ಕೆನರಾ ಸಂಧ್ಯಾ ಕಾಲೇಜಿನಲ್ಲಿ ಸಾಧಕನಿಗೆ ಸನ್ಮಾನ, ಅಭಿನಂದನೆ

Chandrashekhara Kulamarva
0


ಮಂಗಳೂರು: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಜೂನ್ 2025 ರಲ್ಲಿ ನಡೆಸಿದ ಸಿಎಸ್ ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾದ  ಕೆನರಾ ಸಂಧ್ಯಾ ಕಾಲೇಜಿನ ಪೂರ್ವ ವಿದ್ಯಾರ್ಥಿ ಅಚಿಂತ್ಯ ಶಬರಾಯರನ್ನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ (ಆ.30) ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.


ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ಸಂಚಾಲಕ  ಸಿಎ ಎಂ. ವಾಮನ ಕಾಮತ್ ರವರು ಮಾತನಾಡುತ್ತಾ "ಪ್ರತಿಯೊಬ್ಬರಲ್ಲೂ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಧನಾತ್ಮಕ ಚಿಂತನೆ ಯೊಂದಿಗೆ ಬಳಸಿಕೊಂಡಾಗ ಮಾತ್ರ ಸಿಎ,ಸಿಎಸ್ ನಂತಹ ದೇಶದ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಸಾಧ್ಯ" ಎಂದರು. ಆಡಳಿತ ಮಂಡಳಿ ಕೆನರಾ ಹೈಸ್ಕೂಲ್ ಅಸೋಸಿಯೇಷನ್ ನ ಸದಸ್ಯ ಬಸ್ತಿ ಪುರುಷೋತ್ತಮ ಶೆಣೈಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಅಶ್ವಿನಿ ಕಾಮತ್, ಪ್ರಾಂಶುಪಾಲೆ ಪ್ರೊ. ಅನಿಲಾ ಕಾಮತ್ ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರೀಮತಿ ಮೇಘಾ ಸ್ವಾಗತಿಸಿ, ಉಪನ್ಯಾಸಕ  ಕಾರ್ತಿಕ್ ಕಾಮತ್ ವಂದಿಸಿದರು. ವಿದ್ಯಾರ್ಥಿ ರಾಹುಲ್ ಭಂಡಾರಿ ನಿರೂಪಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top