ಸ್ನಾನಕ್ಕೆ ಶಾಂಪೂ ಬಳಸುವುದು ಈಗ ಎಲ್ಲರಿಗೂ ಚಿರಪರಿಚಿತ. ಆದರೆ ರಾಸಾಯನಿಕ ಬೆರೆತ ಶಾಂಪೂವಿಗಿಂತ ಈ ನೈಸರ್ಗಿಕ ಶಾಂಪೂ ಬಳಸುವುದು ಎಷ್ಟು ಹಿತ ಅನ್ನುವುದು ಗೊತ್ತಾ...? ಈ ಹೂವಿನಿಂದ ಬರುವ ಜೆಲ್ ಯಾವ ಶಾಂಪೂವಿಗೂ ಕಡಿಮೆ ಇಲ್ಲ, ಆದರೆ ನೈಸರ್ಗಿಕ. ಸ್ಥಳೀಯವಾಗಿ ಕಹಿ ಶುಂಠಿ, ನರಿ ಕಬ್ಬು ಎಂದೆಲ್ಲ ಕರೆಯಲಾಗುವ ಸಸ್ಯಗಳು ನೈಸರ್ಗಿಕ ಶಾಂಪೂವನ್ನು ಉತ್ಪಾದಿಸುತ್ತವೆ. ಇದು ಸಾಮಾನ್ಯ ಗಿಡವಲ್ಲ, ಈ ಗಿಡದ ಹೆಸರು ಬಿಟ್ಟರ್ ಜಿಂಜರ್. ಇದನ್ನು ಹಿಚುಕುವುದರಿಂದ ಈ ರೀತಿಯ ದ್ರವ ಬರುತ್ತದೆ.
ಆ ದ್ರವವು ಶಾಂಪೂವಿನಂತೆ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಕೆಮಿಕಲ್‌ಗಳು ಮಿಶ್ರಣವಾಗದ, ಪ್ರಕೃತಿದತ್ತವಾದ ಈ ಶಾಂಪೂವನ್ನು ಇಲ್ಲಿಯ ಜನರು ನೇರವಾಗಿ ತಮ್ಮ ತಲೆಗೆ ಬಳಸುತ್ತಾರೆ. ನಾವು ಪೇಟೆ ಪಟ್ಟಣದಲ್ಲಿ ಬಳಸುವ ಒಂದು, ಎರಡು ರೂಗಳ ಶಾಂಪೂ ಪೌಚ್‌ಗಳು ಕೆಮಿಕಲ್ ಯುಕ್ತವಾಗಿದ್ದು ಅಗ್ಗದ ದರದಲ್ಲಿ ಸಿಗುತ್ತವೆ. ಆದರೆ ಈ ಗಿಡವನ್ನು ನೋಡಿ ಇದರಲ್ಲಿ ಬರುವ ಹೂವಿನ ಕೆಂಪಗಿನ ಹೂವಿನ ಮೂತಿಯನ್ನು ಹಿಂಡಿದಾಗ ನೈಸರ್ಗಿಕ ಶಾಂಪೂ ಬರುತ್ತದೆ.
ಕೂದಲ ಆರೈಕೆಗೆ ಇರುವ ಅತ್ಯುತ್ತಮ ನೈಸರ್ಗಿಕ ಶಾಂಪೂ ಇದಾಗಿದ್ದು, ಶುಂಠಿಯ ಒಂದು ಪ್ರಭೇದವಾಗಿದೆ, ಶುಂಠಿಯ ವಾಸನೆಯೂ ಬರುತ್ತದೆ. ಕೂದಲು ಉದುರುವಿಕೆಗೆ, ಎಳೆವೆಯಲ್ಲೇ ತಲೆಕೂದಲು ಬಿಳಿಯಾಗುವುದು (ಬಾಲನರೆ), ತಲೆಬಿಸಿ, ತಲೆನೋವು, ತಲೆಸುತ್ತು, ತಲೆಹೊಟ್ಟು ಏಳುವುದು ಮುಂತಾದ ಸಮಸ್ಯೆಗಳಿಗೆ ಇದು ಔಷಧಿಯಂತೆ ಕೆಲಸ ಮಾಡುತ್ತದೆ. ಅಲ್ಲದೆ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ. ಚರ್ಮರೋಗಗಳ ನಿವಾರಣೆಗೆ ಇಂತಹ ಅನೇಕ ಸಮಸ್ಯೆಗಳನ್ನು ನಿವಾರಿಸುವ ಆರ್ಗಾನಿಕ್ ಶಾಂಪೂ ಇದು.
ಹಿಂದೆಲ್ಲ ಎರಪ್ಪೆ ಮರದ ಗೊಂಪು, ಬೆಳ್ಳಂಟೆ ಗೊಂಪು, ಸೀಗೆ, ಬಾಗೆ, ಕಡ್ಲೆ ಹುಡಿ ಬಳಕೆಯಲ್ಲಿದ್ದವು. ತದನಂತರ ಸಾಬೂನು ಬಂತು. ಇತ್ತೀಚೆಗೆ ಅದೆಲ್ಲ ಮರೆಮಾಚಿ ಕೇವಲ ರಾಸಾಯನಿಕಯುಕ್ತ ಶಾಂಪೂವಿನ ಹಿಂದೆ ನಾವು ಬಿದ್ದಿದ್ದೇವೆ. ಇದರಿಂದಲೇ ಹಲವಾರು ಕಾಯಿಲೆಗಳು ಹುಟ್ಟಿಕೊಂಡಿವೆ.
ಸರಳ ಜೀವನ ಸಂಯಮವನ್ನು ಕಲಿಸುತ್ತದೆ, ಸರಳ ವ್ಯಕ್ತಿತ್ವ ಮನುಷ್ಯನನ್ನು ಬೆಳೆಸುತ್ತದೆ. ಸರಳ ನಡೆ ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೆ ಏರಿಸುತ್ತದೆ. ಬದುಕಿನ ಸತ್ಯ ನಮ್ಮ ಹಿರಿಯರೊಂದಿಗೆ ಸಮಯ ಕಳೆಯಿರಿ. ಏಕೆಂದರೆ ಇಂತಹ ಅನೇಕ ವಿಚಾರಗಳು ನಮ್ಮ ತಲೆಗೆ ತುಂಬಿಕೊಂಡಿವೆ. ಮೆಡಿಕಲ್ ಶಾಪ್, ಅಂಗಡಿಗಳಲ್ಲಿ, ಡಾಕ್ಟರ್ ಎಂಬ ತಪ್ಪು ಕಲ್ಪನೆಯಿಂದ ಬದುಕುತ್ತಿದ್ದೇವೆ. ಎಲ್ಲವೂ ಗೂಗಲ್ ನಲ್ಲಿ ಸಿಗುವುದಿಲ್ಲ. ನಮ್ಮ ವಿಚಾರಗಳು ವಿಮರ್ಶೆಗಳು ಗ್ರಂಥಗಳಲ್ಲಿ, ಹಳೆಯ ಪಂಡಿತರಲ್ಲಿದೆ. ಅವುಗಳ ಮಾಹಿತಿಯ ಅರಿವಿಲ್ಲದೆ ನಾವು ಬಡವರಾಗುತ್ತೇವೆ.
ಚಿತ್ರ: ಚಂದನ್ ಕುಮಾರ್ ಪೆರ್ನಾಜೆ
ಬರಹ: ಕುಮಾರ್ ಪೆರ್ನಾಜೆ ಪುತ್ತೂರು
Mo.9480240643
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

