ಸುರತ್ಕಲ್: ನಾಗರಿಕ ಸಲಹಾ ಸಮಿತಿ ಸುರತ್ಕಲ್, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಆಶ್ರಯದಲ್ಲಿ ಸುರತ್ಕಲ್ ರೋಟರಿ ಕ್ಲಬ್ ಮತ್ತು ಸುರತ್ಕಲ್ ಇನ್ನರ್ ಕ್ಲಬ್ ಸಹಯೋಗದಲ್ಲಿ ರೋಟರಿ ಕ್ಲಬ್ ನಿರ್ದೇಶಕ ರೊ. ರಾಜಮೋಹನ್ ರಾವ್ ಅವರ 'ಮನೆ ಮಂದಾರ' ದಲ್ಲಿ ಅಲಂಕಾರಿಕ ಗಿಡಗಳು ಮತ್ತು ತಾರಸಿ ಕೈ ತೋಟಗಳ ನಿರ್ಮಾಣ ಮತ್ತು ನಿರ್ವಹಣೆ ಕುರಿತು ಉಚಿತ ತರಬೇತಿ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಅಧ್ಯಕ್ಷ ರಾಮಚಂದ್ರ ಬಿ. ಕುಂದರ್ ಉದ್ಘಾಟನೆ ನೆರವೇರಿಸಿ, ತೋಟಗಾರಿಕೆ ಉತ್ತಮ ಹವ್ಯಾಸವಾಗಿದ್ದು ತಮಗೆ ಬೇಕಾದ ತರಕಾರಿಗಳನ್ನು ನಾವೇ ಬೆಳೆಸುವುದು ಉತ್ತಮ ಅರೋಗ್ಯದ ಕಾಪಾಡುವಿಕೆಗೆ ಸಹಕಾರಿ ಎಂದರು.
ಸಾವಯವ ಕೃಷಿಕ ಗ್ರಾಹಕ ಬಳಗದ ಕೈತೋಟ ತರಬೇತಿ ಸಂಯೋಜಕ ಅನಿಲ್ ರಾವ್ ಮಾತನಾಡಿ, ಸಾವಯವ ಕೃಷಿಕ ಗ್ರಾಹಕ ಬಳಗ ವಿವಿಧ ಕಾರ್ಯಯೋಜನೆಗಳ ಮೂಲಕ ಸಾವಯವ ಕೃಷಿ ಮತ್ತು ಉತ್ತಮ ಅರೋಗ್ಯದ ಕುರಿತು ಜಾಗೃತಿ ಮೂಡಿಸುತ್ತಿದೆ. ಮನೆ ಮನೆಗಳಲ್ಲಿ ಕೈತೋಟ ಕುರಿತು ತರಬೇತಿ ನಡೆಸುತ್ತಿದೆ ಎಂದರು.
ಇನ್ನರ್ ವೀಲ್ ಕ್ಲಬ್ ನಿರ್ದೇಶಕಿ ಮಾಲತಿ ಸಚ್ಚಿದಾನಂದ್ ಶುಭ ಹಾರೈಸಿದರು. ಡಾ. ಕೆ. ರಾಜ್ ಮೋಹನ್ ರಾವ್ ಆಶಯ ನುಡಿಯನ್ನಾಡಿ ಉತ್ತಮ ಅರೋಗ್ಯ ನಿರ್ವಹಣೆಗೆ ಸಾವಯವ ತೋಟಗಳ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.
ಸ್ವಪ್ನ ಮತ್ತು ದಾಕ್ಷಾಯಿಣಿ ಕೈತೋಟ ನಿರ್ಮಾಣದ ಪ್ರಾತ್ಯಕ್ಷಿಕೆ ಮಾಡಿ ತರಬೇತಿ ನೀಡಿದರು. ಸಂವಾದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಹರೀಶ್ ಕುಮಾರ್, ಸಚ್ಚಿದಾನಂದ, ಇನ್ನರ್ ವೀಲ್ ಕ್ಲಬ್ ನ ನಳಿನಿ ರಾಜಮೋಹನ್, ಸುನೀತಾ ಗುರುರಾಜ್, ಸಾವಿತ್ರಿ ರಮೇಶ್ ಭಟ್, ನಾಗರಿಕ ಸಲಹಾ ಸಮಿತಿಯ ಡಾ. ಇಂದಿರಾ, ಸುಜಯ ಶೆಟ್ಟಿ, ಇಂಟರ್ಯಕ್ಟ್ ಕ್ಲಬ್ ಸಂಯೋಜಕಿ ಕೀರ್ತಿ ಪಾಲ್ಗೊಂಡರು. ರೋಟರಿ ಕ್ಲಬ್ ಕಾರ್ಯದರ್ಶಿ ರಾಮಮೋಹನ್ ವೈ. ನಿರ್ದೇಶಕ ಕೃಷ್ಣ ಮೂರ್ತಿ, ಎಂ.ಬಿ. ಶೆಟ್ಟಿ, ರಮೇಶ್ ಭಟ್ ಎಸ್.ಜಿ., ನಾಗರಿಕ ಸಲಹಾ ಸಮಿತಿಯ ಟ್ರಸ್ಟಿ ಆನಂದ ಭಂಡಾರಿ, ರಾಮಣ್ಣ ಗೌಡ, ಡಾ. ಗುಣಕರ, ಪ್ರೊ. ರಮೇಶ್ ಕುಳಾಯಿ ಉಪಸ್ಥಿತರಿದ್ದರು.
ನಾಗರಿಕ ಸಲಹಾ ಸಮಿತಿ ಸಂಯೋಜಕ ಸತೀಶ್ ಸದಾನಂದ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

