ಹುಬ್ಬಳ್ಳಿಯಲ್ಲಿ ಸಂಭ್ರಮದ ಧನ್ವಂತರಿ ಜಯಂತಿ ಆಚರಣೆ

Chandrashekhara Kulamarva
0



ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಥಮ ಧನ್ವಂತರಿ ದೇವಸ್ಥಾನವೆಂಬ ಹೆಗ್ಗಳಿಕೆಗೆ ಪಾತ್ರವಾದ ಉಣಕಲ್ ಕೆರೆಯ ಬಲದಂಡೆಯಲ್ಲಿರುವ ಶ್ರೀ ಧನ್ವಂತರಿ ದೇವಸ್ಥಾನದ ದಶಮಾನೋತ್ಸವ & ಧನ್ವಂತರಿ ದೇವರ ಜಯಂತಿಯ ಕಾರ್ಯಕ್ರಮವನ್ನು ದೇವಸ್ಥಾನದ ಭಕ್ತವೃಂದವು ಬಹಳ ಸಡಗರದಿಂದ ಆಚರಿಸಿತು.


ಭಾದ್ರಪದ ಮಾಸ ಶುದ್ಧ ದ್ವಿತೀಯ (ಆಗಸ್ಟ್‌ 25) ಸೋಮವಾರದಂದು ಶ್ರೀ ಧನ್ವಂತರಿ ದೇವರ ಜಯಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗ್ಗಿನಿಂದ ಅನೇಕ ಕಾರ್ಯಕ್ರಮಗಳು ಜರುಗಿದವು.


ಧನ್ವಂತರಿ ಸ್ತೋತ್ರ ಪಾರಾಯಣ, ದೇವರ ತೊಟ್ಟಿಲೋತ್ಸವ, ಪಲ್ಲಕ್ಕಿ ಸೇವೆಯ ನಂತರ ಹುಬ್ಬಳ್ಳಿಯ ಪ್ರಸಿದ್ಧ ಪೂಜ್ಯ ಪಂ. ಗೋಪಿನಾಥಚಾರ್ಯ ಗಲಗಲಿಯವರಿಂದ ಧನ್ವಂತರಿ ದೇವರ ಮಹಿಮೆಯ ಕುರಿತಾದ ವಿದ್ವತ್ಪೂರ್ಣ ಪ್ರವಚನ, ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಭಕ್ತರು ಪುನೀತರಾದರು. ಸುವ್ಯವಸ್ಥಿತ ರೀತಿಯಿಂದ ನಡೆದ ಇಡೀ ದಿನದ ಕಾರ್ಯಕ್ರಮವು ತೀರ್ಥ ಪ್ರಸಾದದ ಸೇವನೆಯೊಂದಿಗೆ ಮುಕ್ತಾಯವಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
To Top