ಹಲೋ
ಹೇಗಿದ್ದೀರಾ?
ನೂಲು ಹುಣ್ಣಿಮೆ ಕೇವಲ ಹುಣ್ಣಿಮೆ ಮಾತ್ರವಲ್ಲ,ಇದು ಸಹೋದರಿ ಮತ್ತು ಸಹೋದರರ ಪ್ರೀತಿಯನ್ನು ಎತ್ತಿ ಹಿಡಿಯುವ ಹಬ್ಬವೂ. ಹೌದು. ಇದಕ್ಕೆ ಸಂಬಂಧಿಸಿದಂತೆ. ಅನೇಕ ಕಥೆಗಳು ಚಾಲ್ತಿಯಲ್ಲಿವೆ. ಹಿಂದೆ ಕೃಷ್ಣನಿಗೆ ಬೆರಳಿಗೆ ಗಾಯವಾದಾಗ, ದ್ರೌಪದಿ ತನ್ನ ಸೀರೆಯ ಸೆರಗನ್ನು ಹರಿದು. ಕೃಷ್ಣ ಬೆರಳಿಗೆ ಕಟ್ಟಿದಾಗ, ಕೃಷ್ಣ ಹರಿಸಿದ. ಅದೇ ಸೀರೆಯ ಸೆರಗು ಅಕ್ಷಯವಾಗಿ ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನವನ್ನು ಕಾಯಿತು. ಅಂದಿನಿಂದ ರಕ್ಷಾ ಬಂಧನ ಹಬ್ಬ ಅಸ್ತಿತ್ವ ಬಂದಿತು ಎಂದು ಹೇಳಲಾಗುತ್ತಿದೆ.
ಈಗಿನ ಆಧುನಿಕ ಕಾಲದಲ್ಲಿಯೂ ಕೂಡ ಅದು ತನ್ನದೇ ಆದ ಆಕರ್ಷಣೆಯನ್ನು ಹೊಂದಿದೆ. ಹೆಣ್ಣು ಮಕ್ಕಳಿಗೆ ಅಣ್ಣ ಮತ್ತು ತಮ್ಮ ಜೀವನದ ಪ್ರತಿ ಮಜಲಿನಲ್ಲಿ ಕೂಡ ಪ್ರಭಾವ ಬೀರುತ್ತಾರೆ. ತಂದೆ ತಾಯಿಯ ಮುಂದೆ ಹೇಳಲಾಗದ ಸಮಸ್ಯೆಗಳಿಗೆ ಅಣ್ಣ ಬೆಸ್ಟ್ ಫ್ರೆಂಡ್ ಆಗಿ ಪರಿಹಾರ ಕೊಡುತ್ತಾನೆ. ಹೆಣ್ಣು ಮಕ್ಕಳಿಗೆ ಅಪ್ಪನ ನಂತರ ಅಣ್ಣನೇ ಹೀರೋ. ಈಗಿನ ಕಿಷ್ಟಕರ ಸಂಕೀರ್ಣ ಕಾಲದಲ್ಲಿಯೂ ಆಸ್ತಿ ವಿವಾದಗಳು ಇದ್ದಾಗಲೂ ಕೂಡ ಅಣ್ಣನ ಮೇಲಿನ ಪ್ರೀತಿ ಇದೇ ವಿಷಯಕ್ಕೆ ಇರುತ್ತದೆ.
ಜೀವನದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಅಣ್ಣ ತಾಯಿ ಸತ್ತರೂ ಸೋದರ ಮಾವ ಇರಬೇಕು ಎನ್ನುವುದನ್ನು ತೋರಿಸಿ ಕೊಡುತ್ತಾನೆ. ಕೇವಲ ಆಸ್ತಿಯ ಸಲುವಾಗಿ ಅಣ್ಣನ ಜೊತೆಗೆ ಜಗಳ ಕಾಯುವ ಹೆಣ್ಣು ಮಕ್ಕಳು ರಕ್ಷಾ ಬಂಧನದ ಮಹತ್ವವನ್ನು ಅರಿತು ಕೊಂಡರೆ ಸಾಕು, ಕೋರ್ಟಿನ ಎಷ್ಟೋ ಸಮಸ್ಯೆಗಳು ಮನೆಯಲ್ಲಿಯೇ ಬಗೆ ಹರಿಯುತ್ತವೆ.
ಎಲ್ಲ ಹೆಣ್ಣು ಮಕ್ಕಳಿಗೆ ಕೃಷ್ಣನಂತಹ ಒಬ್ಬ ಅಣ್ಣ ಇದ್ದರೂ ಸಾಕು. ದ್ರೌಪದಿಯಾಗುವ ನೋವಿನಿಂದ ಪಾರಾಗಬಹುದು. ಎರಡು ಎಳೆಯ ರಾಖಿ, ಒಂದು ಚಿಕ್ಕ ಗಿಫ್ಟ್, ನೋವು ತುಂಬಿದ ಮುಖದಲ್ಲಿ ಸಂತಸದ ಗೆರೆಯನ್ನು ಸೃಷ್ಟಿಸಿ ಬಿಡುತ್ತದೆ. ಜೀವನದಲ್ಲಿ ಬೆಂದಿರುವ ಎಷ್ಟೋ ಹೆಣ್ಣು ಮಕ್ಕಳಿಗೆ ರಕ್ಷಾ ಬಂದನ ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ಹಾಗೆ. ಅದು ಬದುಕುವ ಆಸೆಯನ್ನೇ ಸೃಷ್ಟಿಸಿ ಬಿಡುತ್ತದೆ.
ಎಲ್ಲ ಹೆಣ್ಣು ಮಕ್ಕಳಿಗೂ ಕೃಷ್ಣ ಎಂಬ ಅಣ್ಣ ಸಿಕ್ಕು, ಜೀವನ ಬಂಗಾರವಾಗಲಿ ಎಂದು ಹಾರೈಸೋಣ.
ಏನಂತೀರಾ?
-ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ