ಯುವ ಜನತೆಗೆ ಸರ್ವೋದಯದ ಕಲ್ಪನೆ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ

Upayuktha
0

ಬೆಂಗಳೂರು: ಕರ್ನಾಟಕ ಸರ್ವೋದಯ ಮಂಡಲದ ವತಿಯಿಂದ ಮಲ್ಲೇಶ್ವರದ ಎಂಎಲ್ಎ ಕಾಲೇಜಿನಲ್ಲಿ "ಇಂದಿನ ಮಕ್ಕಳಲ್ಲಿ ದೇಶಾಭಿಮಾನವನ್ನು ಬೆಳೆಸುವುದು" ಎಂಬ ಶೀರ್ಷಿಕೆ ಅಡಿಯಲ್ಲಿ  ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.


ಸರ್ವೋದಯ ಮಂಡಲ ಕಾರ್ಯದರ್ಶಿಗಳಾದ ಡಾ ಯ.ಚಿ. ದೊಡ್ಡಯ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ದೇಶದ ಮೇಲಿನ ಅಭಿಮಾನ ಮುಖ್ಯ ಎಂದು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.


ಲಯನ್ ಶ್ರೀನಿವಾಸ್  ಅವರು ನಿಮ್ಮ ಸುತ್ತಲಿನ ಪರಿಸರದ ಬಗ್ಗೆ, ಸಂಸ್ಕೃತಿಯ ಬಗ್ಗೆ, ಸಂಸ್ಕಾರದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ ಮತ್ತು ಇದರಿಂದ ದೇಶಾಭಿಮಾನ ಮೂಡುತ್ತದೆ ಎಂದರು. ರಾಮದಾಸ್ ಅವರು ದೇಶವನ್ನು ಪ್ರೀತಿಸುವಾಗ ದೇಶದ ಹಿರಿಯರನ್ನು, ಅವರ ಸಾಧನೆಯನ್ನು ಗೌರವಿಸುವುದು ಮುಖ್ಯವೆಂದು ಕಥೆ ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.


ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾoಶುಪಾಲ ಡಾ ಗಣಪತಿ ಹೆಗಡೆಯವರು ಮಾತನಾಡಿ 'ನಮ್ಮ ಮಕ್ಕಳಲ್ಲಿ ಸರ್ವ ಜ್ಞಾನದ ಉದಯವಾಗಲಿ' ಇಂತಹ ಹಲವಾರು ಸ್ಪರ್ಧೆಗಳು ಕಾಲೇಜಿನಲ್ಲಿ ನಡೆಯುವಂತಾಗಲಿ, ಆಯೋಜಕರಿಗೆ ಧನ್ಯವಾದಗಳನ್ನು ತಿಳಿಸಿದರು.


ವಿಷಯ ಮಂಡನೆ ಸ್ಪರ್ಧೆಯಲ್ಲಿ ಒಂಬತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಮೊದಲೇ ನೀಡಲಾದ ಐದು ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು. ಅದರಲ್ಲಿ ಉತ್ತಮ ವಿಷಯ ಪ್ರಸ್ತಾಪಿಸಿದ ಐವರಿಗೆ 500. ನಗದು ಬಹುಮಾನಗಳ ಜೊತೆಯಲ್ಲಿ ಪುಸ್ತಕ ಮತ್ತು ಮೆಡಲ್ ನೀಡಲಾಯಿತು. 



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top