ಸಾಂಸ್ಕೃತಿಕ ಹವ್ಯಾಸಗಳೇ ನಮ್ಮ ಬದುಕಿನ ದಾರಿದೀಪ: ವೀಣಾ ಐತಾಳ್

Upayuktha
0


ಕೋಡಿಕಲ್, ಮಂಗಳೂರು: ಬದುಕಿನ ಲವಲವಿಕೆಗಾಗಿ ಯಾವುದಾದರೊಂದು ಹವ್ಯಾಸವನ್ನು ಕರಗತ ಮಾಡಿಕೊಳ್ಳುವುದು ಇಂದಿನ ತುರ್ತು ಯುಗದಲ್ಲಿ ಅತೀ ಅಗತ್ಯವಾಗಿದೆ. ಯಾವುದೋ ಹಂತದಲ್ಲಿ ಒಂಟಿತನ ಕಾಡಿದಾಗ ಅವುಗಳೇ ನಮಗೆ ಪಥದರ್ಶನ ಮಾಡುತ್ತವೆ. ನಮ್ಮನ್ನು ತುಂಬು ಉತ್ಸಾಹದಿಂದ ಬದುಕುವಂತೆ ಪ್ರಚೋದಿಸುವುದೇ ಈ ಕಲೆಗಳು. ವಿಪ್ರವೇದಿಕೆ ಹಮ್ಮಿಕೊಂಡಿರುವ ವಿವಿಧ ರಂಗೋಲಿಗಳು, ಹೂಕಟ್ಟುವ ಸ್ಪರ್ಧೆಗಳು ಅವರಿಗೂ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವಾಗುತ್ತದೆ. ತಮ್ಮನ್ನು ತಾವು ವಿಕಸಿತ ಮನಸ್ಸಿನಲ್ಲಿ ಇರುವಂತೆಯೂ ಮಾಡುತ್ತವೆ. ಹಾಗಾಗಿ, ಹೆಚ್ಚು ಹೆಚ್ಚು ಮಹಿಳೆಯರು ಈ ಸ್ಪರ್ಧೆಗಳಲ್ಲಿ ಭಾಗವಹಿಸಿ" ಎಂದು ಕಲಾವಿದೆ ಶ್ರೀಮತಿ ವೀಣಾ ಐತಾಳ್ ಹೇಳಿದರು.


ಅವರು ಕೋಡಿಕಲ್ ನ ವಿಪ್ರವೇದಿಕೆ ಆಯೋಜಿಸಿದ ದಶಮ ಸಂಭ್ರಮದ ಮೂರನೇ ಸರಣಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ರಂಗವಲ್ಲಿಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಸ್ಪರ್ಧೆಯಲ್ಲಿ ವಿಜೇತರಾದವರಿಗೆ ವೇದಿಕೆಯ ವತಿಯಿಂದ ಬಹುಮಾನ ವಿತರಿಸಲಾಯಿತು. ವೇದಿಕೆಯ ಅಧ್ಯಕ್ಷ ವರ್ಕಾಡಿ ರವಿ ಅಲೆವೂರಾಯರು ಅಧ್ಯಕ್ಷತೆ ವಹಿಸಿದ್ದರು. ವೀಣಾ ಐತಾಳರನ್ನು ಗೌರವಿಸಲಾಯಿತು. ಗೌರವಾಧ್ಯಕ್ಷ ಜಯರಾಮ ಪದಕಣ್ಣಾಯ ಸ್ವಾಗತ ಪ್ರಸ್ತಾವನೆಗೈದರು. ವಿಜಯಾ ಭಟ್ ಹಾಗೂ ಮಲ್ಲಿಕಾ ಪ್ರಾರ್ಥನೆಗೈದರು.


ಸಂಸ್ಥೆಯ ಸಂಸ್ಥಾಪಕರೋರ್ವರಾದ ವೇದಮೂರ್ತಿ ವಿಶ್ವ ಕುಮಾರ ಜೋಯಿಸ್, ಮಾಜಿ ಅಧ್ಯಕ್ಷರುಗಳಾದ ಗಿರೀಶ್ ರಾವ್, ವಿದ್ಯಾ ಗಣೇಶ್ ಉಪಸ್ಥಿತರಿದ್ದರು. ದಾಕ್ಷಾಯಿಣಿ ವಿಶ್ವೇಶ್ವರ್ ವಿಜೇತರನ್ನು ಗೌರವಿಸಿದರು. ಕಿಶೋರ್ ಕೃಷ್ಣ ಧನ್ಯವಾದವಿತ್ತರು. ಪ್ರಕಾರ್ಯದರ್ಶಿ ದುರ್ಗಾದಾಸ್ ಕಟೀಲು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top