವ್ಕರ್ ಗೆ ಪ್ರಥಮ ರ್‍ಯಾಂಕ್‌

Chandrashekhara Kulamarva
0


ಉಡುಪಿ: ಉಡುಪಿಯ ಮುಕುಂದ ಕೃಪ ಸಂಗೀತ ಶಾಲೆಯ ವಿದ್ವಾನ್  ಮಹಾಬಲೇಶ್ವರ ಭಾಗವತ್ ರವರ  ಶಿಷ್ಯ, ಜೀ ಸರಿಗಮಪ ಕನ್ನಡ ಸೀಸನ್ 9ರ ಮತ್ತು ರಾಷ್ಟ್ರೀಯ ಹಿಂದಿ ಸರಿಗಮಪ ಸೀಸನ್ 5 ವಿಜೇತ ಗಗನ್. ಜಿ . ಗಾಂವ್ಕರ್, ಶಾಸ್ತ್ರೀಯ ಸಂಗೀತದಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ.


ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ  ಕಳೆದ ಸಾಲಿನಲ್ಲಿ  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ನಡೆಸಿದ ರಾಜ್ಯಮಟ್ಟದ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ ಗಳಿಸುವ ಮೂಲಕ  ವಿದ್ವತ್ ಪದವಿ ಪಡೆದಿರುತ್ತಾರೆ.


ಪ್ರಸ್ತುತ ಬೆಂಗಳೂರಿನಲ್ಲಿ ಪ್ರಸಿದ್ಧ ಎಂ. ಎನ್. ಸಿ ಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ  ಕಾರ್ಯನಿರ್ವಹಿಸುತ್ತಿದ್ದು, ಕೆಲ ಚಲನಚಿತ್ರ, ಹಾಗೂ ತಾವೇ ಸಂಯೋಜಿಸಿದ ಭಾವ, ಭಕ್ತಿ, ಗೀತೆಗಳಿಗೆ ಧ್ವನಿಯಾಗಿದ್ದು, ಭವಿಷ್ಯದಲ್ಲಿ ಉತ್ತಮ ಗಾಯಕ ಹಾಗೂ ಸಂಗೀತ ಸಂಯೋಜಕನಾಗಬೇಕು ಎಂದು ಕನಸು ಕಂಡಿರುವ ಗಗನ್ ಜಿ  ಗಾಂವ್ಕರ್ ಇವರಿಗೆ ಶನಿವಾರ (ಆ.30) ಮೈಸೂರಿನಲ್ಲಿ ಕುಲಪತಿ ಪ್ರೊ. ನಾಗೇಶ್ ವಿ ಬೆಟ್ಟಕೋಟೆ ಅವರು, ಪ್ರಥಮ ರ್‍ಯಾಂಕ್ ನೊಂದಿಗೆ ವಿದ್ವತ್ ಪದವಿಯನ್ನು ಪ್ರದಾನ ಮಾಡಿದರು.


ಇವರು ಕಾಪು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ  ಡಾ. ಗೋಪಾಲಕೃಷ್ಣ ಎಂ ಗಾ೦ವ್ಕರ್  ಹಾಗೂ ಉಡುಪಿಯ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಹಿತಿ ಗಿರಿಜಾ ಹೆಗಡೆ ಗಾ೦ವ್ಕರ್ ದಂಪತಿಗಳ ಪುತ್ರ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top