ಮಂಗಳೂರು: ಒಡಿಯೂರು ಶ್ರೀ ಗುರು ದೇವಾನಂದ ಸ್ವಾಮಿಜಿಯವರ ಜನ್ಮ ದಿನವನ್ನು ಕಳೆದ 25 ವರ್ಷಗಳಿಂದ ಗ್ರಾಮೋತ್ಸವವಾಗಿ ಆಚರಿಸಲ್ಪಡುತ್ತಿದ್ದು ಕ್ರೀಡೋತ್ಸವ, ಕಿರು ನಾಟಕ ಸ್ಪರ್ಧೆ ಹಾಗೂ ವಿವಿಧ ಸೇವಾ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು ಆಗಸ್ಟ್ 3 ರಂದು ಬೃಹತ್ ಸ್ವಚ್ಛತಾ ಅಭಿಯಾನವನ್ನು ನೂರಾರು ಕಡೆಗಳಲ್ಲಿ ನಡೆಸಲಾಯಿತು. ಮಹಾಜನ ಸಭಾ ತೋಟ ಬೆಂಗ್ರೆ, ಮಂಗಳೂರು ಗುರುದೇವ ಸೇವಾ ಬಳಗ, ಒಡಿಯೂರ್ ಗ್ರಾಮ ವಿಕಾಸ ಕೇಂದ್ರ, ವಜ್ರಮಾತಾ ಬಳಗಗಳ ನೇತೃತ್ವದಲ್ಲಿ ಬೆಂಗ್ರೆ ಕಡಲ ಕಿನಾರೆಯಲ್ಲಿ ಬೀಚ್ ಸ್ವಚ್ಛತೆ ಶ್ರಮದಾನ ನಡೆಸಲಾಯಿತು.
ಮಹಜನಾ ಸಭಾ ಬೆಂಗ್ರೆಯ ಅಧ್ಯಕ್ಷ ಚೇತನ್ ಬೆಂಗ್ರೆ, ಮಾಜಿ ಅಧ್ಯಕ್ಷರು ಕೇಶವ ಕರ್ಕೇರ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಸುವರ್ಣ, ಮಾಜಿ ಅಧ್ಯಕ್ಷ ಸಂಜಯ ಸುವರ್ಣ, ಮಹಿಳಾ ಸಂಘದ ಅಧ್ಯಕ್ಷೆ ತಿಲೋತ್ತಮ ಜಿ ಕರ್ಕೇರ, ಮಹಜನಾ ಸಭಾ ಫೆರಿ ಸರ್ವಿಸ್‌ನ ಅಧ್ಯಕ್ಷ ನವೀನ್ ಸುವರ್ಣ, ಗುರಿಕಾರ ಆಶೀತ್ ಮೆಂಡನ್ ಇವರ ಹಿರಿತನದಲ್ಲಿ ಬೆಳಿಗ್ಗೆ 7.30 ರಿಂದ 10.30 ರ ತನಕ ಒಂದು ಟಿಪ್ಪರ್ ಲೋಡಿನಷ್ಟು ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ಸಾಗಿಸಲಾಯಿತು. ಬೆಸೆಂಟ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿನಿಯರು, ಸ್ಥಳೀಯರು ಸೇವಾ ಕಾರ್ಯದಲ್ಲಿ ಭಾಗಿಗಳಾದರು.
ಮಂಗಳೂರು ಗುರುದೇವ ಬಳಗದ ಅಧ್ಯಕ್ಷ ಜಿತೇಂದ್ರ ಕೊಟ್ಟಾರಿ, ವಜ್ರಮಾತಾ ಬಳಗದ ನಿವೇದಿತಾ ಶೆಟ್ಟಿ, ಗ್ರಾಮೋತ್ಸವ ಸಮಿತಿಯ ಪ್ರಧಾನರಾದ ರವಿಪ್ರಭಾ ಶೆಟ್ಟಿ, ಲೋಕನಾಥ್ ಶೆಟ್ಟಿ, ಕೃಷ್ಣ ಶೆಟ್ಟಿ ತಾರೆಮಾರ್,ನಾಗರಾಜ ಆಚಾರ್ಯ, ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕಿರಣ್ ಮೊದಲಾದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ