ಪರಿಸರ ಜಾಗೃತಿ, ಪ್ಲಾಸ್ಟಿಕ್ ಮಿತಬಳಕೆ ಜಾಗೃತಿ

Chandrashekhara Kulamarva
0


ಸುರತ್ಕಲ್‌: ಲಯನ್ಸ್ ಕ್ಲಬ್ ಸುರತ್ಕಲ್, ಲಿಯೊ ಕ್ಲಬ್ ಸುರತ್ಕಲ್, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು, ಚಿರಂತನ ಚಾರಿಟೇಬಲ್ ಟ್ರಸ್ಟ್, ಸಪ್ತಕ್ ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘ ಸಹಯೋಗದಲ್ಲಿ ಪರಿಸರ ಜಾಗೃತಿ ಮತ್ತು ಪ್ಲಾಸ್ಟಿಕ್ ಮಿತ ಬಳಕೆ ಜಾಗೃತಿ ಕಾರ್ಯಕ್ರಮ ನಡೆಯಿತು.


ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಲಕ್ಷ್ಮಿಕಾಂತ್ ಹೆಚ್. ಮಾತನಾಡಿ, ಪರಿಸರದ ಕುರಿತು ಯುವ ತಲೆಮಾರು ಆಸಕ್ತಿ ತಾಳಬೇಕು. ನೆಲ, ಜಲದ ರಕ್ಷಣೆಗೆ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಮೂಲಕ ನಮ್ಮ ಕರ್ತವ್ಯವನ್ನು ನೆರವೇರಿಸಿಕೊಡಬೇಕು ಎಂದರು.


ಸುರತ್ಕಲ್ ರೋಟರಿ ಕ್ಲಬ್ ನಿರ್ದೇಶಕ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸುಲಲಿತ ಪರಿಸರ ವ್ಯವಸ್ಥೆಗೆ ಪೂರಕವಾದ ಅಭಿವೃದ್ಧಿ  ಕಾರ್ಯಗಳನ್ನಷ್ಟೇ ನಡೆಸಬೇಕು ಎಂದರು.


ಸುರತ್ಕಲ್ ಚಿರಂತನ ಸೇವಾ ಟ್ರಸ್ಟ್ ನಿರ್ದೇಶಕ ಭಾರವಿ ದೇರಾಜೆ ಅವರು ಸೇವಾ ಸಂಸ್ಥೆಗಳಿಗೆ ಪರಿಸರ ರಕ್ಷಣೆಯ ಹೊಣೆಗಾರಿಕೆ ಇದೆ ಎಂದರು.


ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಮಾತನಾಡಿ, ಶಾಲೆಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯ ಅರಿವು ಮೂಡಿಸುವ ಕಾರ್ಯ ನಡೆಸಲು ಆಯೋಜಿಸಲಾಗಿದೆ ಎಂದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಾಧವ ಸುವರ್ಣ ಗಿಡಗಳನ್ನು ನೆಡುವ ಹಾಗೂ ಪೋಷಿಸುವ ಮೂಲಕ ಹಸಿರು ಸಂಪತನ್ನು ಹೆಚ್ಚಿಸಬೇಕು ಎಂದರು. 


ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕುಮಾರ್ ಬಂಗೇರ, ಲಯನ್ಸ್ ಕ್ಲಬ್ ಕಾರ್ಯ ದರ್ಶಿ ಮೈಮುನ, ಸದಸ್ಯರಾದ ಮೋಹಿದೀನ್, ರಾಧಿಕಾ ಸೀತಾ ರಾಮ್, ರಾಜಯ್ಯ, ಧನುರಾಜ್, ಶಾಲೆಯ ಹಿರಿಯ ಶಿಕ್ಷಕಿ ಸುಕೇಶಿನಿ, ಸಿಂತಿಯ, ನೀತಾ ತಂತ್ರಿ, ರೂಪಾ, ಮತ್ತು ಶಾಲಾ ಅಭಿವೃದ್ಧಿ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಸುಕೇಶಿನಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top