ಸುರತ್ಕಲ್: "ವೃತ್ತಿಯಿಂದ ನಿವೃತ್ತಿಯಾಗುವುದು, ಸಂಸ್ಥೆಯಿಂದ ಬೀಳ್ಕೊಡುವುದು ಜೀವನದಲ್ಲಿ ಬರುವ ಸಹಜ ಹಂತಗಳು. ನಿವೃತ್ತಿಯ ನಂತರವೂ ಜೀವನ ಮರಳಿ ಅರಳಲು ಮಾನವನ ಪ್ರವೃತ್ತಿ ಸಹಕರಿಸುತ್ತದೆ. ಹಾಗಾಗಿ ತಾವೂ ಕೂಡಾ ಪ್ರವೃತ್ತಿಯಿಂದ ನಿವೃತ್ತ ಜೀವನವನ್ನು ಹಸನಾಗಿಸಿಕೊಳ್ಳಿ" ಎಂದು ಮಧ್ಯ ಸರಕಾರಿ ಶಾಲೆಯ ವಿದ್ಯಾನಿಧಿ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕುಸುಮಾರವರ ಬೀಳ್ಕೊಡುಗೆ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ನುಡಿದರು.
"ಸುದೀರ್ಘ ಕಾಲ ನನಗೆ ವಿದ್ಯಾರ್ಥಿಗಳೊಂದಿಗೆ ಸುಮಾರು 36 ವರ್ಷ ಇರುವ ಅವಕಾಶ ದೊರೆತಿದೆ. ಮುಖ್ಯ ಶಿಕ್ಷಕಿಯಾಗಿ ಈ ಉನ್ನತೀಕರಿಸಿದ ಸರಕಾರ ಶಾಲೆಯಲ್ಲಿ ಕೂಡಾ ಸೇವೆಯ ಭಾಗ್ಯ ದೊರಕಿದೆ. ಇದು ದೇವರು ನನಗೊದಗಿಸಿದ ಸಂಪತ್ತು. ಇಂದು ನಿಮ್ಮೆಲ್ಲರನ್ನು ಬಿಟ್ಟು ತೆರಳುವುದು ಬಹಳ ಕಷ್ಟ. ಆದರೆ, ನಿಯಮಾವಳಿಗಳ ಪ್ರಕಾರ ಅಗಲುವಿಕೆ ಅನಿವಾರ್ಯ ಇನ್ನು ಮುಂದೆಯೂ ಅವಕಾಶ ಇದ್ದಾಗಲೆಲ್ಲಾ ಬಂದು ನನ್ನ ಶಾಲೆಯ ಬೆಳವಣಿಗೆಯನ್ನು ಕಾಣಬಯಸುತ್ತೇನೆ. ನನ್ನ ಅವಧಿಯಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ವಿದ್ಯಾರ್ಥಿ ವೃಂದಕ್ಕೂ ನಾನು ಋಣಿ" ಎಂದು ಸನ್ಮಾನ ಸ್ವೀಕರಿಸಿದ ಮಾಜಿ ಮುಖ್ಯ ಶಿಕ್ಷಕಿ ಕುಸುಮಾ ಸಮ್ಮಾನಕ್ಕೆ ಉತ್ತರಿಸಿದರು.
ಜೆಸಿಐ ಸುರತ್ಕಲ್‌ನ ಅಧ್ಯಕ್ಷ ಶ್ರೀಶೈಯ್ ಶೆಟ್ಟಿ, ವಿದ್ಯಾನಿಧಿ ಟ್ರಸ್ಟ್ ನ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ವಿಠ್ಠಲಶೆಟ್ಟಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಕುಲ್ಲಂಗಾಲು ಪ್ರಕಾಶ್ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಪ್ರಫುಲ್ಲ ಪಂಜ, ಉಪಾಧ್ಯಕ್ಷ ಅನಿಲ್ ಸಾಲ್ಯಾನ್, ಸುರತ್ಕಲ್ ಜೆಸಿಐನ ನಿಕಟ ಪೂರ್ವಾಧ್ಯಕ್ಷೆ ಜ್ಯೋತಿ ಪಿ. ಶೆಟ್ಟಿ, ಉಪಾಧ್ಯಕ್ಷೆ ಜ್ಯೋತಿ ಜೆ.ಶೆಟ್ಟಿ, ಕಾರ್ಯದರ್ಶಿ ರಾಹುಲ್ ಸುವರ್ಣ, ಸಂತೋಷ್, ಮಧ್ಯ ಗ್ರಾಮ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಪಡುಪದವು ಯುವಕ ಮಂಡಲದ ಅಧ್ಯಕ್ಷ ಹರೀಶ್ ಭಂಡಾರಿ ಮಧ್ಯ ಮಹಿಳಾ ಮಂಡಲದ ಅಧ್ಯಕ್ಷೆ ಯಶೋದಾ ಪೂಜಾರಿ, ಮಧ್ಯ ಫ್ರೆಂಡ್ಸ್ ನ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಪ್ರಕಾಶ್ ಪೂಜಾರಿ ಮಧ್ಯ, ಮುಖ್ಯ ಶಿಕ್ಷಕಿ ಜೇನ್ ಡಿಸೋಜಾ, ಶಿಕ್ಷಕರಾದ ಹರೀಶ್, ಶೈಲಾ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


