H1N1 ರೋಗವನ್ನು ಸಾಮಾನ್ಯವಾಗಿ ಸ್ವೈನ್ ಫ್ಲೂ (Swine Flu) ಎಂದು ಕರೆಯುತ್ತಾರೆ. H1N1 ರೋಗವು ಒಂದು ಇನ್ಫ್ಲುಯೆಂಜಾ ವೈರಸ್ ಸೋಂಕು. ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ತೀವ್ರ ಸೋಂಕು ಆಗಿದ್ದು, ಕೆಮ್ಮು, ಜ್ವರ, ಗಂಟಲಿನ ನೋವು, ದಣಿವು, ತಲೆನೋವು, ಸ್ನಾಯು ನೋವು ಇತ್ಯಾದಿ ಲಕ್ಷಣಗಳನ್ನು ಉಂಟುಮಾಡುತ್ತದೆ. ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಶ್ವಾಸದ ಜಲಕಣಗಳು (droplets), ಕೈ–ಸ್ಪರ್ಶ, ಅಥವಾ ಬಳಸಿದ ವಸ್ತುಗಳ ಮೂಲಕ ಹರಡುತ್ತದೆ. H1N1 ಅನ್ನು ಉಂಟುಮಾಡುವ ವೈರಸ್ ಇನ್‌ಫ್ಲೂಯೆಂಜಾ A ವೈರಸ್.
H1N1 ರೋಗದ ಲಕ್ಷಣಗಳು
ಜ್ವರ
ಕೆಮ್ಮು
ಗಂಟಲಿನ ನೋವು
ತಲೆನೋವು
ಸ್ನಾಯು ನೋವು
ದಣಿವು, ಅಸ್ವಸ್ಥತೆ
ಕೆಲವೊಮ್ಮೆ ವಾಂತಿ ಮತ್ತು ಅಜೀರ್ಣ
ಉಸಿರಾಟದ ತೊಂದರೆ
H1N1 ಇನ್ಫ್ಲುಯೆಂಜಾ [influenza] – ಮುಂಜಾಗ್ರತಾ ಕ್ರಮಗಳು
1. ಕೆಮ್ಮು–ನೆಗಡಿ ಬಂದಾಗ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳಿ (ರುಮಾಲ್/ಟಿಷ್ಯೂ ಬಳಸಿ).
2. ಕೈಯನ್ನು ನಿಯಮಿತವಾಗಿ ಸಾಬೂನು ಮತ್ತು ನೀರಿನಿಂದ ತೊಳೆಯಿರಿ.
3. ಜನಸಮೂಹದಿಂದ ದೂರವಿರಿ, ವಿಶೇಷವಾಗಿ ರೋಗಿಯ ಸಂಪರ್ಕ ತಪ್ಪಿಸಿ.
4. ರೋಗಿಯು ಮನೆಯಲ್ಲಿ ವಿಶ್ರಾಂತಿ ಪಡೆಯಬೇಕು, ಅನಗತ್ಯವಾಗಿ ಹೊರಗೆ ಹೋಗಬಾರದು.
5. ಉತ್ತಮ ಪೋಷಕಾಂಶಗಳಿರುವ ಆಹಾರ ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು.
6. ಸೋಂಕಿತ ವ್ಯಕ್ತಿಯ ಪಾತ್ರೆ, ಬಟ್ಟೆ ಅಥವಾ ವಸ್ತುಗಳನ್ನು ಬಳಸಬೇಡಿ.
7. ತ್ವರಿತವಾಗಿ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ,ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ವಿಶೇಷ ಜಾಗ್ರತೆ ವಹಿಸಬೇಕು.
H1N1 ಇನ್ಫ್ಲುಯೆಂಜಾ ಗಂಭೀರ ರೋಗವಾದರೂ ಸ್ವಚ್ಛತೆ, ಜಾಗ್ರತೆ ಮತ್ತು ತಕ್ಷಣದ ವೈದ್ಯಕೀಯ ಚಿಕಿತ್ಸೆ ಮೂಲಕ ನಿಯಂತ್ರಿಸಬಹುದು. H1N1 ಸೋಂಕು ಅನುಮಾನವಾದರೆ ತಕ್ಷಣವೇ ಸಮೀಪದ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗೆ ಸಂಪರ್ಕಿಸಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದರಿಂದ ಅಪಾಯವನ್ನು ತಪ್ಪಿಸಬಹುದು.
- ಡಾ. ರೇಶ್ಮಾ ಭಟ್
ಸಾಂಕ್ರಾಮಿಕ ರೋಗ ತಜ್ಞೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


